ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಮ್ಯಾಗಜೀನ್ ಕವರ್ವೊಂದರ ಮೇಲೆ ತಮ್ಮ ನಗ್ನ ಚಿತ್ರಗಳನ್ನು ಪ್ರಕಟಿಸಿದ್ದು, ಹಾಗೂ ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಷಯ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಫೋಟೋಗಳಲ್ಲಿ ಸಂಪೂರ್ಣ ನಗ್ನರಾಗಿ ಪೋಸ್ ನೀಡಿರುವ ರಣವೀರ್, ಬರ್ಟ್ ರೆನಾಲ್ಡ್ ಅವರನ್ನು ಅನುಕರಣೆ ಮಾಡಲು ಪ್ರಯತ್ನಿಸಿದ್ದಾರೆ.
ರಣವೀರ್ ಅವರು ತಂಬಾ ಬೋಲ್ಡ್ ಆಗಿ ಈ ಕೆಲಸ ಮಾಡಿದ್ದಾರೆ ಎಂದು ಕೆಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಇನ್ನೂ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ನಟನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗತೊಡಗಿವೆ.
ಈ ಮುಂಚೆ ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ರಣವೀರ್ ವಿರುದ್ಧ ದೂರು ದಾಖಲಾಗಿತ್ತು. ಈಗ ಮತ್ತಿಬ್ಬರು ದೂರುದಾರರು ದೂರು ಸಲ್ಲಿಸಿದ್ದು, ರಣವೀರ್ಗೆ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ದಾರೆ. ಐಪಿಸಿ ಸೆಕ್ಷನ್ 292, 293, 297 ಮತ್ತು IT ಆ್ಯಕ್ಟ್ಗಳಡಿಯಲ್ಲಿ ರಣವೀರ್ ವಿರುದ್ಧ ಪ್ರಕರಣ ದಾಖಲಾಗಿದೆ. ರಣವೀರ್ ಅವರ ನಗ್ನ ಚಿತ್ರಗಳನ್ನು ನೋಡಿ ತನ್ನ ಮನಸ್ಸಿಗೆ ಆಘಾತವಾಗಿದೆ ಹಾಗೂ ನನ್ನ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ರಣವೀರ್ ಸಿಂಗ್ ನಗ್ನ ಫೋಟೋಶೂಟ್ ಪ್ರಕರಣದಲ್ಲಿ ದೂರುದಾರರ ವಕೀಲರಾಗಿರುವ ಅಖಿಲೇಶ್ ಚೌಬೇ ಮಾತನಾಡಿ, "ಬಹುತೇಕ ಚಿಕ್ಕಮಕ್ಕಳು ನಟನ ಅಭಿಮಾನಿಗಳಾಗಿದ್ದಾರೆ ಮತ್ತು ಅವರು ಮೊಬೈಲ್ ಕೂಡ ಬಳಸುತ್ತಾರೆ. ರಣವೀರ್ ಅವರ ಇಂಥ ಚಿತ್ರಗಳನ್ನು ನೋಡಿದರೆ ಆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಬಹುದು ಮತ್ತು ಇದು ಖಂಡಿತವಾಗಿಯೂ ತಪ್ಪು ಸಂದೇಶವನ್ನು ರವಾನಿಸಬಹುದು. ಅದಕ್ಕಾಗಿಯೇ ನಾವು ದೂರು ಸಲ್ಲಿಸಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದಕ್ಕೆ ಮುಂಬೈ ಪೊಲೀಸರಿಗೆ ಥ್ಯಾಂಕ್ಸ್. ಈಗ ಬಂಧನವೂ ಆಗಲಿ" ಎಂದು ಒತ್ತಾಯಿಸಿದ್ದಾರೆ.
ತನ್ನ ನಗ್ನ ಫೋಟೋಶೂಟ್ ಮುಖಾಂತರ ರಣವೀರ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಮುಂಬೈ ಪೊಲೀಸರಿಗೆ ಎರಡು ದೂರುಗಳು ಸಲ್ಲಿಕೆಯಾಗಿದ್ದು, ಇವುಗಳ ಆಧಾರದಲ್ಲಿ ಎಫ್ಐಆರ್ ದಾಖಲಿಸಬೇಕೆಂದು ಕೋರಲಾಗಿದೆ. ಎನ್ಜಿಓ ಒಂದರ ಪ್ರತಿನಿಧಿ ಹಾಗೂ ಮಹಿಳಾ ವಕೀಲರೊಬ್ಬರು ಚೆಂಬೂರ್ ಠಾಣೆಯಲ್ಲಿ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.