ಶಾಂತಿನಿಕೇತನ: ಪಶ್ಚಿಮ ಬಂಗಾಳ ಸರ್ಕಾರ ನೀಡುವ ಬಂಗಾ ವಿಭೂಷಣ ಗೌರವವನ್ನು ಅಮರ್ತ್ಯ ಸೇನ್ ಸ್ವೀಕರಿಸುತ್ತಿಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞರ ಕುಟುಂಬ ಮೂಲಗಳು ತಿಳಿಸಿವೆ. ಆದರೆ, ಕುಟುಂಬದವರು ಈ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ರಾಜ್ಯ ಸರ್ಕಾರ ನೀಡುವ ಬಂಗಾ ವಿಭೂಷಣ ಗೌರವವನ್ನು ಏಕೆ ಸ್ವೀಕರಿಸುತ್ತಿಲ್ಲ ಎಂಬುದಕ್ಕೆ ಕುಟುಂಬದವರು ಕಾರಣ ನೀಡಿಲ್ಲ.
ಡಾ. ಅಮರ್ತ್ಯ ಸೇನ್ ಪ್ರಸ್ತುತ ವಿದೇಶದಲ್ಲಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ, ಈ ವರ್ಷ 'ಬಂಗಾ ವಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ರಾಜ್ಯ ಸರ್ಕಾರದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ಅಲ್ಲದೇ ಸರ್ಕಾರದಿಂದ ಪತ್ರದ ಮೂಲಕ ಅವರನ್ನು ಆಹ್ವಾನಿಸಲಾಗಿದೆ.
ಆದರೆ ಈ ಗೌರವವನ್ನು ಸ್ವೀಕರಿಸುವುದಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಈ ನಿರ್ಧಾರವನ್ನು ಅವರು ಬಂಗಾ ವಿಭೂಷಣ ಪ್ರಶಸ್ತಿ ಸಮಿತಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: UPSC ಪರೀಕ್ಷೆ ಪಾಸ್ ಆಗಲಿಲ್ಲ, ನೋಡೋಕೆ ಚೆನ್ನಾಗಿಲ್ಲ ಅಂತಾ ನೆಪ.. ವಿಚ್ಛೇದನಕ್ಕೆ ಮುಂದಾದ ಪತಿ!