ETV Bharat / bharat

ಈಶಾನ್ಯ ಭಾರತದಲ್ಲಿ ತಗ್ಗಿದ ದಂಗೆಗಳು: ಸುಧಾರಿಸಿದ ಭದ್ರತಾ ಪರಿಸ್ಥಿತಿ - ಸಿಲಿಗುರಿ ಕಾರಿಡಾರ್

ಭಾರತ ಸರ್ಕಾರವು 2014ರಿಂದ ಈಶಾನ್ಯ ಭಾಗದ ರಾಜ್ಯಗಳೊಂದಿಗೆ 9 ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಪ್ರದೇಶದ ಹೆಚ್ಚಿನ ಭಾಗದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಡಾ. ರಾವೆಲ್ಲಾ ಭಾನು ಕೃಷ್ಣ ಕಿರಣ್ ಅವರ ಲೇಖನ ಇಲ್ಲಿದೆ.

north-east-insurgency-the-indian-response
ಈಶಾನ್ಯ ಭಾರತದಲ್ಲಿ ತಗ್ಗಿದ ದಂಗೆಗಳು: ಸುಧಾರಿಸಿದ ಭದ್ರತಾ ಪರಿಸ್ಥಿತಿ
author img

By ETV Bharat Karnataka Team

Published : Jan 6, 2024, 8:53 PM IST

ಹೈದರಾಬಾದ್: ದೇಶದ ಎಂಟು ರಾಜ್ಯಗಳನ್ನು (ಅರುಣಾಚಲ ಪ್ರದೇಶ, ಅಸ್ಸೋಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕೀಂ ಮತ್ತು ತ್ರಿಪುರಾ) ಒಳಗೊಂಡಿರುವ ಈಶಾನ್ಯ ಪ್ರದೇಶ (India's northeastern region- NER) ವಿವೇಚನಾರಹಿತ ಹಿಂಸಾಚಾರ ಮತ್ತು ಅಸ್ಥಿರತೆಗೆ ಕಾರಣವಾಗುವ ಹಲವಾರು ಸಶಸ್ತ್ರ ದಂಗೆಗಳನ್ನು ಹುಟ್ಟುಹಾಕಿದೆ. ಹಾಗೆ ಖಚಿತವಾಗಿಯೂ, ಈಶಾನ್ಯ ಪ್ರದೇಶದ ದಂಗೆಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಗಮನಾರ್ಹ ಕುಸಿತವನ್ನೂ ಕಂಡಿದೆ. 2014ರಿಂದ ಭದ್ರತಾ ಪರಿಸ್ಥಿತಿಯು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯದ ವಾರ್ಷಿಕ ವರದಿ (2022-2023) ಪ್ರಕಾರ, 2014ರಿಂದ ಈಶಾನ್ಯ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಿದೆ. ಮಿಜೋರಾಂ, ಸಿಕ್ಕೀಂ ಮತ್ತು ತ್ರಿಪುರಾ ರಾಜ್ಯಗಳು ಶಾಂತಿಯುತವಾಗಿವೆ. 2004 ಮತ್ತು 2014ರ ನಡುವೆ 11,121 ಹಿಂಸಾತ್ಮಕ ಘಟನೆಗಳು ದಾಖಲಾಗಿವೆ. ಇದು 2014 ಮತ್ತು 2023ರ ನಡುವೆ 3,033ಕ್ಕೆ ಕುಸಿಯುವ ಮೂಲಕ ಶೇ.73ರಷ್ಟು ತಗ್ಗಿವೆ.

ಭಾರತ ಸರ್ಕಾರವು ಸೇನೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ ಪೊಲೀಸ್‌ನ ಬಂಡಾಯ ನಿಗ್ರಹ ಕಾರ್ಯಾಚರಣೆಗಳ ಜೊತೆಗೆ ಸಂಧಾನದ ಪರಸ್ಪರ ನೀತಿಯನ್ನು ಅನುಸರಿಸುತ್ತಿವೆ. ಈ ಮೂಲಕ ಹಿಂಸಾಚಾರವನ್ನು ತ್ಯಜಿಸುವ ಮತ್ತು ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಅವರ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಹುಡುಕುವ ಬಂಡಾಯ ಗುಂಪುಗಳೊಂದಿಗೆ ಮಾತುಕತೆ ನಡೆಸುತ್ತಿವೆ. ಅದರಂತೆ, ಹಲವಾರು ದಂಗೆಕೋರ ಗುಂಪುಗಳು ಭಾರತ ಸರ್ಕಾರದೊಂದಿಗೆ ಮಾತುಕತೆಗೆ ಬಂದಿವೆ ಮತ್ತು ಶಾಂತಿಯುತ ಇತ್ಯರ್ಥಕ್ಕೂ ಒಪ್ಪಿಕೊಂಡಿವೆ.

