ಭವಾನಿಪಟ್ಟಣ(ಒಡಿಶಾ): ಹೆಂಡತಿಯ ಅಗಲಿಕೆ ನೋವು ತಾಳಲಾರದೇ ಗಂಡನೊಬ್ಬ ಮೃತಪಟ್ಟಿರುವ ಹೆಂಡತಿಯ ಚಿತೆಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ಒಡಿಶಾದ ಭವಾನಿಪಟ್ಟಣದಲ್ಲಿ ನಡೆದಿದೆ. ಇದರಿಂದ 65 ವರ್ಷದ ನೀಲಮಣಿ ಸಾಬ್ರ ಸಾವನ್ನಪ್ಪಿದ್ದಾರೆ.
ಒಡಿಶಾದ ಕಾಲಹಂದಿ ಜಿಲ್ಲೆಯ ಗೋಲಮುಂಡದ ಸಿಯಾಲ್ ಜೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 60 ವರ್ಷದ ರಾಯಬರಿ ಸಾವನ್ನಪ್ಪಿದ್ದು, ಸಂಪ್ರದಾಯದ ಪ್ರಕಾರ ಅವರ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ನಾಲ್ವರು ಮಕ್ಕಳು ಹಾಗೂ ಸಂಬಂಧಿಕರು ಎಲ್ಲ ರೀತಿಯ ವಿಧಿ-ವಿಧಾನ ಮುಗಿಸಿದ ಬಳಿಕ ಸ್ನಾನ ಮಾಡಲು ಪಕ್ಕದ ನದಿಗೆ ತೆರಳಿದ್ದರು.
ಈ ವೇಳೆ ನೀಲಮಣಿ ನೋವು ತಾಳಲಾರದೇ ಹೊತ್ತಿ ಉರಿಯುತ್ತಿದ್ದ ಹೆಂಡತಿಯ ಚಿತೆಗೆ ಹಾರಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿರುವ ಕಾರಣ ಪ್ರಾಣಪಕ್ಷಿ ಹಾರಿ ಹೋಗಿದೆ.
ನೀಲಮಣಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾಗಿದ್ದು, ಹೆಂಡತಿ ಸಾವಿನಿಂದಾಗಿ ಆಘಾತಕ್ಕೊಳಗಾಗಿದ್ದರು. ಅದೇ ನೋವಿನಿಂದಲೇ ಹೆಂಡತಿ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ.. ಪ್ರತಿ ಕ್ವಿಂಟಲ್ಗೆ 290 ರೂ. FRP ಏರಿಕೆ!
ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಘಟನೆ ಬಗ್ಗೆ ಕುಟುಂಬ ಸದಸ್ಯರು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಆದರೆ, ಘಟನೆ ಬಗ್ಗೆ ತಿಳಿಸಿದ್ದಾರೆಂದು ಎಂದು ಹೇಳಿದ್ದಾರೆ.