ETV Bharat / bharat

ಕಾರು ಸ್ಫೋಟ ಕೇಸ್: ಯಾವುದೇ ಬಂದ್​ಗೆ ಕರೆ ನೀಡಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ ಅಣ್ಣಾಮಲೈ

ಕೊಯಮತ್ತೂರು ಬಂದ್​ಗೆ ಬೆಂಬಲ ಸೂಚಿಸಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್​ ಮಾಡುವಂತೆ ಒತ್ತಡ ಹೇರಲಾಗುತ್ತದೆ ಎಂದು ಆರೋಪಿಸಿ ಉದ್ಯಮಿ ಸಲ್ಲಿಸಿದ್ದ ಪಿಐಎಲ್​ ಅನ್ನು ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸಿದೆ.

not-given-any-call-for-oct-31-bandh-bjps-annamalai-tells-madras-hc
ಕಾರು ಸ್ಫೋಟ ಪ್ರಕರಣ: ಹೈಕೋರ್ಟ್​ನಲ್ಲಿ ಯಾವುದೇ ಬಂದ್​ಗೆ ಕರೆ ನೀಡಿಲ್ಲ ಎಂದ ಅಣ್ಣಾಮಲೈ
author img

By

Published : Oct 28, 2022, 9:38 PM IST

ಚೆನ್ನೈ (ತಮಿಳುನಾಡು): ಕೊಯಮತ್ತೂರಿನಲ್ಲಿ ಅಕ್ಟೋಬರ್ 23ರಂದು ನಡೆದ ಕಾರು ಸ್ಫೋಟ ಪ್ರಕರಣದ ಸಂಬಂಧ ಬಿಜೆಪಿ ಯಾವುದೇ ಬಂದ್‌ಗೆ ಕರೆ ನೀಡಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಶುಕ್ರವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಬಿಜೆಪಿ ನಾಯಕರು ಅಕ್ಟೋಬರ್ 31ರಂದು ಕೊಯಮತ್ತೂರು ಬಂದ್​ಗೆ ಕರೆ ನೀಡಿದ್ದಾರೆ. ಈ ಬಂದ್​ಗೆ ಬೆಂಬಲ ಸೂಚಿಸಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್​ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿ ಉದ್ಯಮಿ ವೆಂಗದೇಶ್ ಎಂಬುವವರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.

ಇದನ್ನೂ ಓದಿ: ತಮಿಳುನಾಡು ಕಾರು ಸ್ಫೋಟ, ಎನ್​ಐಎ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪರೇಶ್ ಉಪಾಧ್ಯಾಯ ಮತ್ತು ಡಿ.ಭರತ ಚಕ್ರವರ್ತಿ ಅವರಿದ್ದ ವಿಭಾಗೀಯ ಪೀಠ ಕೈಗೆತ್ತಿಕೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪರ ವಾದ ಮಂಡಿಸಿದ ವಕೀಲ ಆರ್.ಸಿ.ಪಾಲ್ ಕನಕರಾಜ್, ಪ್ರತಿಭಟನೆಯ ಸ್ವರೂಪವನ್ನು ಪಕ್ಷವು ನಿರ್ಧರಿಸಿಲ್ಲ. ಬಂದ್‌ ಸಂಬಂಧ ಯಾವ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ಇದು ಅಸ್ಪಷ್ಟವಾಗಿ ಎಂದು ಹೇಳಿದರು.

ಅಕ್ಟೋಬರ್ 31ರಂದು ಬಿಜೆಪಿ ನಡೆಸಲಿರುವ ಪ್ರತಿಭಟನೆಯ ಸ್ವರೂಪವನ್ನು ಕಾದು ನೋಡಬೇಕಿದೆ ಎಂಬ ವಾದವನ್ನು ಗಮನಿಸಿದ ನ್ಯಾಯಾಲಯವು ಪಿಐಎಲ್ ವಿಚಾರಣೆಯನ್ನು ನವೆಂಬರ್ 1ಕ್ಕೆ ಮುಂದೂಡಿದೆ. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಕರ್ತವ್ಯ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ.ರವೀಂದ್ರನ್ ಅವರಿಗೆ ಸೂಚಿಸಿದೆ.

ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರು ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಇದರ ತನಿಖೆಯನ್ನು ಎನ್‌ಐಎಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.

ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಅ. 31ರಂದು ಬಂದ್​ಗೆ ಕರೆ ನೀಡಿದ ಬಿಜೆಪಿ, ಹಿಂದೂ ಸಂಘಟನೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.