ಕಟಕ್ (ಒಡಿಶಾ): ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದಂಪತಿಯನ್ನು ಅಪರಾಧಿಗಳೆಂದು ಘೋಷಿಸಿರುವ ಕಟಕ್‌ನ ಪೋಕ್ಸೊ ನ್ಯಾಯಾಲಯವು ಭಾನುವಾರ ಅವರಿಬ್ಬರಿಗೆ ಶಿಕ್ಷೆ ವಿಧಿಸಿದೆ.
2019ರಲ್ಲಿ ಬಿಡನಾಸಿ ಪೊಲೀಸ್ ವ್ಯಾಪ್ತಿಯ ಸತಿಚೌರಾ ಪ್ರದೇಶದಲ್ಲಿ ಈ ಪ್ರಕರಣ ನಡೆದಿತ್ತು. ಅಪರಾಧಿ ಅಮಿತ್ ಬಿಂಧನಿಗೆ ಜೀವಾವಧಿ ಶಿಕ್ಷೆ ಮತ್ತು ಆತನ ಪತ್ನಿ ಆಶಾ ಲೋಹರ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಧೀಶ ಗಯಾಧರ ಪಾಂಡಾ ಈ ತೀರ್ಪು ನೀಡಿದ್ದಾರೆ.
ಪೋಕ್ಸೊ ನ್ಯಾಯಾಲಯ ಲೋಹರ್‌ಗೆ 5,000 ರೂಪಾಯಿ ದಂಡವನ್ನೂ ವಿಧಿಸಿದೆ. ದಂಡ ಪಾವತಿಸುವಲ್ಲಿ ವಿಫಲವಾದ್ರೆ ಮತ್ತೆ ಆರು ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪ್ರತಿಮೆ ಸ್ಥಾಪನೆ ಸಾಕಾಗಲ್ಲ.. ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ : ಕೇಂದ್ರಕ್ಕೆ ದೀದಿ ಕರೆ
ಬಾಲಕಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಸೂಚಿಸಿದ್ದಾರೆ. ಪರಿಹಾರದ ಮೊತ್ತದಲ್ಲಿ 3 ಲಕ್ಷ ರೂ.ಗಳನ್ನು ಅಪ್ರಾಪ್ತೆ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿ ಇಡಬೇಕು ಮತ್ತು 2 ಲಕ್ಷ ರೂ.ಗಳನ್ನು ಆಕೆಯ ಪೋಷಕರಿಗೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ವಿಶೇಷ ನ್ಯಾಯಾಲಯವು 20 ಸಾಕ್ಷ್ಯಚಿತ್ರಗಳ ಮತ್ತು 12 ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಈ ತೀರ್ಪು ಪ್ರಕಟಿಸಿದೆ. ಬಿಂಧನಿ ಮತ್ತು ಲೋಹರ್ ಕಟಕ್‌ನ ಸತಿಚೌರಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಬಾಲಕಿ ತನ್ನ ಕುಟುಂಬದೊಂದಿಗೆ ಹತ್ತಿರದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಳು. ಜುಲೈ 18, 2019ರಂದು ದಂಪತಿ ಬಾಲಕಿಯನ್ನು ಅಪಹರಿಸಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