ನವದೆಹಲಿ: ದೇಶದ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದ್ದು, "ಚೇತರಿಕೆ"ಯ ಯಾವುದೇ ಲಕ್ಷಣಗಳಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಬುಧವಾರ ಹೇಳಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಶೇ.4.1 ರ ಬೆಳವಣಿಗೆ ದರವನ್ನು ತೋರಿಸುವ ಮೂಲಕ 2021-22ನೇ ಸಾಲಿನಲ್ಲಿ ಒಟ್ಟಾರೆ ಜಿಡಿಪಿ ಶೇ.8.7ರ ಬೆಳವಣಿಗೆಯ ವರದಿ ಆಗಿತ್ತು.
-
The GDP in 2021-22 is barely above the level achieved in the 2019-20
— P. Chidambaram (@PChidambaram_IN) June 1, 2022 " class="align-text-top noRightClick twitterSection" data="
That means that after you two years, India’s Economy is at about the same level as it was on 31-3-2020
">The GDP in 2021-22 is barely above the level achieved in the 2019-20
— P. Chidambaram (@PChidambaram_IN) June 1, 2022
That means that after you two years, India’s Economy is at about the same level as it was on 31-3-2020The GDP in 2021-22 is barely above the level achieved in the 2019-20
— P. Chidambaram (@PChidambaram_IN) June 1, 2022
That means that after you two years, India’s Economy is at about the same level as it was on 31-3-2020
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2021-22ರಲ್ಲಿ 20.1, 8.4, 5.4 ಮತ್ತು 4.1 ರಷ್ಟು ತ್ರೈಮಾಸಿಕ ಬೆಳವಣಿಗೆ ದರಗಳು ಅತ್ಯಂತ ಗಮನಾರ್ಹವಾದ ಗ್ರಾಫ್ ಆಗಿದೆ. ಆ ಗ್ರಾಫ್ ಎಲ್ಲವನ್ನೂ ಹೇಳುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದೆ ಮತ್ತು ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.
2021-22ರಲ್ಲಿನ ಜಿಡಿಪಿಯು 2019-20ರಲ್ಲಿ ಸಾಧಿಸಿದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಅಂದರೆ ನಿಮ್ಮ ಎರಡು ವರ್ಷಗಳ ಅವಧಿಯಲ್ಲಿ, ಭಾರತದ ಆರ್ಥಿಕತೆಯು 31-3-2020 ರಂದು ಇದ್ದ ಅದೇ ಮಟ್ಟದಲ್ಲಿದೆ. ಕೊನೆಯ ತ್ರೈಮಾಸಿಕವು ಶೇ.4.1 ರ ಬೆಳವಣಿಗೆಯ ದರವನ್ನು ತೋರಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಶೇ.8.7ಕ್ಕೆ ತಲುಪಿದ ಭಾರತದ ಜಿಡಿಪಿ.. 4ನೇ ತ್ರೈಮಾಸಿಕದಲ್ಲಿ ಶೇ 4.1ರಷ್ಟು ಏರಿಕೆ!