9 ಶಾಂತಿ ಮತ್ತು ಗಡಿ ಒಪ್ಪಂದಗಳಿಗೆ ಸಹಿ: 2014ರಿಂದ ಭಾರತ ಸರ್ಕಾರವು ಈಶಾನ್ಯ ಪ್ರದೇಶದಲ್ಲಿ ವಿವಿಧ ರಾಜ್ಯಗಳೊಂದಿಗೆ 9 ಶಾಂತಿ ಮತ್ತು ಗಡಿ ಸಂಬಂಧಿತ ಒಪ್ಪಂದಗಳಿಗೆ ಸಹಿ ಹಾಕಿದೆ. ಇವುಗಳು ಹೆಚ್ಚಿನ ಭಾಗದಲ್ಲಿ ಶಾಂತಿಯನ್ನು ಸ್ಥಾಪಿಸಿವೆ. ಮುಖ್ಯವಾಗಿ 2023ರ ಡಿಸೆಂಬರ್ 29ರಂದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ ಉಲ್ಫಾ (United Liberation Front of Assam ULFA) (ರಾಜ್‌ಖೋವಾ ನೇತೃತ್ವದ ಉಲ್ಫಾ ಬಣ) ನಡುವಿನ ಒಪ್ಪಂದ ಹಾಗೂ 2023ರ ನವೆಂಬರ್ 29ರಂದು ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (United National Liberation Fron - UNLF), ಮಣಿಪುರ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರುವುದು ಸುದೀರ್ಘ ಸಶಸ್ತ್ರ ಚಳುವಳಿಗಳ ಅಂತ್ಯವನ್ನು ಸೂಚಿಸುತ್ತದೆ.

ಯುಎನ್‌ಎಲ್‌ಎಫ್‌ನೊಂದಿಗಿನ ಒಪ್ಪಂದವು ಗಮನಾರ್ಹವಾಗಿದೆ. ಏಕೆಂದರೆ, ಮೊದಲ ಬಾರಿಗೆ ಕಣಿವೆ ಮೂಲದ ಮಣಿಪುರಿ ಸಶಸ್ತ್ರ ಗುಂಪು ಆರು ದಶಕಗಳ ಸುದೀರ್ಘ ಸಶಸ್ತ್ರ ಚಳುವಳಿಯನ್ನು ಕೊನೆಗೊಳಿಸುವ ಮೂಲಕ ಹಿಂಸಾಚಾರದಿಂದ ದೂರವಿರಲು ಒಪ್ಪಿಕೊಂಡಿದೆ. ಜೊತೆಗೆ ಭಾರತದ ಕಾನೂನುಗಳು ಮತ್ತು ಸಂವಿಧಾನವನ್ನು ಗೌರವಿಸಲು ಒಪ್ಪಿಕೊಂಡಿದೆ.

ಶಾಂತಿ ಒಪ್ಪಂದಗಳ ಹೊರತಾಗಿಯೂ ಈಶಾನ್ಯ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಹಲವಾರು ಅಡಚಣೆಗಳಿವೆ. ದಂಗೆಕೋರ ಗುಂಪುಗಳ ಕಟ್ಟರ್ ಬಣಗಳು ಭಾರತದ ವಿರುದ್ಧ ದಂಗೆಯನ್ನು ಮುಂದುವರಿಸಲು ನಿರ್ಧರಿಸಿವೆ. ಉಲ್ಫಾ (ಪರೇಶ್ ಬರುಹ್ ಬಣ) ಸಾರ್ವಭೌಮ ಅಸ್ಸೋಂನ ಬೇಡಿಕೆಯೊಂದಿಗೆ ಶಾಂತಿ ಒಪ್ಪಂದದ ಭಾಗವಾಗಿರದ ಕಾರಣ ಅಸ್ಸೋಂ ಬಂಡಾಯವನ್ನು ಎದುರಿಸುವುದನ್ನು ಮುಂದುವರೆಸುವ ಸಾಧ್ಯತೆ ಇದೆ.

