ETV Bharat / bharat

ಉಸಿರುಗಟ್ಟುವಿಕೆ ಸಮಸ್ಯೆಗೆ ಬೊಜ್ಜು ಕಾರಣ.. ಸುಖನಿದ್ರೆಗೆ ದೇಹದ ತೂಕ ಕಾಪಾಡಿಕೊಳ್ಳಿ - ಸ್ಲೀಪ್​ ಅಮ್ನಿಯಾದಿಂದ ಗೊರಕೆ ಸಮಸ್ಯೆ

ನಿದ್ರೆಯ ವೇಳೆ ಮೂಗು ಕಟ್ಟಿಕೊಂಡು ಬಾಯಿಯಿಂದ ಉಸಿರಾಡುವುದು ಅಸ್ವಸ್ಥತೆಯ ಸಂಕೇತ. ಇದು ವ್ಯಕ್ತಿ ವಿಪರೀತ ಊದಿಕೊಂಡಾಗ ಅಂದರೆ ಬೊಜ್ಜಿನ ಸಮಸ್ಯೆ ಉಂಟಾದಾಗ ಎದುರಿಸುವ ಕಿರಿಕಿರಿಯಾಗಿದೆ. ಇದರಿಂದ ಕೆಲವೊಮ್ಮೆ ಗೊರಕೆ ಬರುವುದು, ಏದುಸಿರು ಬಿಟ್ಟಾಗ ಸದ್ದು ಬರುವ ಸಾಧ್ಯತೆ ಇರುತ್ತದೆ.

sleep-apnea
ಉಸಿರುಗಟ್ಟುವಿಕೆ
author img

By

Published : Feb 17, 2022, 8:16 PM IST

ನಿದ್ರೆಯ ವೇಳೆ ಮೂಗು ಕಟ್ಟಿಕೊಂಡು ಬಾಯಿಯಿಂದ ಉಸಿರಾಡುವುದು ಅಸ್ವಸ್ಥತೆಯ ಸಂಕೇತ. ಇದು ವ್ಯಕ್ತಿ ವಿಪರೀತ ಊದಿಕೊಂಡಾಗ ಅಂದರೆ ಬೊಜ್ಜಿನ ಸಮಸ್ಯೆ ಉಂಟಾದಾಗ ಎದುರಿಸುವ ಕಿರಿಕಿರಿಯಾಗಿದೆ. ಇದರಿಂದ ಕೆಲವೊಮ್ಮೆ ಗೊರಕೆ ಬರುವುದು, ಏದುಸಿರು ಬಿಟ್ಟಾಗ ಸದ್ದು ಬರುವ ಸಾಧ್ಯತೆ ಇರುತ್ತದೆ. ಹೀಗೆ ನಿದ್ರಾವಸ್ಥೆಯ ವೇಳೆ ಮೂಗು ಕಟ್ಟಿಕೊಂಡು ಏದುಸಿರು ಬಿಡುವುದನ್ನು ತಡೆಯಬೇಕಾದರೆ, ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡಲೇಬೇಕು ಎಂಬುದು ವೈದ್ಯರ ಸಲಹೆಯಾಗಿದೆ.

ಈ ಬಗ್ಗೆ ಹೈದರಾಬಾದ್​ನ ವಿಐಎನ್​ಎನ್​ ಆಸ್ಪತ್ರೆಯ ವೈದ್ಯರಾದ ಡಾ. ರಾಜೇಶ್ ವುಕ್ಕಲಾ ಅವರು ಹೇಳುವಂತೆ, ನಾವು ಉಸಿರಾಡುವಾಗ ಆಮ್ಲಜನಕ ಮತ್ತು ಉಸಿರು ಬಿಟ್ಟಾಗ ಕಾರ್ಬನ್​ ಡೈ ಆಕ್ಸೈಡ್​ ಮಟ್ಟ ಹೊಂದಿಕೆಯಾಗಬೇಕು. ಸೈನಸ್​, ಮೂಗು, ಕುತ್ತಿಗೆ ರಚನೆಯಲ್ಲಿ ದೋಷವಿದ್ದಾಗ ಈ ಸ್ಲೀಪ್​ ಅಮ್ನಿಯಾ (ಉಸಿರುಗಟ್ಟುವಿಕೆ) ಸಮಸ್ಯೆ ತಲೆದೋರಲಿದೆ ಎನ್ನುತ್ತಾರೆ.

ಸ್ಲೀಪ್​ ಅಪ್ನಿಯಾ ಸಮಸ್ಯೆಯ ಕುರುಹುಗಳಿವು

  • ಜೋರಾಗಿ ಗೊರಕೆ ಹೊಡೆಯುವುದು
  • ದೇಹ ದಣಿದ ಸ್ಥಿತಿಯಲ್ಲೇ ಎಚ್ಚರಗೊಳ್ಳುವುದು
  • ಲಘು ತಲೆನೋವು
  • ಏಕಾಗ್ರತೆಯ ಕೊರತೆ
  • ದೀರ್ಘಕಾಲದ ಆಯಾಸ
  • ದೈನಂದಿನ ಚಟುವಟಿಕೆಗಳಲ್ಲಿ ಉದಾಸೀನ
  • ಉಸಿರುಗಟ್ಟಿದಂತಾಗಿ ಹಠಾತ್ ಎಚ್ಚರವಾಗುವುದು
  • ಉಸಿರಾಡಲು ಏದುಸಿರು ಬಿಡುವುದು
  • ಒತ್ತಡ

ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಹೈಪೋಥೈರಾಯ್ಡಿಸಮ್, ಚಯಾಪಚಯ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಈ ಸ್ಲೀಪ್​ ಅಪ್ನಿಯಾ ತೊಂದರೆ ಎದುರಿಸುತ್ತಾರೆ. ಉಚ್ವಾಸ, ನಿಶ್ವಾಸದ ವ್ಯತ್ಯಯದಿಂದ ಮೆದುಳು, ಹೃದಯ, ಶ್ವಾಸಕೋಶಕ್ಕೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ವೈದ್ಯರ ಎಚ್ಚರಿಕೆಯಾಗಿದೆ.

