ETV Bharat / bharat

ಭಾಷಣದ ವೇಳೆ ಅಧಿಕಾರಿಯೊಬ್ಬರಿಗೆ ಕುಡಿಯುವ ನೀರು ತಂದು ಕೊಟ್ಟ ವಿತ್ತ ಸಚಿವೆ : ನೆಟ್ಟಿಗರಿಂದ ಪ್ರಶಂಸೆ - ನಿರ್ಮಲಾ ಸೀತಾರಾಮನ್ ಲೇಟೆಸ್ಟ್​​ ನ್ಯೂಸ್​​

ಅಧಿಕಾರಿಯೊಬ್ಬರಿಗೆ ಕುಡಿಯುವ ನೀರು ತಂದುಕೊಡುವ ಮೂಲಕ ನಿರ್ಮಲಾ ಸೀತಾರಾಮನ್ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದ್ದಾರೆ..

NSDL chief Padmaja Chunduru and Finance Minister Nirmala Sitharaman
ಪದ್ಮಜಾ ಚುಂಡೂರು ಹಾಗೂ ನಿರ್ಮಲಾ ಸೀತಾರಾಮನ್
author img

By

Published : May 9, 2022, 2:14 PM IST

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ಸರಳ, ಸಜ್ಜನಿಕೆ, ವಾಕ್ಚಾತುರ್ಯವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಈಗ ಅವರು ಮಾಡಿರುವ ಕಾರ್ಯವೊಂದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗತೊಡಗಿದೆ.

  • This graceful gesture by FM Smt. @nsitharaman ji reflects her large heartedness, humility and core values.

    A heart warming video on the internet today. pic.twitter.com/isyfx98Ve8

    — Dharmendra Pradhan (@dpradhanbjp) May 8, 2022 " class="align-text-top noRightClick twitterSection" data=" ">

ಎನ್‌ಎಸ್‌ಡಿಎಲ್‌ನ ರಜತ ಮಹೋತ್ಸವದ ನಿಮಿತ್ತ ಶನಿವಾರ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರು ಭಾಷಣ ಮಾಡುತ್ತಿದ್ದರು.

ಈ ವೇಳೆ ಪದ್ಮಜಾ ಅವರ ಗಂಟಲು ಒಣಗಿ ನೀರು ಕುಡಿಯಬೇಕೆನಿಸಿದೆ. ಆಗ ಡಯಾಸ್‌ನಲ್ಲಿಯೇ ನಿಂತು ಸಿಬ್ಬಂದಿಗೆ ನೀರು ಕೊಡುವಂತೆ ಕೇಳಿದ್ದಾರೆ. ಆದರೆ, ಸಿಬ್ಬಂದಿ ಅನತಿ ದೂರದಲ್ಲಿ ಇದ್ದುದರಿಂದ ಬರುವುದು ತಡವಾಗಿದೆ. ನಿರ್ಮಲಾ ಸೀತಾರಾಮನ್ ಅವರು ತಡ ಮಾಡದೇ ಎದ್ದು ತಮ್ಮ ಎದುರಿನಲ್ಲಿಟ್ಟಿದ್ದ ನೀರಿನ ಬಾಟಲಿಯನ್ನು ಡಯಾಸ್‌ನಲ್ಲಿದ್ದ ಪದ್ಮಜಾ ಅವರಿಗೆ ಕೊಟ್ಟು ದಾಹ ನೀಗಿಸಿದ್ದಾರೆ.

ಕೇಂದ್ರ ಮಂತ್ರಿಯೊಬ್ಬರು ತಮಗೆ ನೀರು ಕೊಟ್ಟಿದ್ದನ್ನು ಕಂಡು ನಿರ್ದೇಶಕಿ ಪದ್ಮಜಾ ಚುಂಡೂರು ಕೃತಜ್ಞತೆ ಅರ್ಪಿಸಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಾವೊಬ್ಬ ಕೇಂದ್ರ ಮಂತ್ರಿ ಎಂಬ ಹಮ್ಮುಬಿಮ್ಮು ತೋರದೆ ಭಾಷಣಕಾರ್ತಿಗೆ ನೀರು ಕೊಟ್ಟಿದ್ದರ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.