ETV Bharat / bharat

ಯಾವುದೇ ಸಂಪರ್ಕವಿಲ್ಲದಿದ್ದರೂ ವೈದ್ಯನಲ್ಲಿ ಕಾಣಿಸಿಕೊಂಡ ಒಮಿಕ್ರಾನ್​!

author img

By

Published : Dec 25, 2021, 9:15 PM IST

ಪಶ್ಚಿಮ ಬಂಗಾಳದಲ್ಲಿ ವೈದ್ಯನೊಬ್ಬನಿಗೆ ಒಮಿಕ್ರಾನ್​ ಸೋಂಕು ಇರುವುದು ಪತ್ತೆಯಾಗಿದೆ. ಯಾವುದೇ ರೀತಿಯ ಟ್ರಾವೆಲ್​ ಹಿಸ್ಟರಿ ಇಲ್ಲದಿದ್ದರೂ ವೈರಾಣು ಕಾಣಿಸಿಕೊಂಡಿರುವುದು ಮಾತ್ರ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Kolkata Omicron case
Kolkata Omicron case

ಕೋಲ್ಕತ್ತಾ(ಪಶ್ಚಿಮ ಬಂಗಾಳ): ವಿದೇಶದಿಂದ ಆಗಮಿಸುತ್ತಿರುವ ಜನರಲ್ಲಿ ಒಮಿಕ್ರಾನ್​ ಕಾಣಿಸಿಕೊಳ್ಳುತ್ತಿರುವುದು ಸರ್ವೆ ಸಾಮಾನ್ಯ. ಆದರೆ, ಯಾವುದೇ ರೀತಿಯ ಟ್ರಾವೆಲ್​​ ಹಿಸ್ಟರಿ ಇಲ್ಲದ ವೈದ್ಯನಲ್ಲಿ ಇದೀಗ ಹೊಸ ರೂಪಾಂತರ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ವಿದೇಶದಿಂದ ವಾಪಸ್​ ಆಗಿರುವ ಆರು ಮಂದಿಗೆ ಒಮಿಕ್ರಾನ್​ ಸೋಂಕು ದೃಢಗೊಂಡಿದ್ದು, ಅವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈಗಾಗಲೇ ಇಬ್ಬರು ಚೇತರಿಸಿಕೊಂಡಿದ್ದಾರೆ. ಆದರೆ, ಇಂದು ಮತ್ತೊಂದು ಒಮಿಕ್ರಾನ್​​ ಪ್ರಕರಣ ದಾಖಲಾಗಿದೆ.

ಕೋಲ್ಕತ್ತಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಈ ವ್ಯಕ್ತಿಗೆ ಯಾವುದೇ ರೀತಿಯ ಟ್ರಾವೆಲ್​​ ಹಿಸ್ಟರಿ ಇಲ್ಲ. ವೈದ್ಯಕೀಯ ಕಾಲೇಜ್​ನ ಹಾಸ್ಟೆಲ್​ನಲ್ಲಿ ವಾಸ ಮಾಡುತ್ತಿರುವ ಇವರಿಗೆ ಸೋಂಕು ಯಾವ ರೀತಿಯಾಗಿ ತಗುಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿರಿ: ಜನವರಿ ಅಂತ್ಯದ ವೇಳೆಗೆ ಭಾರತದಲ್ಲಿ ಮತ್ತೆ ಕೋವಿಡ್ ಉಲ್ಬಣಿಸಲಿದೆ: ಕಿಮ್ಸ್ ಹೈದರಾಬಾದ್ ನಿರ್ದೇಶಕ

ಮೂರು ದಿನಗಳ ಹಿಂದೆ ಜ್ವರ ಪತ್ತೆಯಾಗಿದ್ದು, ಕೋವಿಡ್​​ ಲಕ್ಷಣ ಕಾಣಿಸಿಕೊಂಡಿರುವ ಕಾರಣ ಪರೀಕ್ಷೆಗೊಳಪಡಿಸಲಾಗಿತ್ತು. ಇದರ ಜೊತೆಗೆ ಜೀನೋಮ್​ ಸೀಕ್ವೆನ್ಸಿಗಾಗಿ ಸ್ಯಾಂಪಲ್​ ರವಾನೆ ಮಾಡಲಾಗಿದ್ದು, ವರದಿ ಪಾಸಿಟಿವ್​ ಬಂದಿದೆ. ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಹಾಗೂ ಒಮಿಕ್ರಾನ್​ ಸೋಂಕಿತರೊಂದಿಗೆ ಸಂಪರ್ಕ ಇಲ್ಲದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಇದೀಗ ಆಸ್ಪತ್ರೆ ಇತರೆ ಸಿಬ್ಬಂದಿ, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.