ಸಶಸ್ತ್ರ ಹೋರಾಟವನ್ನು ಮುಂದುವರಿಸಲು ಈ ಗುಂಪು ಮ್ಯಾನ್ಮಾರ್‌ನ ಪ್ರದೇಶಗಳನ್ನು ತನ್ನ ಅಡಗುತಾಣಗಳಾಗಿ ಬಳಸುವುದನ್ನು ಮುಂದುವರೆಸಿದೆ. ಬೋಡೋ ಮತ್ತು ಕರ್ಬಿ ಗುಂಪುಗಳ ವಿಷಯದಲ್ಲಿ ಒಪ್ಪಂದವಿದ್ದರೂ, ಈ ಗುಂಪುಗಳು ಬೋಡೋಲ್ಯಾಂಡ್‌ನ ಪ್ರತ್ಯೇಕ ರಾಜ್ಯಕ್ಕಾಗಿ ಮತ್ತು ಸಂವಿಧಾನದ 244ಎ ವಿಧಿಯ ಅಡಿಯಲ್ಲಿ ಕಾರ್ಬಿಗಳಿಗೆ ಸ್ವಾಯತ್ತ ರಾಜ್ಯಕ್ಕಾಗಿ ತಮ್ಮ ಹಕ್ಕುಗಳನ್ನು ಮಂಡಿಸುತ್ತಿವೆ. (ಸಂವಿಧಾನದ 244ಎ ವಿಧಿಯು ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಅಸ್ಸೋಂನೊಳಗೆ 'ಸ್ವಾಯತ್ತ ರಾಜ್ಯ' ರಚನೆಗೆ ಅವಕಾಶ ನೀಡುತ್ತದೆ ). ಈ ಅಸ್ಥಿರ ಸನ್ನಿವೇಶದಿಂದ ಅಸ್ಸೋಂನಲ್ಲಿ ಹಿಂಸಾತ್ಮಕ ಚಲನೆಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂಬುದು ಸ್ಪಷ್ಟ.

70 ವರ್ಷಗಳ ನಾಗಾ ದಂಗೆ: ಈಶಾನ್ಯ ಪ್ರದೇಶದಲ್ಲಿ ದಂಗೆಗೆ ಸಂಬಂಧಿಸಿದ ಘಟನೆಗಳು ಕಳೆದ ಎರಡು ದಶಕಗಳಲ್ಲಿ ಕಡಿಮೆಯಾಗಿದ್ದರೂ, ನಾಗಾಲ್ಯಾಂಡ್‌ನ ಪರಿಸ್ಥಿತಿಯು ಇನ್ನೂ ಕಳವಳಕಾರಿಯಾಗಿದೆ. ಭಾರತವು 1997ರ ಆಗಸ್ಟ್ 1ರಂದು ನಾಗಾಲ್ಯಾಂಡ್ ಎನ್​​ಎಸ್​ಸಿಎನ್​ (ಐಎಂ)ನ ರಾಷ್ಟ್ರೀಯ ಸಮಾಜವಾದಿ ಮಂಡಳಿಯೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, 70 ವರ್ಷಗಳ ನಾಗಾ ದಂಗೆಯನ್ನು ಕೊನೆಗೊಳಿಸಲು ಅಂತಿಮ ಪರಿಹಾರವನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ನಾಗಾಗಳಿಗೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನದ ಬೇಡಿಕೆಯ ಮೇಲೆ ಭಾರತ ಸರ್ಕಾರ ಮತ್ತು ಎನ್​​ಎಸ್​ಸಿಎನ್​ (ಐಎಂ) ನಡುವೆ ಹಗ್ಗಜಗ್ಗಾಟ ಏರ್ಪಟ್ಟಿತ್ತು.

