ETV Bharat / bharat

World's Most Expensive City : ಪ್ಯಾರಿಸ್ ಅಥವಾ ಸಿಂಗಾಪುರವಲ್ಲ.. ವಿಶ್ವದ ದುಬಾರಿ ನಗರದ ಪಟ್ಟಿಗೆ ಹೊಸ ಸೇರ್ಪಡೆ.. - ವಿಶ್ವದ ದುಬಾರಿ ನಗರ

ವಿಶ್ವದ ಅತಿ ದುಬಾರಿ ನಗರ ಎಂಬ ಖ್ಯಾತಿಗೆ ಇಸ್ರೇಲಿನ ಟೆಲ್ ಅವಿವ್ ನಗರ ಪಾತ್ರವಾಗಿದೆ. ಜೆರುಸಲೆಂ ಇಸ್ರೇಲಿನ ರಾಜಧಾನಿಯಾಗಿದ್ದರೂ, ದೇಶದ ಆರ್ಥಿಕ ಮತ್ತು ತಂತ್ರಜ್ಞಾನ ಕೇಂದ್ರ ಟೆಲ್ ಅವಿವ್ ಆಗಿದೆ..

Tel Aviv
ಟೆಲ್ ಅವಿವ್ ನಗರ
author img

By

Published : Dec 1, 2021, 2:38 PM IST

ಲಂಡನ್ : ಹಣದುಬ್ಬರದಿಂದ ಜಾಗತಿಕವಾಗಿ ಜೀವನ ವೆಚ್ಚ ಹೆಚ್ಚಿರುವುದರಿಂದ ಟೆಲ್ ಅವಿವ್ ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರವಾಗಿದೆ ಎಂದು ಬುಧವಾರ ಪ್ರಕಟವಾದ ಸಮೀಕ್ಷೆಯೊಂದು ತಿಳಿಸಿದೆ.

Tel Aviv
ಟೆಲ್ ಅವಿವ್ ನಗರ

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ಸಂಗ್ರಹಿಸಿದ ಅಧಿಕೃತ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಈ ನಗರವು ಐದನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ತಲುಪಿದೆ. 173 ನಗರಗಳಲ್ಲಿನ ಸರಕು ಮತ್ತು ಸೇವೆಗಳಿಗೆ ಯುಎಸ್​​ ಡಾಲರ್‌ಗಳಲ್ಲಿ ಬೆಲೆಗಳನ್ನು ಹೋಲಿಸಿ ವಿಶ್ವಾದ್ಯಂತ ಜೀವನ ವೆಚ್ಚ ಸೂಚ್ಯಂಕವನ್ನು ಸಂಕಲಿಸಲಾಗಿದೆ.

ಪ್ಯಾರಿಸ್ ಮತ್ತು ಸಿಂಗಾಪುರ ಜಂಟಿಯಾಗಿ ಎರಡನೇ ಸ್ಥಾನ ಗಳಿಸಿವೆ. ಈ ಪಟ್ಟಿಯಲ್ಲಿ ಜ್ಯೂರಿಚ್ 3ನೇ ಸ್ಥಾನದಲ್ಲಿದೆ ಮತ್ತು ಹಾಂಗ್‌ಕಾಂಗ್ 5ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ನ್ಯೂಯಾರ್ಕ್ 6ನೇ ಸ್ಥಾನದಲ್ಲಿದ್ದರೆ, ಜಿನೀವಾ 7ನೇ ಸ್ಥಾನದಲ್ಲಿದೆ. 8ನೇ ಸ್ಥಾನದಲ್ಲಿ ಕೋಪನ್ ಹ್ಯಾಗನ್, 9ನೇ ಸ್ಥಾನದಲ್ಲಿ ಲಾಸ್ ಏಂಜಲೀಸ್ ಮತ್ತು 10ನೇ ಸ್ಥಾನದಲ್ಲಿ ಜಪಾನ್‌ನ ಒಸಾಕಾ ನಗರವಿದೆ.

ವಿಶ್ವದ 10 ಅತ್ಯಂತ ದುಬಾರಿ ನಗರಗಳು 2021

1. ಟೆಲ್ ಅವಿವ್

2. ಪ್ಯಾರಿಸ್

3. ಸಿಂಗಾಪುರ

4. ಜ್ಯೂರಿಚ್

5. ಹಾಂಗ್ ಕಾಂಗ್

6. ನ್ಯೂಯಾರ್ಕ್

7. ಜಿನೀವಾ

8. ಕೋಪನ್ ಹ್ಯಾಗನ್

9. ಲಾಸ್ ಏಂಜಲೀಸ್

10. ಒಸಾಕಾ

ಇದನ್ನೂ ಓದಿ: Omicron ಆತಂಕದಿಂದ ಹೊರಬಂದ ಉದ್ಯಮಗಳು: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.