ETV Bharat / bharat

ಪ್ರಜಾಪ್ರಭುತ್ವದ ಬಗ್ಗೆ ನಮಗೆ ಯಾರೂ ಕಲಿಸಿಕೊಬೇಕಿಲ್ಲ: ವಿಶ್ವಕ್ಕೆ ಭಾರತದ ಸಂದೇಶ

ನಾವು ಪ್ರಜಾಪ್ರಭುತ್ವದ ಎಲ್ಲ ಆಧಾರ ಸ್ತಂಭಗಳನ್ನು ಹೊಂದಿದ್ದೇವೆ. ನಮ್ಮ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೇ ಅಂಗ ಪತ್ರಿಕಾ ರಂಗವು ಅಖಂಡವಾಗಿವೆ. ಅಲ್ಲದೆ ಅತ್ಯಂತ ಮುಕ್ತವಾದ ಸಾಮಾಜಿಕ ಮಾಧ್ಯಮ ನಮ್ಮಲ್ಲಿದೆ. ಹಿಗಾಗಿಯೇ ನಮ್ಮ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಎಂದು ವಿಶ್ವಸಂಸ್ಥೆಯ ರಾಯಭಾರಿ ರುಚಿರಾ ಕಾಂಬೋಜ್ ಹೇಳಿದರು.

ಪ್ರಜಾಪ್ರಭುತ್ವದ ಬಗ್ಗೆ ನಮಗೆ ಯಾರೂ ಕಲಿಸಿಕೊಬೇಕಿಲ್ಲ: ಭಾರತ
No one needs to teach us about democracy India
author img

By

Published : Dec 2, 2022, 1:09 PM IST

ವಿಶ್ವಸಂಸ್ಥೆ: ಪ್ರಜಾಪ್ರಭುತ್ವದ ವಿಷಯದಲ್ಲಿ ನಮಗೆ ಯಾರೂ ಕಲಿಸಿಕೊಡಬೇಕಿಲ್ಲ ಎಂದು ವಿಶ್ವಸಂಸ್ಥೆಯ ರಾಯಭಾರಿ ರುಚಿರಾ ಕಾಂಬೋಜ್ ಹೇಳಿದ್ದಾರೆ. ಡಿಸೆಂಬರ್ ತಿಂಗಳಿಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಾತನಾಡಿದರು.

ಭಾರತವು ಗುರುವಾರ 15 ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಡಿಸೆಂಬರ್ ತಿಂಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಈ ಸಮಯದಲ್ಲಿ ಭಯೋತ್ಪಾದನೆ ತಡೆ ಮತ್ತು ಬಹುಪಕ್ಷೀಯ ಸಂಬಂಧಗಳ ಸುಧಾರಣೆಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಭಾರತ ಈ ಅಧ್ಯಕ್ಷತೆಯ ಅವಧಿ ಮುಗಿಸುವುದರೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯನಾಗಿ ಭಾರತದ ಎರಡು ವರ್ಷಗಳ ಅಧಿಕಾರಾವಧಿ ಕೊನೆಯಾಗಲಿದೆ.

ವಿಶ್ವಸಂಸ್ಥೆಗೆ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿರುವ ಶ್ರೀಮತಿ ಕಾಂಬೋಜ್ ಅವರು ಹಾರ್ಸ್​ ಶೂ ಮೇಜಿನ ಅಧ್ಯಕ್ಷರ ಆಸನದಲ್ಲಿ ಕುಳಿತುಕೊಳ್ಳುತ್ತಾರೆ. ಭಾರತವು ಅಧ್ಯಕ್ಷನಾದ ಮೊದಲನೇ ದಿನ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವರದಿಗಾರರನ್ನು ಉದ್ದೇಶಿಸಿ ಮಾಸಿಕ ಕೆಲಸದ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ವಿಚಾರದಲ್ಲಿ ನಾವು ಏನು ಮಾಡಬೇಕೆಂದು ನಮಗೆ ಹೇಳಬೇಕಾಗಿಲ್ಲ. ಭಾರತ ಬಹುಶಃ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಅತ್ಯಂತ ಪುರಾತನ ನಾಗರಿಕತೆಯಾಗಿದೆ. 2500 ವರ್ಷಗಳ ಹಿಂದೆ ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳಿದ್ದವು. ನಾವು ಯಾವಾಗಲೂ ಪ್ರಜಾಪ್ರಭುತ್ವ ದೇಶವಾಗಿದ್ದೇವೆ. ನಾವು ಪ್ರಜಾಪ್ರಭುತ್ವದ ಎಲ್ಲ ಆಧಾರ ಸ್ತಂಭಗಳನ್ನು ಹೊಂದಿದ್ದೇವೆ. ನಮ್ಮ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೇ ಅಂಗ ಪತ್ರಿಕಾ ರಂಗವು ಅಖಂಡವಾಗಿವೆ. ಅಲ್ಲದೆ ಅತ್ಯಂತ ಮುಕ್ತವಾದ ಸಾಮಾಜಿಕ ಮಾಧ್ಯಮ ನಮ್ಮಲ್ಲಿದೆ. ಹಿಗಾಗಿಯೇ ನಮ್ಮ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಎಂದರು.

ಪ್ರತಿ ಐದು ವರ್ಷಗಳಿಗೊಮ್ಮೆ ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ನಡೆಸುತ್ತೇವೆ. ಪ್ರತಿಯೊಬ್ಬರೂ ತಮ್ಮ ಇಚ್ಛೆಯಂತೆ ಮತ್ತು ಇಷ್ಟಪಟ್ಟಂತೆ ಅಭಿಪ್ರಾಯ ತಿಳಿಸಲು ಮುಕ್ತರಾಗಿದ್ಧಾರೆ. ನಮ್ಮ ದೇಶ ವೇಗವಾಗಿ ಸುಧಾರಿಸುತ್ತಿದೆ, ರೂಪಾಂತರಗೊಳ್ಳುತ್ತಿದೆ ಮತ್ತು ಬದಲಾಗುತ್ತಿದೆ. ಇದನ್ನೆಲ್ಲ ನಾನು ಹೇಳಬೇಕಿಲ್ಲ. ನಮ್ಮ ಬಗ್ಗೆ ಇದನ್ನು ಬೇರೆಯವರು ಹೇಳುತ್ತಿದ್ದಾರೆ ಎಂದು ಕಾಂಬೋಜ್ ತಿಳಿಸಿದರು.

ಇದನ್ನೂ ಓದಿ: ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ: ಭಾರತ, ಬ್ರೆಜಿಲ್‌ಗೆ ರಷ್ಯಾ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.