ETV Bharat / bharat

LaalSingh Chaddha ಸಿನಿಮಾಗೆ ಮತ್ತೆ ಸಂಕಷ್ಟ: ಅಭಿಯಾನ ಆರಂಭಿಸಿದ ನೆಟಿಜನ್ಸ್

'ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ'ಯ ಖಾನ್​ ಹೇಳಿಕೆಯನ್ನು ಕೆಲವು ನೆಟ್ಟಿಗರು ಹಂಚಿಕೊಂಡಿದ್ದಾರೆ. ಇದನ್ನು ಟ್ರೆಂಡ್ ಸಹ ಮಾಡಿದ್ದು, ಚಿತ್ರ ವೀಕ್ಷಣೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

author img

By

Published : Jul 31, 2022, 6:14 PM IST

ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಮತ್ತೇ ಸಂಕಷ್ಟ: ಅಭಿಯಾನ ಆರಂಭಿಸಿದ ನೆಟಿಜನ್ಸ್​!

ಮುಂಬೈ (ಮಹಾರಾಷ್ಟ್ರ): ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಮತ್ತೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ನೆಟಿಜನ್‌ಗಳು ಟ್ವಿಟ್ಟರ್‌ನಲ್ಲಿ #BoycottLaalSinghChaddha ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸುತ್ತಿದ್ದು, ಚಲನಚಿತ್ರವನ್ನು ವೀಕ್ಷಿಸದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

'ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ'ಯ ಖಾನ್​ ಹೇಳಿಕೆಯನ್ನು ಕೆಲವು ನೆಟ್ಟಿಗರು ಹಂಚಿಕೊಂಡಿದ್ದಾರೆ. ಈ ಹಿಂದೆ ಕರೀನಾ ಅವರ ಕೆಲವು ವಿವಾದಾತ್ಮಕ ಹೇಳಿಕೆಗಳು ಸಹ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿವೆ.

ಮುಂಬರುವ ಚಿತ್ರದ ಬಗ್ಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಚಿತ್ರದ ನಿರ್ಮಾಪಕರು ಮೇ ತಿಂಗಳಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಿದಾಗಲೂ ಅದೇ ಹ್ಯಾಶ್‌ಟ್ಯಾಗ್​ನಲ್ಲಿ ಈ ವಿಷಯ ಟ್ರೆಂಡಿಂಗ್ ಆಗಿತ್ತು.

2015 ರಲ್ಲಿ ಅಮೀರ್ ಖಾನ್ ಸಂದರ್ಶನವೊಂದರಲ್ಲಿ, 'ನಮ್ಮ ದೇಶವು ತುಂಬಾ ಸಹಿಷ್ಣುವಾಗಿದೆ, ಆದರೆ ಕೆಟ್ಟದ್ದನ್ನು ಹರಡುವ ಜನರಿದ್ದಾರೆ' ಎಂದು ಹೇಳಿದ್ದರು. ಅವರ ಪತ್ನಿ ಕಿರಣ್ ರಾವ್ ಅವರು ತಮ್ಮ ಮಕ್ಕಳ ಸುರಕ್ಷತೆಗಾಗಿ ದೇಶವನ್ನು ತೊರೆಯಲು ಯೋಚಿಸಿದ್ದಾರೆ ಎಂದು ಸಹ ಹೇಳಿ ಸುದ್ದಿಯಾಗಿದ್ದರು.

#LaalSinghChaddha ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಳೆಯ ಸಂದರ್ಶನದಿಂದ ಅವರ ಉಲ್ಲೇಖ ಮತ್ತು ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ನೆಟಿಜನ್‌ಗಳು 'ಹಿಂದೂ ವಿರೋಧಿ' ಮತ್ತು 'ರಾಷ್ಟ್ರ ವಿರೋಧಿ' ಎಂಬ ಶೀರ್ಷಿಕೆ ನೀಡುತ್ತಿದ್ದಾರೆ.

ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ ಲಾಲ್ ಸಿಂಗ್ ಚಡ್ಡಾ, ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ಚೈತನ್ಯ ಅಕ್ಕಿನೇನಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಫಾರೆಸ್ಟ್ ಗಂಪ್‌ನ ಅಧಿಕೃತ ರಿಮೇಕ್ ಆಗಿದೆ. ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಾಡೆಲ್, ಶ್ರೀನಗರದಲ್ಲಿ ಕೋಳಿ ಸಾಕಾಣಿಕೆ : ಯಶಸ್ಸು ಕಂಡ ಯುವಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.