ಏಳು ನಾಗಾ ಬಂಡಾಯ ಗುಂಪುಗಳ ವೇದಿಕೆಯಾದ ನಾಗಾ ನ್ಯಾಷನಲ್ ಪೊಲಿಟಿಕಲ್ ಗ್ರೂಪ್ಸ್ (ಎನ್​ಎನ್​ಪಿಜಿ) ಬೇಡಿಕೆಗೆ ಒತ್ತಾಯಿಸುತ್ತಿಲ್ಲ. ಆದರೆ, ಎನ್​​ಎಸ್​ಸಿಎನ್​ (ಐಎಂ) ನಾಗಾ ಧ್ವಜ ಮತ್ತು ಸಂವಿಧಾನವನ್ನು ಅಂಗೀಕರಿಸದೆ ಅಂತಿಮ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.

'ಚಿಕನ್ ನೆಕ್' ಕಾರಿಡಾರ್: ಈಶಾನ್ಯ ಭಾಗದ ಶಾಂತಿ ಮತ್ತು ಸ್ಥಿರತೆಯು ಭಾರತಕ್ಕೆ ಎರಡು ಅಂಶಗಳಲ್ಲಿ ನಿರ್ಣಾಯಕ ಮತ್ತು ಮಹತ್ವದ್ದಾಗಿದೆ. ಮೊದಲನೆಯದಾಗಿ, ಪಶ್ಚಿಮ ಬಂಗಾಳದ ಸಿಲಿಗುರಿ ಕಾರಿಡಾರ್, (ಇದನ್ನು 'ಚಿಕನ್ ನೆಕ್' -Chicken's Neck ಎಂದೂ ಕರೆಯುತ್ತಾರೆ) 21ರಿಂದ 40 ಕಿಮೀ ಅಗಲದೊಂದಿಗೆ ಈ ಈಶಾನ್ಯ ಪ್ರದೇಶವನ್ನು ಭಾರತದ ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುತ್ತದೆ. ದಂಗೆಕೋರ ಗುಂಪುಗಳು 'ಚಿಕನ್ ನೆಕ್​'ನ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದು, ಈ ರಾಜ್ಯಗಳಲ್ಲಿ ತಮ್ಮ ಬಂಡಾಯ ಚಳುವಳಿಗಳನ್ನು ನಡೆಸುತ್ತವೆ. ಚೀನಾ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶಕ್ಕೆ ಸಿಲಿಗುರಿ ಕಾರಿಡಾರ್‌ನ ಸಾಮೀಪ್ಯವು ಅದರ ಭೌಗೋಳಿಕ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಎರಡನೆಯದಾಗಿ, ಚೀನಾ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ಮತ್ತು ನೇಪಾಳದೊಂದಿಗೆ 5,484 ಕಿಮೀ ಅಂತರದ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿರುವುದರಿಂದ ಇದು ಆಗ್ನೇಯ ಏಷ್ಯಾದ ಹೆಬ್ಬಾಗಿಲು. ಈ ಹಿಂದೆ, ಈಶಾನ್ಯ ಪ್ರದೇಶನಲ್ಲಿನ ಅನೇಕ ಬಂಡಾಯ ಸಂಘಟನೆಗಳು ಭೂತಾನ್, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ತಮ್ಮ ಸುರಕ್ಷಿತ ಆಶ್ರಯವನ್ನು ಹೊಂದಿದ್ದವು. ಇವುಗಳ ಹಲವಾರು ಉನ್ನತ ನಾಯಕರು ಅಲ್ಲಿಂದಲೇ ಕಾರ್ಯ ನಿರ್ವಹಿಸಿದ್ದರು. ಅನೇಕ ತರಬೇತಿ ಶಿಬಿರಗಳನ್ನು ಅಲ್ಲಿ ಸ್ಥಾಪಿಸಲಾಗಿತ್ತು. ಇದರ ಪರಿಸ್ಥಿತಿಯು 2003ರಲ್ಲಿ ಬದಲಾಗಲಾರಂಭಿಸಿತು. ಭೂತಾನ್‌ನಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳನ್ನು ಕೆಡವಲು ಭೂತಾನ್ ಮಿಲಿಟರಿ ಆಕ್ರಮಣಕಾರಿ 'ಆಪರೇಷನ್ ಆಲ್ ಕ್ಲಿಯರ್' ಶುರು ಮಾಡಿತ್ತು.

