ETV Bharat / bharat

UNSC ಅಧ್ಯಕ್ಷತೆ ವಹಿಸಿ ನಮೋ ಮಾತು... ಕಡಲ್ಗಳ್ಳತನಕ್ಕೆ ಸಮುದ್ರ ಮಾರ್ಗ ದುರ್ಬಳಕೆ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದ್ದು, ಕಡಲ ತೀರದ ಸಮಸ್ಯೆಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದರು.

PM Modi
PM Modi
author img

By

Published : Aug 9, 2021, 8:40 PM IST

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸ ಸಭೆಯಲ್ಲಿ ನಮೋ ಕಡಲ ತೀರದ ಸಮಸ್ಯೆ ಹಾಗೂ ಸಮುದ್ರ ಸುರಕ್ಷತೆ ಹೆಚ್ಚಿಸುವ ವಿಷಯದ ಮೇಲೆ ಮಾತನಾಡಿದರು. ವಿಶೇಷವೆಂದರೆ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿರುವ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನಮೋ ಪಾತ್ರರಾಗಿದ್ದಾರೆ.

UNSC ಅಧ್ಯಕ್ಷತೆ ವಹಿಸಿ ನಮೋ ಮಾತು

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಡಲ್ಗಳ್ಳತನ ಹಾಗೂ ಭಯೋತ್ಪಾದನೆಗೆ ಸಮುದ್ರ ಮಾರ್ಗ ಹೆಚ್ಚು ದುರ್ಬಳಿಕೆಯಾಗುತ್ತಿದೆ ಎಂದು ತಿಳಿಸಿದರು. ಕಡಲ ಭದ್ರತೆ ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಸಹಕಾರ ಅಗತ್ಯವಾಗಿರಬೇಕು ಎಂದರು.

ಸಮುದ್ರ ಮಾರ್ಗ ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿ, ಈ ಸಾಗರ ನಮ್ಮ ಭವಿಷ್ಯದ ದೃಷ್ಟಿಯಿಂದ ಅತಿಮುಖ್ಯವಾಗಿದ್ದು, ಹೊಸ ಸವಾಲುಗಳೊಂದಿಗೆ ವ್ಯಾಪಾರ ಮಾರ್ಗ ಭದ್ರಪಡಿಸಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಸಮುದ್ರದ ಭದ್ರತೆ ಹೆಚ್ಚಿಸಬೇಕಾಗಿರುವ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಅನೇಕ ರೀತಿಯ ಸವಾಲು ಎದುರಿಸುವಂತಾಗಿದೆ ಎಂದರು. ನಾನಾ ಭಯೋತ್ಪಾದಕ ಸಂಘಟನೆಗಳು ಸಮುದ್ರವನ್ನ ಕಳ್ಳಸಾಗಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಕಡಲ್ಗಳ್ಳತನ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.

  • ಕಡಲ ಭದ್ರತೆ ಸುರಕ್ಷತೆಗೆ ಐದು ಅಂಶ ಮಂಡಿಸಿದ ನಮೋ

1) ಸಮುದ್ರದ ಮೂಲಕ ಕಾನೂನು ಬದ್ಧ ವ್ಯಾಪಾರ ನಡೆಸಲು ನಿರ್ಬಂಧ ತೆಗೆದುಹಾಕುವುದು

2) ಎರಡು ದೇಶಗಳ ನಡುವಿನ ಕಡಲ ವಿವಾದ ಇತ್ಯರ್ಥ ಶಾಂತಿಯುತ,ಅಂತಾರಾಷ್ಟ್ರೀಯ ಕಾನೂನಿಯ ಆಧಾರದ ಮೇಲೆ ಕ್ರಮ

3) ಜವಾಬ್ದಾರಿಯುತ ಕಡಲ ಸಂಪರ್ಕ ಪ್ರೋತ್ಸಾಹ

4) ಭಯೋತ್ಪಾದಕರಿಂದ ಉಂಟಾಗುವ ಬೆದರಿಕೆ ಒಟ್ಟಾಗಿ ಎದುರಿಸುವುದು, ನೈಸರ್ಗಿಕ ವಿಕೋಪ ರಕ್ಷಣೆ

5) ಕಡಲ ಪರಿಸರ ಮತ್ತು ಕಡಲ ಸಂಪನ್ಮೂಲ ರಕ್ಷಣೆ ಮಾಡುವುದು ಅಗತ್ಯ

ಸಮುದ್ರ ವ್ಯಾಪಾರಕ್ಕೆ ಹಾಕಿರುವ ಎಲ್ಲ ಅಡೆತಡೆ ತೆಗೆದು ಹಾಕುವ ಅವಶ್ಯಕತೆ ಇದ್ದು, ಇಲ್ಲಿನ ಅಡೆತಡೆ ಜಾಗತಿಕ ಸವಾಲಾಗಿ ಪರಿಣಮಿಸಬಹುದು ಎಂದು ತಿಳಿಸಿದರು. ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಅನೇಕ ರಾಷ್ಟ್ರದ ಪ್ರಮುಖರು ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.