ನವದೆಹಲಿ: ಮೀಟೂ ಪ್ರಕರಣದಲ್ಲಿ ಸತತ ಎರಡು ವರ್ಷದಿಂದ ನಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಮತ್ತು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧದ ಮಾನನಷ್ಟ ಪ್ರಕರಣದ ತೀರ್ಪು ಇಂದು ಬರುವ ಸಾಧ್ಯತೆಯಿದೆ.
ಪ್ರಕರಣದ ಸಂಬಂಧ ಫೆ.10 ರಂದು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವಿಂದ್ರ ಕುಮಾರ್ ಇಬ್ಬರ ವಾದ - ಪ್ರತಿವಾದ ಆಲಿಸಿದ್ದರು. ಅಕ್ಬರ್ ಮತ್ತು ರಮಣಿ ಅವರು ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಫೆ.17ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು. ಅಂದರೆ ಪ್ರಕರಣದ ತೀರ್ಪು ಬರುವ ಸಾಧ್ಯತೆಯಿದೆ.
2018 ರಲ್ಲಿ ಪ್ರಿಯಾ ರಮಣಿ #MeToo ಅಭಿಯಾನದ ವೇದಿಕೆ ಮೂಲಕ ತಮಗೆ ಹಿಂದೊಮ್ಮೆ ಆಗಿದ್ದ ಲೈಂಗಿಕ ಕಿರುಕುಳದ ಘಟನೆಯನ್ನು ಬಹಿರಂಗಪಡಿಸಿ, ಎಂಜೆ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಜೆ ಅಕ್ಬರ್ 2018 ರ ಅಕ್ಟೋಬರ್ 15 ರಂದು ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಓದಿ: MeToo ಪ್ರಕರಣ: ಪತ್ರಕರ್ತೆ ರಮಣಿ ವಿರುದ್ಧದ ಮಾನನಷ್ಟ ಮೊಕದ್ದಮೆ ತೀರ್ಪು ಕಾಯ್ದಿರಿಸಿದ ಕೋರ್ಟ್
ಈ ಪ್ರಕರಣದ ಬೆನ್ನಲ್ಲೆ ಅಕ್ಟೋಬರ್ 17, 2018ರಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಮೀಟೂ ಆರೋಪ ನಿರಾಕರಿಸಿ ರಮಣಿ ವಿರುದ್ಧ ದೂರು ದಾಖಲಿಸಿದ್ದರು.