ಬಾಂಗ್ಲಾದೇಶದಲ್ಲಿ 2009ರಿಂದ ಪ್ರಧಾನಿ ಶೇಖ್ ಹಸೀನಾ ಅಧಿಕಾರಕ್ಕೆ ಬಂದ ನಂತರ ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮಗಳು ಪ್ರಾರಂಭವಾದವು. ಇದರ ಪರಿಣಾಮವಾಗಿ ಉನ್ನತ ಬಂಡಾಯ ನಾಯಕರಾದ ಅನುಪ್ ಚೇಟಿಯಾ ಮತ್ತು ಅರಬಿಂದಾ ರಾಜ್‌ಖೋವಾ ಅವರನ್ನು ವಶಕ್ಕೆ ಪಡೆದು, ನಂತರ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. 2019ರಲ್ಲಿ, ಭಾರತೀಯ ಸೇನೆ ಮತ್ತು ಮ್ಯಾನ್ಮಾರ್ ಸೇನೆಯು 'ಸನ್‌ರೈಸ್' ಮತ್ತು 'ಸನ್‌ರೈಸ್ II' ಜಂಟಿ ಕಾರ್ಯಾಚರಣೆಗಳನ್ನು ನಡೆಸಿತ್ತು. ಈ ಮೂಲಕ ಹಲವಾರು ಈಶಾನ್ಯ ಪ್ರದೇಶದ ಉಗ್ರಗಾಮಿ ಗುಂಪುಗಳನ್ನು ಗುರಿಯಾಗಿಸಿಕೊಂಡು, ಅವರ ಶಿಬಿರಗಳನ್ನು ನಿರ್ಮೂಲನೆ ಮಾಡಲಾಯಿತು.

ಉಲ್ಫಾದ ನಾಯಕ ಪರೇಶ್ ಬರುವಾಗೆ ಚೀನಾ ಆಶ್ರಯ: ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಚೀನಾ ಅಂಶವು ಈಶಾನ್ಯ ಪ್ರದೇಶದಲ್ಲಿ ದಂಗೆಗಳ ವಿರುದ್ಧ ಸಹಕರಿಸುವ ಭಾರತ ಮತ್ತು ಮ್ಯಾನ್ಮಾರ್‌ನ ಉದ್ದೇಶಗಳನ್ನು ಹಚ್ಚಿಸಿದೆ. ಈ ಗುಂಪುಗಳನ್ನು ಮರುಸಂಘಟಿಸುವ ಮೂಲಕ ಚೀನಾ ಈಶಾನ್ಯ ಪ್ರದೇಶದ ದಂಗೆಗಳನ್ನು ಬಳಸುವುದನ್ನು ಮುಂದುವರೆಸಿದೆ. ಚೀನಾ ಉಲ್ಫಾದ ನಾಯಕ ಪರೇಶ್ ಬರುವಾಗೆ ಆಶ್ರಯ ನೀಡಿ, ಅವರ ಗುಂಪಿಗೆ ಶಸ್ತ್ರಾಸ್ತ್ರಗಳನ್ನು ಸಹ ಪೂರೈಸುತ್ತಿದೆ.

ಭಾರತ ಮತ್ತು ಆಗ್ನೇಯ ಏಷ್ಯಾದ ನಡುವೆ ಬಂಗಾಳ ಕೊಲ್ಲಿಯ ಮೇಲೆ ನೆಲೆಗೊಂಡಿರುವ ಈಶಾನ್ಯ ಪ್ರದೇಶ ಕಾರ್ಯತಂತ್ರದ ಭೌಗೋಳಿಕ ಸ್ಥಳವಾಗಿದೆ. ಇದು ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಅಭಿವೃದ್ಧಿ ಮತ್ತು ಆರ್ಥಿಕ ಅವಕಾಶಗಳನ್ನು ಉತ್ತೇಜಿಸುವ ಪ್ರವೇಶವಾಗಿ ಹೊರಹೊಮ್ಮಿದೆ. 2014ರಲ್ಲಿ ಭಾರತವು ಆಸಿಯಾನ್ ಮತ್ತು ಇತರ ಪೂರ್ವ ಏಷ್ಯಾದ ದೇಶಗಳೊಂದಿಗೆ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಆಕ್ಟ್ ಈಸ್ಟ್ ನೀತಿಯನ್ನು ಪ್ರಾರಂಭಿಸಿದೆ. 2017ರಲ್ಲಿ ಜಪಾನ್ ಮತ್ತು ಭಾರತ ಸರ್ಕಾರಗಳು ಆಕ್ಟ್ ಈಸ್ಟ್ ಫೋರಮ್​ಅನ್ನು ನಿಕಟ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಲು ಪ್ರಾರಂಭಿಸಿವೆ.

