ETV Bharat / bharat

ಇಂದು ಧರೆಗುರುಳಲಿವೆ 70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು.. 3,700 ಕೆಜಿ ಸ್ಫೋಟಕ ಬಳಕೆ - Etv bharat kannada

ನಿಯಮ ಮೀರಿ ಅಕ್ರಮವಾಗಿ ನಿರ್ಮಾಣಗೊಂಡಿರುವ ನೋಯ್ಡಾದ ಬೃಹತ್ ಕಟ್ಟಡಗಳು ಇಂದು ಧರೆಗೆ ಉರಳಿದ್ದು, ಅದಕ್ಕಾಗಿ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ.

Noida Twin Towers  Demolish timeline
Noida Twin Towers Demolish timeline
author img

By

Published : Aug 27, 2022, 5:15 PM IST

Updated : Aug 28, 2022, 6:49 AM IST

ನೋಯ್ಡಾ(ಉತ್ತರ ಪ್ರದೇಶ): ಬರೋಬ್ಬರಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೋಯ್ಡಾದ ಅವಳಿ ಗೋಪುರ ಇಂದು ಧರೆಗೆ ಉರುಳಲಿವೆ. ಅದಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದ್ದು, ಕಾರ್ಯಾಚರಣೆಗೋಸ್ಕರ 3,700 ಕೆಜಿ ಸ್ಫೋಟಕ ಬಳಕೆ ಮಾಡಿಕೊಳ್ಳುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭಗೊಳ್ಳಲಿದೆ.

12 ಸೆಕೆಂಡ್​​​ಗಳಲ್ಲಿ ಸ್ಫೋಟ: ಮಧ್ಯಾಹ್ನ 2:30ಕ್ಕೆ ಕೇವಲ 12 ಸೆಂಕೆಡ್​​​ಗಳಲ್ಲಿ ಅವಳಿ ಗೋಪುರ ಸ್ಫೋಟಗೊಂಡು ಧರೆಗೆ ಉರುಳಲಿದ್ದು, ಈ ವೇಳೆ ಎನ್​​ಡಿಆರ್​​ಎಫ್​, ಸಿಬಿಆರ್​​ಐ ಸೇರಿದಂತೆ ಇತರೆ ಅಧಿಕಾರಿಗಳ ಉಪಸ್ಥಿತಿ ಇರಲಿದೆ. ಇದಕ್ಕೋಸ್ಕರ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ.

Noida Twin Towers  Demolish timeline
ಧರೆಗೆ ಉರುಳಲಿವೆ 70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು

ಸಂಪೂರ್ಣ ಸೇವೆ ಬಂದ್​​: ಈ ಗೋಪುರಗಳ ಸುತ್ತಮುತ್ತ ಸುಮಾರು 7 ಸಾವಿರ ಜನರು ವಾಸವಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಎಲ್ಲರನ್ನೂ ಜಾಗ ಖಾಲಿ ಮಾಡಿಸಲಿದ್ದಾರೆ. ಇದಾದ ಬಳಿಕ ಈ ಪ್ರದೇಶದಲ್ಲಿ ವಿದ್ಯುತ್​, ಅನಿಲ್​ ಸೇರಿದಂತೆ ಎಲ್ಲ ಸೇವೆಗಳು ಬಂದ್​ ಆಗಲಿವೆ. ಕಟ್ಟಡ ಸ್ಫೋಟಗೊಂಡ ನಂತರ ಸಂಜೆ 5 ಗಂಟೆಗೆ ಎಲ್ಲ ಸೇವೆ ಪುನಾರಂಭಗೊಳ್ಳಲಿವೆ. ನಂತರ ಎಲ್ಲ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದಾಗಿದೆ.

ಇದನ್ನೂ ಓದಿ: ನೋಯ್ಡಾ ಅವಳಿ ಕಟ್ಟಡ ಕೆಡವಲು ಮುಹೂರ್ತ ಫಿಕ್ಸ್​.. 3700 ಕೆಜಿ ಸ್ಫೋಟಕ ಸಜ್ಜು

915 ಫ್ಲ್ಯಾಟ್​​​ಗಳು, 20 ಕಮರ್ಷಿಯಲ್ ಅಂಗಡಿ: ಇನ್ನೂ ಬಿಲ್ಡಿಂಗ್​​ ಸ್ಫೋಟಗೊಳ್ಳುತ್ತಿದ್ದಂತೆ ಸುತ್ತಮುತ್ತಲಿನ ಸುಮಾರು 30 ಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಲಿದೆ. ಜೊತೆಗೆ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಧೂಳು ತುಂಬಿಕೊಳ್ಳಲಿದೆ. ಸೂಪರ್ ಟೆಕ್ ಕಂಪನಿ ಈ ಅವಳಿ ಗೋಪುರ ನಿರ್ಮಾಣ ಮಾಡಲು ಬರೋಬ್ಬರಿ 70 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇದರಲ್ಲಿ ಒಟ್ಟು 915 ಫ್ಲ್ಯಾಟ್​​​ಗಳು, 20 ಕಮರ್ಷಿಯಲ್ ಅಂಗಡಿಗಳಿವೆ. ಈ ಕಟ್ಟಡ ಧ್ವಂಸದಿಂದಾಗಿ ಸುಮಾರು ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಲಾಗ್ತಿದೆ.

70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು

ಕಾನೂನು ಬಾಹಿರವಾಗಿ ನಿರ್ಮಾಣ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿ ಎಂಬ ಎರಡು ಅವಳಿ ಗೋಪುರ 2004ರಲ್ಲಿ ನಿರ್ಮಾಣ ಮಾಡಲಾಗಿದ್ದು, ಒಂದು ಕಟ್ಟಡ 103 ಮೀಟರ್ ಹಾಗೂ ಇನ್ನೊಂದು 97 ಮೀಟರ್ ಎತ್ತರವಿದೆ. ಅಕ್ರಮವಾಗಿ ಈ ಕಟ್ಟಡವನ್ನು ನಿಯಮ ಬಾಹಿರವಾಗಿ ನಿರ್ಮಾಣ ಮಾಡಿರುವ ಕಾರಣ ಸುಪ್ರೀಂಕೋರ್ಟ್​​ 2021ರಲ್ಲಿ ಕಟ್ಟಡ ಧ್ವಂಸಗೊಳಿಸಲು ಆದೇಶ ನೀಡಿತ್ತು. ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು. ಹೀಗಾಗಿ, ಕಳೆದ 10 ದಿನಗಳಿಂದ ಎರಡು ಬಿಲ್ಡಿಂಗ್​​ನಲ್ಲಿ ಸ್ಫೋಟಕ ತುಂಬಲಾಗಿದೆ.

ಅವಳಿ ಕಟ್ಟಡ ಬ್ಲಾಸ್ಟ್ ಮಾಡಲಿರುವ ಚೇತನ್​ ದತ್ತಾ: ಎಡಿಫೈಸ್ ಇಂಜಿನಿಯರಿಂಗ್ ಮಾಡಿರುವ ಚೇತನ್​ ದತ್ತಾ ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಬಟನ್​ ಒತ್ತುವ ಮೂಲಕ ಬಿಲ್ಡಿಂಗ್​​ ಧ್ವಂಸ ಮಾಡಲಿದ್ದಾರೆ. ಬಿಲ್ಡಿಂಗ್ ನೆಲಸಮಗೊಂಡ ನಂತರ ಈ ಪ್ರದೇಶದಲ್ಲಿ ಪರಿಶೀಲನೆ ಕಾರ್ಯ ಸಹ ನಡೆಯಲಿದೆ.

Last Updated : Aug 28, 2022, 6:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.