ನೋಯ್ಡಾ(ಉತ್ತರ ಪ್ರದೇಶ): ನಿಯಮ ಮೀರಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇರೆಗೆ ಕೆಡವಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಉತ್ತರ ಪ್ರದೇಶದ ನೋಯ್ಡಾದ ಸೂಪರ್ಟೆಕ್ನ ಅವಳಿ ಗೋಪುರ ಕಟ್ಟಡವನ್ನು ಸುಮಾರು 3,700 ಕೆಜಿ ಸ್ಫೋಟಕಗಳೊಂದಿಗೆ ಆಗಸ್ಟ್ 28ರಂದು ಕೆಡವಲು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾರ್ಜಿಂಗ್ ಪ್ರಕ್ರಿಯೆ - ಸ್ಫೋಟಕಗಳನ್ನು ಇರಿಸುವ ಪ್ರಕ್ರಿಯೆ ಸೋಮವಾರ ಸಂಜೆ ಪೂರ್ಣಗೊಂಡಿದ್ದು, ಟ್ರಂಕಿಂಗ್ ಎಂದು ಕರೆಯಲ್ಪಡುವ ಮುಂದಿನ ಪ್ರಕ್ರಿಯೆ ಇಂದು ಪ್ರಾರಂಭವಾಲಿದೆ ಎಂದಿದ್ದಾರೆ.
ಡಿಫೈಸ್ ಎಂಜಿನಿಯರಿಂಗ್‌ನ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸಂಸ್ಥೆಯೊಂದು ಅವಳಿ ಗೋಪುರಗಳನ್ನು ಕೆಡವಲು ಗುತ್ತಿಗೆ ಪಡೆದಿದೆ. ಬ್ಲಾಸ್ಟರ್‌ಗಳು ಮತ್ತು ತರಬೇತಿ ಪಡೆದ ಕೆಲಸಗಾರರು ಸೇರಿದಂತೆ ಒಟ್ಟು 40 ಜನರು ಆಗಸ್ಟ್ 13 ರಂದು ಸೆಯಾನೆ (29 ಮಹಡಿಗಳು) ಮತ್ತು ಅಪೆಕ್ಸ್ (32 ಮಹಡಿಗಳು) ಟವರ್‌ಗಳನ್ನು ಒಟ್ಟಿಗೆ ಚಾರ್ಜ್ ಮಾಡಲು ಪ್ರಾರಂಭಿಸಿದ್ದರು. ತಂಡವು ಸೆಯಾನೆ ಮೇಲೆ ಮಾತ್ರ ಕೇಂದ್ರೀಕರಿಸಿ ಆಗಸ್ಟ್ 17 ರೊಳಗೆ ಅದರ ಚಾರ್ಜಿಂಗ್ ಅನ್ನು ಪೂರ್ಣಗೊಳಿಸಿ, ನಂತರ ಅಪೆಕ್ಸ್‌ನ ಚಾರ್ಜಿಂಗ್ ಅನ್ನು ಸೋಮವಾರ ಪೂರ್ಣಳಿಸಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 26 ರೊಳಗೆ ಚಾರ್ಜಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೆವು. ಆಗಸ್ಟ್ 28 ರಂದು ಕೆಡವಲು ನಿಗಧಿಯಾಗಿರುವ ಸಮಯ ಮಧ್ಯಾಹ್ನ 2.30ಕ್ಕೆ ಮುಂಚಿತವಾಗಿ ಯಾವುದೇ ಸಂದರ್ಭದಲ್ಲಿ ಕೆಲಸವು ಪೂರ್ಣಗೊಳ್ಳಬೇಕು ಎಂದು ಖಚಿತಪಡಿಸಿಕೊಳ್ಳಲು ನಾವು ಬಫರ್ ಅವಧಿಯನ್ನು ಇಟ್ಟುಕೊಂಡಿದ್ದೆವು. ಈಗ ಚಾರ್ಜಿಂಗ್ ಪೂರ್ಣಗೊಂಡಿದೆ. ಮುಂದಿನ ಕೆಲಸವೆಂದರೆ ಎಲ್ಲಾ ಸ್ಫೋಟಕಗಳನ್ನು ಒಟ್ಟಿಗೆ ಜೋಡಿಸುವುದು ಮತ್ತು ನಂತರ ಎರಡೂ ಕಟ್ಟಡಗಳಲ್ಲಿನ 20,000 ಸಂಪರ್ಕಗಳನ್ನು ಮರುಪರಿಶೀಲಿಸುವುದು. ಅದನ್ನು ಮಾಡಿದ ನಂತರ, ಡಿಟೋನೇಟರ್‌ನೊಂದಿಗೆ ಮುಖ್ಯ ಸಂಪರ್ಕವನ್ನು ಕೆಡವುವ ದಿನದಂದು ಮಾಡಲಾಗುತ್ತದೆ ಎಂದು ಎಡಿಫೈಸ್ ಅಧಿಕಾರಿ ಹೇಳಿದರು.
ಚಾರ್ಜಿಂಗ್‌ಗಾಗಿ ಸೈಟ್‌ನಲ್ಲಿರುವ 40 ಕಾರ್ಮಿಕರಲ್ಲಿ, ಆಗಸ್ಟ್ 28 ರಂದು ಕೇವಲ 10 ಮಂದಿ ಮಾತ್ರ ಇರುತ್ತಾರೆ. ಅವರಲ್ಲಿ ಇಬ್ಬರು ಭಾರತೀಯ ಬ್ಲಾಸ್ಟರ್‌ಗಳು ಮತ್ತು ಎಡಿಫೈಸ್ ಪ್ರಾಜೆಕ್ಟ್ ಮ್ಯಾನೇಜರ್ ಮಯೂರ್ ಮೆಹ್ತಾ ಮತ್ತು ಅದರ ದಕ್ಷಿಣ ಆಫ್ರಿಕಾದ ಪರಿಣಿತ ಪಾಲುದಾರ ಜೆಟ್ ಡೆಮಾಲಿಷನ್‌ನ ಏಳು ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೂಪರ್ ಟೆಕ್ ಎಮರಾಲ್ಡ್ ಸಂಸ್ಥೆ 40 ಅಂತಸ್ತಿನ 2 ಟವರ್‌ಗಳನ್ನು ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ದವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್ 31, 2021ರಂದು ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸುಮಾರು 100 ಮೀಟರ್ ಎತ್ತರದ ರಚನೆಗಳನ್ನು ಕೆಡವಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : ಕೊಚ್ಚಿಯಲ್ಲಿ ಅನಧಿಕೃತ 2 ಬೃಹತ್ ಕಟ್ಟಡ ತೆರವು.. ಸ್ಫೋಟಕ ಬಳಸಿ ಬಿಲ್ಡಿಂಗ್ ನೆಲಸಮ..