ಭೋಪಾಲ್ (ಮಧ್ಯಪ್ರದೇಶ): ಮದ್ಯದಂಗಡಿಗಳ ವಿರುದ್ಧ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಪ್ರತಿಭಟನೆ ಮುಂದುವರೆಸಿದ್ದಾರೆ. ವಾರಿ ಜಿಲ್ಲೆಯ ಓರ್ಚಾ ಪಟ್ಟಣದಲ್ಲಿ ಮದ್ಯದ ಅಂಗಡಿಯೊಂದಕ್ಕೆ ಹಸುವಿನ ಸಗಣಿ ಎಸೆದು ಅವರು ಸಿಟ್ಟು ಹೊರಹಾಕಿದ್ದಾರೆ.
ಮಧ್ಯಪ್ರದೇಶದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಮಾಜಿ ಮುಖ್ಯಮಂತ್ರಿ ಉಮಾಭಾರತಿ ಆಗ್ರಹವಾಗಿದೆ. ಇದರ ಭಾಗವಾಗಿ ಅವರು ವಿವಿಧ ರೀತಿಯಲ್ಲಿ ಪ್ರತಿಭಟನೆಯನ್ನು ಆಗಾಗ್ಗೆ ನಡೆಸುತ್ತಲೇ ಇದ್ದಾರೆ. ಈ ಹಿಂದೆ ಭೋಪಾಲ್‌ನಲ್ಲಿ ಮದ್ಯದಂಗಡಿಗೆ ಕಲ್ಲು ತೂರಿ ಅಲ್ಲಿಯೇ ಪ್ರತಿಭಟನೆಗೆ ಕುಳಿತಿದ್ದರು. ಇದೀಗ ಓರ್ಚಾದಲ್ಲಿ ಮದ್ಯದ ಅಂಗಡಿಗೆ ಹಸುವಿನ ಸಗಣಿ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಓರ್ಚಾ ಪಟ್ಟಣದಲ್ಲಿ ರಾಮರಾಜ ದೇವಸ್ಥಾನ ಇದ್ದು, ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಇಂತಹ ಪವಿತ್ರ ನಗರದಲ್ಲಿ ಮದ್ಯದಂಗಡಿ ಇರುವುದು ಕಂಡು ಉಮಾಭಾರತಿ ಕೋಪಗೊಂಡಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, "ಮದ್ಯದಂಗಡಿಗೆ ನಾನು ಹಸುವಿನ ಸಗಣಿ ಎಸೆದಿದ್ದೇನೆ. ಕಲ್ಲು ತೂರಾಟ ಮಾಡಿಲ್ಲ" ಎಂದು ಹೇಳುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ದಶಕದ ಹಿಂದೆಯೇ 'ಸುಪ್ರೀಂ' ಮಾರ್ಗಸೂಚಿ ಹೊರಡಿಸಿದ್ದರೂ ನಿಂತಿಲ್ಲ ಬೋರ್ವೆಲ್ ದುರಂತಗಳು!