ETV Bharat / bharat

ಈ ರಾಜ್ಯದಲ್ಲಿ ಈವರೆಗೆ ಮುಸ್ಲಿಂ ಶಾಸಕರೇ ಆಯ್ಕೆಯಾಗಿಲ್ಲ..! - ಮುಸ್ಲಿಂ ಶಾಸಕರಿಲ್ಲದ ಹಿಮಾಚಲ ಪ್ರದೇಶ

ಈ ರಾಜ್ಯದಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆ ಇರುವಂತೆ ಸಿಖ್ಖರ ಸಂಖ್ಯೆಯೂ ಕೂಡಾ ಕಡಿಮೆಯಿದೆ. ಆದರೆ, ಸಿಖ್ಖರು ರಾಜಕೀಯವಾಗಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.

Not a single Muslim representative in Himachal assembly since its inception
ಈ ರಾಜ್ಯದಲ್ಲಿ ಈವರೆಗೆ ಮುಸ್ಲಿಂ ಶಾಸಕರೇ ಆಯ್ಕೆಯಾಗಿಲ್ಲ..!
author img

By

Published : Sep 10, 2021, 12:41 PM IST

ಶಿಮ್ಲಾ, ಹಿಮಾಚಲ ಪ್ರದೇಶ: ಇತ್ತೀಚೆಗೆ ಜಾರ್ಖಂಡ್ ವಿಧಾನಸಭಾ ಕಟ್ಟಡದಲ್ಲಿ ಮುಸ್ಲಿಂ ಸಮುದಾಯದ ಶಾಸಕರಿಗೆ ನಮಾಜ್​ ಮಾಡಲು ಪ್ರತ್ಯೇಕ ಕೊಠಡಿ ನೀಡಿದ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಬಿಹಾರದ ವಿಧಾನಸಭೆಯಲ್ಲೂ ಇಂತಹುದ್ದೇ ಒಂದು ಬೇಡಿಕೆ ಕೇಳಿಬಂದಿತ್ತು.

ಆದರೆ, ಹಿಮಾಚಲ ಪ್ರದೇಶ ರಾಜ್ಯದ ವಿಧಾನಸಭಾ ಇತಿಹಾಸ ಭಿನ್ನವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇ-ಶಾಸಕಾಂಗ (e-legislation) ವ್ಯವಸ್ಥೆ ಜಾರಿಗೆ ತಂದಿರುವ ಈ ರಾಜ್ಯದಲ್ಲಿ ಈವರೆಗೆ ಅಲ್ಪಸಂಖ್ಯಾತ ಶಾಸಕರು ಆಯ್ಕೆಯಾಗಿಲ್ಲ.

ಸುಮಾರು 68 ವಿಧಾನಸಭಾ ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಮೊದಲಿನಿಂದಲೂ ಬ್ರಾಹ್ಮಣರು ಮತ್ತು ರಜಪೂತರದ ಪ್ರಾಬಲ್ಯವಿದೆ. ಮುಸ್ಲೀಮರ ಪ್ರಾಬಲ್ಯ ಕೇವಲ ಶೇಕಡಾ 2.1ರಷ್ಟಿರುವ ಕಾರಣದಿಂದಾಗಿ ಈವರೆಗೆ ಯಾವ ಮುಸ್ಲಿಂ ವ್ಯಕ್ತಿಯೂ ಶಾಸಕನಾಗಿ ಆಯ್ಕೆಯಾಗಿಲ್ಲ.

ಹಿಮಾಚಲ ಪ್ರದೇಶದಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆ ಇರುವಂತೆ ಸಿಖ್ಖರ ಸಂಖ್ಯೆಯೂ ಕೂಡಾ ಕಡಿಮೆಯಿದೆ. ಆದರೆ ಅವರು ರಾಜಕೀಯವಾಗಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗಿದೆ. ಆದ್ದರಿಂದ ಕೆಲವು ಶಾಸಕ ಸ್ಥಾನಗಳು ಅವರಿಗೆ ಒಲಿದಿವೆ.

ಕೇಂದ್ರಾಡಳಿತ ಪ್ರದೇಶವಾಗಿದ್ದ ಹಿಮಾಚಲ ಪ್ರದೇಶ 1971 ಜನವರಿ 25ರಂದು ರಾಜ್ಯದ ಸ್ಥಾನಮಾನ ಪಡೆದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಹಿರಿಯ ಮುತ್ಸದ್ಧಿ ಡಾ. ವೈಎಸ್​.ಪಾರ್ಮರ್ ಅಲ್ಲಿಂದ ಇಲ್ಲಿಯವರೆಗೆ ಹಿಮಾಚಲ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿ ಶಾಸಕನಾಗಿ ಆಯ್ಕೆಯಾಗಿಲ್ಲ.

ಇದನ್ನೂ ಓದಿ: ಪುರುಷನ ಸಂಪರ್ಕವಿಲ್ಲದೇ ತಾಯಿಯಾದ ಮಹಿಳೆ..: ಸಿಂಗಲ್ ಮದರ್ ಪಟ್ಟಕ್ಕೇರಿದ ಸಂಯುಕ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.