ETV Bharat / bharat

ಗ್ರಾಹಕರಿಂದು ಸ್ವಲ್ಪ ನಿರಾಳ: ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ

ಮಾರ್ಚ್​ 22ರಿಂದಲೂ ಸತತವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದ ಪೆಟ್ರೋಲ್​-ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಏರಿಕೆ ಕಂಡು ಬಂದಿಲ್ಲ.

Petrol-Diesel Price
Petrol-Diesel Price
author img

By

Published : Apr 1, 2022, 9:03 AM IST

ಪಂಚರಾಜ್ಯ ಚುನಾವಣೆ ಫಲಿತಾಂಶ ಬಹಿರಂಗಗೊಂಡ ಬೆನ್ನಲ್ಲೇ ಪ್ರತಿದಿನ ತೈಲ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ, ಇಂದು ಬೆಲೆ ಏರಿಕೆಗೆ ಬ್ರೇಕ್​ ಬಿದ್ದಿದೆ. ಹೀಗಾಗಿ, ವಾಹನ ಸವಾರರು ಸ್ವಲ್ಪ ನಿರಾಳರಾಗಿದ್ದಾರೆ. ಪ್ರಮುಖವಾಗಿ ದೆಹಲಿ, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಇಂಡಿಯನ್​ ಆಯಿಲ್ ಕಾರ್ಪೊರೇಷನ್​ ಲಿಮಿಟೆಡ್​​(ಐಒಸಿಎಲ್​) ಬಿಡುಗಡೆ ಮಾಡಿರುವ ದರಪಟ್ಟಿಯ ಪ್ರಕಾರ, ಬೆಂಗಳೂರಿನಲ್ಲಿಂದು ಪೆಟ್ರೋಲ್‌ ದರ ಲೀ. 100.56 ಪೈಸೆ, ಡೀಸೆಲ್‌ ಬೆಲೆ ಲೀ.ಗೆ 90.49 ಇದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 101.81 ಪೈಸೆ ಹಾಗೂ ಡೀಸೆಲ್​​ಗೆ 93.07 ರೂ. ಇತ್ತು. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 116.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 100.94 ರೂ. ಇದಲ್ಲದೇ, ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ 107.45 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 97.52 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 111.35 ರೂ ಮತ್ತು ಡೀಸೆಲ್ ರೂ 96.22 ಕ್ಕೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: 19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹250 ಏರಿಕೆ

ಮಾರ್ಚ್​​ 22ರಿಂದ ತೈಲ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡು ಬರುತ್ತಿದ್ದು, ಇವತ್ತು ಸೇರಿದಂತೆ ಕೇವಲ ಎರಡು ದಿನ ಮಾತ್ರ ತೈಲ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿರಲಿಲ್ಲ. ನಿನ್ನೆ ಕೂಡ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 70ರಿಂದ 85 ಪೈಸೆಗಳಷ್ಟು ಏರಿಕೆ ಕಂಡು ಬಂದಿದೆ.

ಜೆಟ್ ಇಂಧನ ಗಣನೀಯ ಏರಿಕೆ: ಸರ್ಕಾರಿ ಸ್ವಾಮ್ಯದ ಚಿಲ್ಲರೆ ಇಂಧನ ಪೂರೈಕೆ ವ್ಯಾಪಾರಿಗಳ ಮಾಹಿತಿ ಪ್ರಕಾರ, ಜೆಟ್‌ ತೈಲ ದರ ಪ್ರತಿ ಕಿಲೋ ಮೀಟರ್​​ಗೆ ಶೇ. 2ರಷ್ಟು ಏರಿಕೆಯಾಗಿದ್ದು, ಸದ್ಯದ ಬೆಲೆ 1,12,924 ರೂ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.