ನವದೆಹಲಿ: ನಾಗರಿಕತೆ ಆರಂಭದಿಂದಲೂ ನಾಯಿಗಳು ಮಾನವಸ್ನೇಹಿ ಜೀವಿಗಳು. ಅಲ್ಲಿಂದ ಇಲ್ಲಿಯವರೆಗೆ ನಾಯಿಗಳು ಮತ್ತು ಮಾನವರು ಜೊತೆ ಜೊತೆಯಾಗಿ ಸಾಗಿದರೂ, ಕೆಲವೊಂದು ಪ್ರಕರಣಗಳು ಮಾನವ ಅನಾಗರಿಕತೆಯೆಡೆಗೆ ಸಾಗುತ್ತಿದ್ದಾನೆ ಎಂಬುದನ್ನು ಸಾಬೀತುಪಡಿಸುತ್ತಲೇ ಇರುತ್ತವೆ.
ಹೌದು, ಆಹಾರ ಅರಸಿ ಬಂದ ಬೀದಿ ನಾಯಿಯೊಂದಕ್ಕೆ ಮಾಂಸದ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಆಹಾರ ಅರಸಿ ಬಂದ ತಪ್ಪಿಗೆ ನಾಯಿ ನೋವಿನಿಂದ ನರಳಾಡುವಂತಾಗಿದೆ. ಈ ಅಮಾನವೀಯ ಘಟನೆ ನಡೆದಿರುವುದು ದೆಹಲಿಯ ಗ್ರೇಟರ್ ನೋಯ್ಡಾದ ಬಳಿಯ ಬೇಟಾ-2 ಪ್ರದೇಶದಲ್ಲಿ.
ಬೇಟಾ-2 ಪ್ರದೇಶದಲ್ಲಿರುವ ಮಾಂಸದ ಅಂಗಡಿಯ ಬಳಿಗೆ ನಾಯಿಯೊಂದು ಬಂದಿದ್ದು, ಅಂಗಡಿ ಮಾಲೀಕ, ನಾಯಿಯನ್ನು ಓಡಿಸುವಂತೆ ತನ್ನ ಸೋದರಳಿಯನಿಗೆ ಸೂಚಿಸಿದ್ದಾನೆ. ಆ ವ್ಯಕ್ತಿ ಚಾಕುವಿನಿಂದ ನಾಯಿಯ ಹೊಟ್ಟೆಯ ಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ.
ನಾಯಿಯ ಹೊಟ್ಟೆಗೆ ಚಾಕು ಚುಚ್ಚಿರುವ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋವನ್ನು ಆಧರಿಸಿ, ಪ್ರಕರಣದ ದಾಖಲಿಸಿಕೊಂಡ ಪೊಲೀಸರು, ಒಬ್ಬ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: 9 ವರ್ಷದಿಂದ ಕರೆಂಟ್ ನೀಡಿಲ್ಲ.. ಆದರೆ ವಿಶೇಷಚೇತನ ವ್ಯಕ್ತಿಗೆ ಬಿಲ್ ಕಳುಹಿಸುತ್ತಲೇ ಇದ್ದಾರೆ ವಿದ್ಯುತ್ ಇಲಾಖೆ!