ನವದೆಹಲಿ: ಉತ್ತರ, ವಾಯುವ್ಯ ಮತ್ತು ಈಶಾನ್ಯ ಭಾರತವು ಈ ವರ್ಷದ ಬೇಸಿಗೆಯಲ್ಲಿ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಹಿಮಾಲಯ, ಈಶಾನ್ಯ ಭಾರತ, ಮಧ್ಯ ಭಾರತದ ಪೂರ್ವ ಮತ್ತು ಪಶ್ಚಿಮ ಭಾಗಗಳ ಕೆಲ ಪ್ರದೇಶಗಳಲ್ಲಿ ಹಾಗೂ ಉತ್ತರ ಭಾರತದ ಕೆಲವು ಕರಾವಳಿ ಪ್ರದೇಶಗಳಲ್ಲಿ ಕೂಡ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ 0.86 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿನ ತಾಪಮಾನ ದಾಖಲಾಗಲಿದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ?.. ಇಲ್ಲಿವೆ ನೈಸರ್ಗಿಕ ಪರಿಹಾರೋಪಾಯಗಳು..
ಪ್ರತಿ ಬಾರಿ ಚಳಿಗೆ ತತ್ತರಿಸುವ ಉತ್ತರ ಭಾರತದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ವರ್ಷದ ಬೇಸಿಗೆ ಕಾಲದಲ್ಲಿ ಸಾಮಾನ್ಯ ತಾಪಮಾನಕ್ಕಿಂತ 0.46ರಿಂದ 0.71 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನ ಇರಲಿದೆ.
ಒಡಿಶಾ ಮತ್ತು ಛತ್ತೀಸ್ಘಡದಲ್ಲಿ ಹೆಚ್ಚಿನ ತಾಪಮಾನವಿರಲಿದ್ದು, ಗರಿಷ್ಠ ತಾಪಮಾನವು ಸರಾಸರಿ ತಾಪಮಾನಕ್ಕಿಂತ 0.86 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿರಲಿದೆ. ಹಾಗೆಯೇ ಉತ್ತರ ಭಾರತದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 0.46 ಡಿಗ್ರಿ ಸೆಲ್ಸಿಯಸ್ನಿಂದ 0.71ಡಿಗ್ರಿ ಸೆಲ್ಸಿಯಸ್ನಷ್ಟು ಅಧಿಕವಿರಲಿದೆ.
1901ರಿಂದ ಈವರೆಗೆ 2021ರ ಫೆಬ್ರವರಿ ತಿಂಗಳು ದೆಹಲಿಗೆ ಎರಡನೇ ಅತ್ಯಂತ ಬೆಚ್ಚಗಿನ ತಿಂಗಳಾಗಿದೆ. ಹೀಗಾಗಿ ಮುಂಬರಲಿರುವ ಬೇಸಿಗೆ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ. ಬೇಸಿಗೆಯ ಈ ಸಮಯದಲ್ಲಿ ಮೋಡವಿಲ್ಲದ ಸ್ಪಷ್ಟ ಆಕಾಶವಿರುವುದರಿಂದ ಹೆಚ್ಚಿನ ಉಷ್ಣತೆ ಉಂಟಾಗಲಿದೆ ಎಂದು ಐಎಂಡಿ ತಿಳಿಸಿದೆ.