ವಲ್ಸಾದ್(ಗುಜರಾತ್): ಮಹಾಮಾರಿ ಕೊರೊನಾ ವೈರಸ್ ರೌದ್ರನರ್ತನ ದೇಶದಲ್ಲಿ ಜೋರಾಗಿದೆ. ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಸಾವಿರಾರು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದರ ಮಧ್ಯೆ ಕೊರೊನಾ ವಾರಿಯರ್ಸ್ ಕೂಡ ಡೆಡ್ಲಿ ವೈರಸ್ಗೆ ತಮ್ಮ ಪ್ರಾಣ ಕಳೆದಕೊಳ್ಳುತ್ತಿದ್ದಾರೆ.
ಗುಜರಾತ್ನ ಆಸ್ಪತ್ರೆವೊಂದರಲ್ಲಿ ದಾದಿಯಾಗಿ ಕೆಲಸ ಮಾಡ್ತಿದ್ದ ಮನಿಷಾ ಬೆನ್ ಇದೀಗ ರಕ್ಕಸ ಸೋಂಕಿಗೆ ಬಲಿಯಾಗಿದ್ದಾರೆ. ಕಪ್ರ ತಾಲೂಕಿನ ಮೋಟಪಾಂಧ ನಿವಾಸಿ ದಿಲೀಪ್ ಪಟೇಲ್ ಅವರ ಪುತ್ರಿ ಮನಿಷಾಬೆನ್ ಸಾವನ್ನಪ್ಪಿದ್ದಾಳೆ. ಕಳೆದ ಕೆಲ ದಿನಗಳಿಂದ ವಾಪಿಯ ಗುಂಜನ್ ಪ್ರದೇಶದ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡ್ತಿದ್ದರು. ಅವರ ವಿವಾಹವನ್ನ ಏಪ್ರಿಲ್ 23ರಂದು ನಿಗದಿ ಮಾಡಿದ್ದರು.
ಆದರೆ, ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದ ಮನಿಷಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಈಗಾಗಲೇ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಸಹ ಹಂಚಿಕೆ ಮಾಡಿದ್ದಾರೆ.
ಇದನ್ನೂ ಓದಿ: ಕಳ್ಳ ಬೆಕ್ಕಿನಂತೆ ಬಂದು ಹಣ್ಣಿನ ಬಾಕ್ಸ್ ಕದ್ದು ಪರಾರಿಯಾದ ಪೊಲೀಸಪ್ಪ.. ವಿಡಿಯೋ!
ಏಕಾಏಕಿ ಅನಾರೋಗ್ಯಕ್ಕೊಳಗಾದ ಅವರಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ, ಅವರಿಗೆ ಜೀವ ರಕ್ಷಕ ಚುಚ್ಚು ಮದ್ದಿನ ಅಗತ್ಯವಿತ್ತು. ಕುಟುಂಬದ ಸದಸ್ಯರು ಅದನ್ನ ತೆಗೆದುಕೊಂಡು ಬರುವ ಉದ್ದೇಶದಿಂದ ಸೂರತ್ಗೆ ಹೋದರು. ಅಲ್ಲಿಂದ ವಾಪಸ್ ಆಗುವಷ್ಟರಲ್ಲಿ ಮನಿಷಾ ಸಾವನ್ನಪ್ಪಿದ್ದಾರೆ. ಮದುವೆ ಸಮಾರಂಭಕ್ಕೆ ಎರಡು ದಿನ ಬಾಕಿ ಇರುವಾಗಲೇ ಆಕೆ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಮೌನ ಆವರಿಸಿದೆ.
ಇದೇ ವಿಚಾರವಾಗಿ ಮಾತನಾಡಿರುವ ಮನಿಷಾ ಕುಟುಂಬ ಯಾವುದೇ ಕಾರಣಕ್ಕೂ ಕೊರೊನಾ ಹಗುರವಾಗಿ ತೆಗೆದುಕೊಳ್ಳಬೇಡಿ. ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಮನವಿ ಮಾಡಿಕೊಂಡಿದೆ.