ಭುವನೇಶ್ವರ (ಒಡಿಶಾ): ರಾಜ್ಯದಲ್ಲಿ ಕಾಡ್ಗಿಚ್ಚು ಹೆಚ್ಚುತ್ತಿರುವ ಕಾರಣದಿಂದ ಒಡಿಶಾ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲಾ ಕ್ಷೇತ್ರ ಅರಣ್ಯ ಅಧಿಕಾರಿಗಳ ರಜಾ-ದಿನಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಈಗಾಗಲೇ ಕಾಡ್ಗಿಚ್ಚಿಗೆ ಸಂಬಂಧಿಸಿದಂತೆ ಒಡಿಶಾದ ಬಿಜೆಪಿ ನಿಯೋಗ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿದ್ದು, ವಿಶೇಷವಾಗಿ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚನ್ನು ಉಲ್ಲೇಖಿಸಿದೆ.
-
Today Sh. @dpradhanbjp & other MP's from Odisha met me regarding Forest Fire in #SimlipalNationalPark & nearby.@moefcc is sending a committee of experts to Odisha to give technical advise &help out state forest dept. in effective management of forest fire incidents in the region pic.twitter.com/I0zEh5YCaL
— Prakash Javadekar (@PrakashJavdekar) March 10, 2021 " class="align-text-top noRightClick twitterSection" data="
">Today Sh. @dpradhanbjp & other MP's from Odisha met me regarding Forest Fire in #SimlipalNationalPark & nearby.@moefcc is sending a committee of experts to Odisha to give technical advise &help out state forest dept. in effective management of forest fire incidents in the region pic.twitter.com/I0zEh5YCaL
— Prakash Javadekar (@PrakashJavdekar) March 10, 2021Today Sh. @dpradhanbjp & other MP's from Odisha met me regarding Forest Fire in #SimlipalNationalPark & nearby.@moefcc is sending a committee of experts to Odisha to give technical advise &help out state forest dept. in effective management of forest fire incidents in the region pic.twitter.com/I0zEh5YCaL
— Prakash Javadekar (@PrakashJavdekar) March 10, 2021
ಸಿಮ್ಲಿಪಾಲ ಉದ್ಯಾನವನ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ಬೆಂಕಿಯನ್ನು ನಿಯಂತ್ರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಮಿತಿಯು ಗುರುವಾರ ಒಡಿಶಾಗೆ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದ ಒಡಿಶಾದ ಬಿಜೆಪಿ ಸಂಸದರ ನಿಯೋಗ ದೆಹಲಿಯಲ್ಲಿ ಭೇಟಿಯಾದ ನಂತರ ಕೇಂದ್ರ ಸರ್ಕಾರದಿಂದ ತಂಡವನ್ನು ಕಳುಹಿಸುವ ನಿರ್ಧಾರವನ್ನು ಕೈಗೊಂಡಿರುವುದಾಗಿ ಜಾವ್ಡೇಕರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.