ETV Bharat / bharat

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್​ ಪ್ರೇಮಿ - ಎರ್ನಾಕುಲಂ ಕ್ರೈಂ ನ್ಯೂಸ್​

ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದಳೆಂದು ಯುವತಿಗೆ ಚಾಕುವಿನಿಂದ ಇರಿದ ಯುವಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಪ್ರೀತಿ ನಿರಾಕರಸಿದಕ್ಕೆ ಕೊಲೆ
ಪ್ರೀತಿ ನಿರಾಕರಸಿದಕ್ಕೆ ಕೊಲೆ
author img

By ETV Bharat Karnataka Team

Published : Sep 14, 2023, 5:03 PM IST

ಎರ್ನಾಕುಲಂ (ಕೇರಳ): ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಪೆರುಂಬವೂರ್​ನಲ್ಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ರಾಯಮಂಗಲ ಮೂಲದ ಅಲ್ಕಾ (19) ಮೃತ ಯುವತಿ. ಕಳೆದ ಎಂಟು ದಿನಗಳ ಹಿಂದೆ ಯುವತಿ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಯುವಕ ಚಾಕುವಿನಿಂದ ಇರಿದಿದ್ದ.

ಪೆರುಂಬವೂರ್‌ನ ರಾಜಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಲ್ಕಾ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಎಲ್ಡೋಸ್ ಅಲಿಯಾಸ್ ತುಳಸಿ ಎಂಬಾತ ಅಲ್ಕಾ ಮನೆಗೆ ನುಗ್ಗಿ, ಯುವತಿ ಸೇರಿದಂತೆ ಅವಳ ಅಜ್ಜ, ಅಜ್ಜಿಯ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಲ್ಕಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಅಲ್ಕಾಗೆ ತುಳಸಿ ಎಂಬ ಯುವಕ ಪ್ರಪೋಸ್ ಮಾಡಿದ್ದ. ಆದರೆ ಅಲ್ಕಾ ಅದನ್ನು ನಿರಾಕರಿಸಿದ್ದಳು. ದಿನವೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ತುಳಸಿ ಕಿರುಕುಳದಿಂದ ಮೊಬೈಲ್ ನಂಬರ್ ಕೂಡ ಅಲ್ಕಾ ಬದಲಾಯಿಸಿದ್ದಳು. ಇದರಿಂದ ಕೋಪಗೊಂಡ ತುಳಸಿ, ಅಲ್ಕಾಳನ್ನು ಕೊಲ್ಲುವ ಉದ್ದೇಶದಿಂದ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಅಲ್ಕಾಳನ್ನು ಕಾಪಾಡಲು ಬಂದ ಓಸೆಪ್ ಮತ್ತು ಪತ್ನಿ ಚಿನ್ನಮ್ಮ ಎನ್ನುವವರ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ ಯುವಕ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಲ್ಕಾಳ ಕುಟುಂಬಸ್ಥರು ತಿಳಿಸಿದ್ದಾರೆ.

ನವದೆಹಲಿಯಲ್ಲೂ ಇಂತಹದ್ದೇ ಘಟನೆ: ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಪಾಗಲ್​ ಪ್ರೇಮಿಯೊಬ್ಬ ಯುವತಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದಿತ್ತು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿಗೆ ಚಾಕುವಿನಿಂದ ಕತ್ತು ಸೀಳಿ, ಬಳಿಕ ಯುವಕ ಕೋಣೆಯೊಂದರಲ್ಲಿ ಹೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಮಹಾರಾಷ್ಟ್ರದಲ್ಲೂ ಇಂತಹದ್ದೇ ಘಟನೆ: ಥಾಣೆಯ ಕಲ್ಯಾಣ್ ಪೂರ್ವದ ತಿಸ್‌ಗಾಂವ್ ಪ್ರದೇಶದಲ್ಲಿ 20 ವರ್ಷದ ಯುವಕನೊಬ್ಬ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಘಟನೆ ಕಳೆದ ತಿಂಗಳು ನಡೆದಿತ್ತು. ಗಾಯಾಳು ಬಾಲಕಿಗೆ ಆಸ್ಪತ್ರೆಗ ದಾಖಲಿಸಿದ ಚಿಕಿತ್ಸೆ ನೀಡಲಾಗಿತ್ತಾದರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಳು. ಪ್ರೀತಿ ನಿರಾಕರಿಸಿದಳೆಂದು ಆರೋಪಿ ಯುವಕ ಹತ್ಯೆ ಮಾಡಿದ್ದ ಎಂದು ಮೃತಳ ತಾಯಿ ಆರೋಪಿಸಿದ್ದರು.

ಇದನ್ನೂ ಓದಿ: ಹಣದ ಬಾಕ್ಸ್ ಅಪರಿಚಿತ ಸ್ಕೂಟರ್ ಮೇಲಿಟ್ಟು ಮರೆತ ವ್ಯಕ್ತಿ: ಅದೃಷ್ಟವೆಂದು ಸಿಕ್ಕ ಬಾಕ್ಸ್​​ನೊಂದಿಗೆ​ ಪರಾರಿಯಾಗಿದ್ದ ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.