ಜಪಾನ್‌ನಿಂದ ಮಾರ್ಚ್ 2023ರಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಸಮೃದ್ಧಿಯ ಗುರಿಯನ್ನು ಹೊಂದಿರುವ ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್-ಎಫ್​ಒಐಪಿ) (Free and Open Indo-Pacific - FOIP) ಅಡಿಯಲ್ಲಿ ಹೊಸ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಭಾರತ-ಜಪಾನ್-ಆಸ್ಟ್ರೇಲಿಯಾ ನಡುವಿನ ತ್ರಿಪಕ್ಷೀಯ ಸಹಯೋಗವು ಈಶಾನ್ಯ ಪ್ರದೇಶ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ನಡುವಿನ ಸಂಪರ್ಕದ ನಂಟುಗಳನ್ನು ಹೆಚ್ಚಿಸುವ ವಿಚಾರಗಳನ್ನು ಪರಿಶೋಧಿಸುತ್ತದೆ.

ಭಾರತದ ಆಕ್ಟ್ ಈಸ್ಟ್ ನೀತಿ: ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಇನಿಶಿಯೇಟಿವ್ (BIMSTEC) ಸಹ ಈ ಸಂಪರ್ಕಗಳ ಸುಗಮ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ಕೂಡ ಈಶಾನ್ಯ ಪ್ರದೇಶನೊಂದಿಗೆ ಗಡಿಗಳನ್ನು ಹಂಚಿಕೊಳ್ಳುವ ದೇಶಗಳೊಂದಿಗೆ ಪ್ರಮುಖವಾಗಿದೆ. ಈಶಾನ್ಯ ಪ್ರದೇಶವು ಭಾರತದ ಆಕ್ಟ್ ಈಸ್ಟ್ ನೀತಿ (Act East Policy)ಗೆ ಮಾತ್ರ ಮುಖ್ಯವಲ್ಲ, ಪಶ್ಚಿಮ ಮತ್ತು ಪೂರ್ವ ರಾಜ್ಯಗಳೊಂದಿಗೆ ಭಾರತದ ಪಾಲುದಾರಿಕೆಯ ವ್ಯಾಪ್ತಿಯನ್ನು ತೀವ್ರಗೊಳಿಸಲು ಒಂದು ವೇಗವನ್ನು ಒದಗಿಸುತ್ತದೆ. ಇದರ ದೃಷ್ಟಿಯಿಂದ ಆಕ್ಟ್ ಈಸ್ಟ್ ನೀತಿ ಮತ್ತು ಜಪಾನ್‌ನ ಎಫ್​ಒಐಪಿ ದೃಷ್ಟಿಯ ಒಮ್ಮುಖದ ಮೂಲಕ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕ ಅವಕಾಶಗಳನ್ನು ಉತ್ತೇಜಿಸುವುದು. ಜೊತೆಗೆ ಶಾಂತಿ ಒಪ್ಪಂದಗಳ ಮಾತುಕತೆಗಳು ಮತ್ತು ಅನುಷ್ಠಾನವನ್ನು ಸಂಯೋಜಿಸುವ ಸಮಗ್ರ ವಿಧಾನದೊಂದಿಗೆ ಈಶಾನ್ಯ ಪ್ರದೇಶದ ದಂಗೆಕೋರ ಸವಾಲುಗಳನ್ನು ಎದುರಿಸಲು ಭಾರತ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ತಾಲೀಮು: 500 ಕ್ಷೇತ್ರಗಳ ಸಮೀಕ್ಷೆಗೆ ಪ್ಲಾನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.