ETV Bharat / bharat

ಈಶಾನ್ಯ ರಾಜ್ಯಗಳು ದೇಶದ ಅಭಿವೃದ್ಧಿಯ ಹೆಬ್ಬಾಗಿಲು ಆಗಲಿವೆ: ಪ್ರಧಾನಿ ಮೋದಿ - Prime Minister Narendra Modi in Manipur

ಕೇಂದ್ರದಲ್ಲಿ ಹಿಂದೆ ಇದ್ದ ಸರ್ಕಾರಗಳು ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿದ್ದವು. ಇದರಿಂದಾಗಿ ಇಲ್ಲಿನ ಜನರು ಅಭಿವೃದ್ಧಿಯಿಂದ ದೂರವಾಗಿದ್ದರು. ನಾನು ಪ್ರಧಾನಿಯಾದ ನಂತರ ನವದೆಹಲಿಯನ್ನೇ ಮಣಿಪುರ ಮತ್ತು ಈಶಾನ್ಯದ ಬಾಗಿಲಿಗೆ ತಂದಿದ್ದೇನೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ಗೆ ಟಾಂಗ್​ ನೀಡಿದರು.

PM Modi
ಪ್ರಧಾನಿ ಮೋದಿ
author img

By

Published : Jan 4, 2022, 8:03 PM IST

ಇಂಫಾಲ್​ (ಮಣಿಪುರ): ಮುಂದಿನ ವರ್ಷಗಳಲ್ಲಿ ಈಶಾನ್ಯ ರಾಜ್ಯಗಳು ಭಾರತದ ಬೆಳವಣಿಗೆಯ ಪ್ರಮುಖ ಚಾಲಕರಾಗಲಿದ್ದು, ಮಣಿಪುರವು ಈ ಪಥದ ಮೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಮಣಿಪುರದಲ್ಲಿ ಸುಮಾರು 1,850 ಕೋಟಿ ರೂ. ವೆಚ್ಚದ 13 ಯೋಜನೆಗಳನ್ನು ಪಿಎಂ ಮೋದಿ ಉದ್ಘಾಟಿಸಿದರು ಮತ್ತು ಸುಮಾರು 2,950 ಕೋಟಿ ರೂ.ವೆಚ್ಚದ 9 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ, ಮೂಲಸೌಕರ್ಯ, ಕುಡಿಯುವ ನೀರು ಸರಬರಾಜು, ನಗರಾಭಿವೃದ್ಧಿ, ಆರೋಗ್ಯ ಮತ್ತು ಐಟಿ ಕ್ಷೇತ್ರ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ಇವಾಗಿವೆ. ಈ ಮೂಲಕ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಯೋಜನೆಗಳು ಜನರ ಜೀವನವನ್ನು ಸುಲಭಗೊಳಿಸುತ್ತವೆ. ಈಶಾನ್ಯ ರಾಜ್ಯಗಳು ದೇಶದ ಅಭಿವೃದ್ಧಿಯ ಹೆಬ್ಬಾಗಿಲು ಆಗಲು ಸಜ್ಜಾಗಿವೆ. ನವ ಭಾರತದ ಕನಸುಗಳನ್ನು ನನಸು ಮಾಡುವ ಹೆಬ್ಬಾಗಿಲು ಆಗಲಿವೆ. ಮಣಿಪುರದಿಂದ ಇದರ ಆರಂಭವಾಗಲಿದೆ. ತನ್ನ ಸಾಮರ್ಥ್ಯವನ್ನು ಮಣಿಪುರ ರಾಜ್ಯವು ಇತರ ಭಾಗಗಳಿಗೆ ವಿಸ್ತರಿಸುತ್ತದೆ ಎಂದು ಅಭಿಪ್ರಾಯಟ್ಟರು.

ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ನೀಡುತ್ತಿರುವುದು ಅತ್ಯಂತ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ

ಕೇಂದ್ರದಲ್ಲಿ ಹಿಂದೆ ಇದ್ದ ಸರ್ಕಾರಗಳು ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿದ್ದವು. ಇದರಿಂದಾಗಿ ಇಲ್ಲಿನ ಜನರು ಅಭಿವೃದ್ಧಿಯಿಂದ ದೂರವಾಗಿದ್ದರು. ಹಿಂದಿನ ಮುಖ್ಯಮಂತ್ರಿಗಳು, ಸಚಿವರು ಮತ್ತು ಉನ್ನತ ಅಧಿಕಾರಿಗಳು ಕೆಲಸಗಳನ್ನು ಮಾಡಲು ದೆಹಲಿಗೆ ಧಾವಿಸಬೇಕಾಗಿತ್ತು. ನಾನು ಪ್ರಧಾನಿಯಾದ ನಂತರ ನವದೆಹಲಿಯನ್ನೇ ಮಣಿಪುರ ಮತ್ತು ಈಶಾನ್ಯದ ಬಾಗಿಲಿಗೆ ತಂದಿದ್ದೇನೆ. ಈಶಾನ್ಯ ಭಾಗದ ಸಮತೋಲಿತ ಅಭಿವೃದ್ಧಿಯಿಲ್ಲದೆ ದೇಶದಲ್ಲಿ ಸರಿಯಾದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರವು ಭಾವಿಸಿದ್ದರಿಂದ ಈಗ ನಮ್ಮ ಕೇಂದ್ರ ಸರ್ಕಾರದ ನಾಯಕರೇ ಮಣಿಪುರಕ್ಕೆ ಬರುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್​ಗೆ ಟಾಂಗ್​ ನೀಡಿದರು.

ಮಣಿಪುರ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.5.7ರಷ್ಟು ಜನರಿಗೆ ಮಾತ್ರ ಹಿಂದಿನ ಸರ್ಕಾರ ಕುಡಿಯುವ ನೀರನ್ನು ಒದಗಿಸುತ್ತಿತ್ತು. ಆದರೆ ಈಗ ಈ ಪ್ರಮಾಣ ಶೇ.50ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ 'ಡಬಲ್ ಇಂಜಿನ್' ಸರ್ಕಾರ ಇರುವ ಕಾರಣ ಶೀಘ್ರದಲ್ಲೇ ಶೇ.100ರಷ್ಟು ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ರೈತರಿಗೆ ವಿವಿಧ ಸೌಲಭ್ಯಗಳನ್ನು, ಬಡ ವರ್ಗದ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ 1.30 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ ಎಂದು ಪಿಎಂ ಮೋದಿ ಇದೇ ವೇಳೆ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.