ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ಲಸಿಕಾ ನೀತಿಯ ಬಗ್ಗೆ ಕುಟುಕಿದ್ದಾರೆ. ಲಸಿಕೆಗಳ ಲಭ್ಯತೆ ಇಲ್ಲದಿರುವುದನ್ನು ಪ್ರಶ್ನಿಸಿದ ಅವರು, ಇತ್ತೀಚಿನ ಸಂಪುಟ ಪುನರ್‌ರಚನೆಯೊಂದಿಗೆ ಈ ಸಮಸ್ಯೆಯನ್ನು ಲಿಂಕ್ ಮಾಡಿದ್ದಾರೆ.
"ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಲಸಿಕೆಗಳಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, "ಲಸಿಕೆಗಳು ಎಲ್ಲಿವೆ?" ಎಂದು ಪ್ರಶ್ನಿಸಿದ್ದಾರೆ.
-
मंत्रियों की संख्या बढ़ी है,
— Rahul Gandhi (@RahulGandhi) July 11, 2021 " class="align-text-top noRightClick twitterSection" data="
वैक्सीन की नहीं!#WhereAreVaccines pic.twitter.com/gWjqHUVdVC
">मंत्रियों की संख्या बढ़ी है,
— Rahul Gandhi (@RahulGandhi) July 11, 2021
वैक्सीन की नहीं!#WhereAreVaccines pic.twitter.com/gWjqHUVdVCमंत्रियों की संख्या बढ़ी है,
— Rahul Gandhi (@RahulGandhi) July 11, 2021
वैक्सीन की नहीं!#WhereAreVaccines pic.twitter.com/gWjqHUVdVC
ಈ ಹಿಂದೆ ರಾಹುಲ್ ಗಾಂಧಿ, ದಯವಿಟ್ಟು ಎಲ್ಲಾ ಮುನ್ನೆಚ್ಚರಿಕೆ ಪ್ರೋಟೋಕಾಲ್‌ಗಳನ್ನು ಅನುಸರಿಸಿ. ಕೋವಿಡ್ ಇನ್ನೂ ಮುಗಿದಿಲ್ಲ ಎಂದು ಭಾರತದ ಜನರಿಗೆ ಮನವಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಜೂನ್ 7 ರಂದು ಸಚಿವ ಸಂಪುಟ ವಿಸ್ತರಿಸಿದ್ದು, ಈಗ ಕೇಂದ್ರದಲ್ಲಿ 77 ಮಂತ್ರಿಗಳಿದ್ದಾರೆ. ಇದು ಈ ಸರ್ಕಾರದ ಅಧಿಕಾರಾವಧಿಯಲ್ಲಿ ಅತ್ಯಧಿಕವಾಗಿದೆ. ಭಾರತದ ಸದ್ಯದ ಒಟ್ಟು ವ್ಯಾಕ್ಸಿನೇಷನ್ ವ್ಯಾಪ್ತಿ 37.60 ಕೋಟಿಗಳನ್ನು ಮೀರಿದೆ.
ಇದನ್ನೂ ಓದಿ: ಗೋವಾದಲ್ಲಿ ಕೊರೊನಾ ಕರ್ಫ್ಯೂ ಕಾಲಾವಧಿ ಜುಲೈ 19 ರವರೆಗೆ ವಿಸ್ತರಣೆ