ಸ್ಲೀಪ್​ ಅಪ್ನಿಯಾದಿಂದಾಗುವ ಸಮಸ್ಯೆಯೇನು?

  • ಬೊಜ್ಜು
  • ದೊಡ್ಡ ಕುತ್ತಿಗೆ (17 ಇಂಚುಗಳಿಗಿಂತ ಹೆಚ್ಚು)
  • ಡಿವೈಟೆಡ್​ ನಾಸಲ್​ ಸೆಪ್ಟಮ್​(DNS)
  • ಅಲರ್ಜಿ
  • ಸೈನುಟಿಸ್
  • ಉಬ್ಬಸ

ರೋಗನಿರ್ಣಯ ಹೇಗೆ?

ವೈದ್ಯಕೀಯವಾಗಿ ಪಾಲಿಸೋಮ್ನೋಗ್ರಫಿ ಎಂದು ಕರೆಯಲ್ಪಡುವ ನಿದ್ರೆಯ ಅಧ್ಯಯನದಿಂದ ಸ್ಲೀಪ್ ಅಪ್ನಿಯಾವನ್ನು ಪತ್ತೆ ಮಾಡಬಹುದು. ಮನೆ, ಆಸ್ಪತ್ರೆ ಅಥವಾ ಲ್ಯಾಬ್‌ನಲ್ಲಿ ವ್ಯಕ್ತಿಗೆ ಯಂತ್ರವನ್ನು ಅಳವಡಿಸುವುದರ ಮೂಲಕ ವ್ಯಕ್ತಿಯ ನಿದ್ರೆಯ ಮೇಲೆ ನಿಗಾ ಇಡಲಾಗುತ್ತಿದೆ. ಈ ವೇಳೆ ಆ ವ್ಯಕ್ತಿಯು ಹೇಗೆ ಉಸಿರಾಡುತ್ತಿದ್ದಾನೆ, ಎಷ್ಟು O2 ಮತ್ತು CO2 ಬಳಸುತ್ತಾನೆ, ಹೃದಯ ಬಡಿತದ ವೇಗ, ರಕ್ತದೊತ್ತಡ ಹೇಗಿದೆ ಎಂಬುದನ್ನು ನಿಗಾವಣೆಯಲ್ಲಿಡುತ್ತಾರೆ.

ಅಧ್ಯಯನದ ವೇಳೆ ಉಸಿರುಗಟ್ಟುವಿಕೆಗೆ ಸೂಚ್ಯಂಕವನ್ನು ನೀಡಲಾಗುತ್ತದೆ. ವ್ಯಕ್ತಿ ಎಷ್ಟು ಬಾರಿ ಉಸಿರಾಟ ನಿಲ್ಲಿಸಿದ್ದಾನೆ ಎಂಬುದರ ಮೇಲೆ ಅಂಕ ನೀಡಲಾಗುತ್ತದೆ. 6.5 ವರೆಗಿನ ಲೆಕ್ಕಾಚಾರ ಸಾಮಾನ್ಯ ಎಂದು ಹೇಳಲಾದರೆ, ಅದಕ್ಕಿಂತ ಹೆಚ್ಚು ಅಂಕ ಬಂದಲ್ಲಿ ಅವರು ಸ್ಲೀಪ್​ ಅಪ್ನಿಯಾದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ದೃಢೀಕರಿಸುತ್ತಾರೆ.

ಮೂಗಿನ ರಚನೆಯಲ್ಲಿ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುವುದು, ಬೊಜ್ಜನ್ನು ಕರಗಿಸುವುದರ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು. ಒಂದು ವೇಳೆ ವ್ಯಕ್ತಿಗೆ ವಯಸ್ಸಾಗಿದ್ದರೆ ಅಥವಾ ಬೇರೆ ಸಮಸ್ಯೆಗಳಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕವೂ ಇದನ್ನು ದೂರ ಮಾಡಬಹುದಾಗಿದೆ.

ಇದಲ್ಲದೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಪ್ರಾಣಾಯಾಮ, ಯೋಗ ಅಥವಾ ಏರೋಬಿಕ್ಸ್ ಅನ್ನು ಅಭ್ಯಾಸ ಮಾಡುವುದು. ಶಯನದ ವೇಳೆ ಪಲ್ಲಟಗೊಳ್ಳುವುದು ಕೂಡ ಸಮಸ್ಯೆಯ ಪರಿಹಾರಕ್ಕೆ ದಾರಿಗಳು.

ಓದಿ: ಲಸ್ಸಾ ಜ್ವರ ನಿಜಕ್ಕೂ ಗಂಭೀರವೇ?.. ಇದರ ಲಕ್ಷಣಗಳೇನು ಗೊತ್ತೇ?

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.