ETV Bharat / bharat

ಎಲೆಕ್ಟ್ರಿಕ್​ ವಾಹನಗಳಿಗೆ ಹೆಚ್ಚುತ್ತಿದೆ ಬೇಡಿಕೆ.. ಆದರೆ ಇನ್ನೂ ಸಿದ್ಧವಾಗಿಲ್ಲ ಮಾರ್ಗಸೂಚಿ! - ಯಾವುದೇ ಮಾರ್ಗಸೂಚಿ ಸಿದ್ಧವಾಗಿಲ್ಲ

ಪಂಜಾಬ್​ನಲ್ಲಿ ಪ್ರಸ್ತುತ ಇವಿ ನೀತಿ ಕುರಿತು ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಸಿದ್ದವಾಗಿಲ್ಲ. ಆದರೂ ಚಾರ್ಜಿಂಗ್​ ಕೇಂದ್ರ ಸ್ಥಾಪಿಸಲಾಗಿದೆ.

No EV regulations in Punjab, no guidelines from Govt

author img

By

Published : May 27, 2023, 4:00 PM IST

ಅಮೃತಸರ( ಪಂಜಾಬ್​): ಇವಿ ವಾಹನಗಳ ಜನಪ್ರಿಯತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್​ ಸರ್ಕಾರ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತಂದಿದೆ. ಆದರೆ, ಈ ಸಂಬಂಧ ಜನರಿಗೆ ಯಾವುದೇ ಮಾರ್ಗಸೂಚಿ ಸಿದ್ಧವಾಗಿಲ್ಲ. ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ದೃಢವಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿಯನ್ನು ಘೋಷಿಸಿದ್ದರೆ, ಪಂಜಾಬ್ ಸರ್ಕಾರವು 1 ಲಕ್ಷದ ನಂತರ 10,000 ಸಬ್ಸಿಡಿಯನ್ನು ಘೋಷಿಸಿದೆ.

ಆದರೆ, ಪಂಜಾಬ್‌ನಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಿದ್ಧಪಡಿಸುವ ಕಾರ್ಯ ರೂಪಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಆದರೆ, ಪಂಜಾಬ್ ಸರ್ಕಾರ ಕೇಂದ್ರ ಸರ್ಕಾರಕ್ಕೆ 40 ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆ ಇಟ್ಟಿದೆ. ಇದಕ್ಕಾಗಿ ಜಲಂಧರ್‌ನ ಬಿಎಸ್‌ಎಫ್ ಚೌಕ್‌ನಲ್ಲಿ ಕೇವಲ ಒಂದು ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪಂಜಾಬ್‌ನಲ್ಲಿ, ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದರೂ ಅವರಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಅಲ್ಲಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ.

ಪಂಜಾಬ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿದೆ ಬೇಡಿಕೆ: ಪಂಜಾಬ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಪೈಕಿ ಹೆಚ್ಚಿನ ಜನರು ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಇವಿಗಳ ಬೇಡಿಕೆ ಶೇಕಡಾ 46 ರಷ್ಟು ಹೆಚ್ಚಾಗಿದೆ ಎಂದು ದತ್ತಾಂಶ ತಿಳಿಸಿದೆ. 2022 ರಲ್ಲಿ 4,752 ಇವಿಗಳನ್ನು ಖರೀದಿಸಲಾಗಿದೆ. 2023ರಲ್ಲಿ 6,942 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲಾಗಿದೆ.

ಪಂಜಾಬ್‌ನಲ್ಲಿ ಈ ಅಂಕಿ - ಅಂಶವು ತುಂಬಾ ಹೆಚ್ಚಿಲ್ಲದಿದ್ದರೂ, ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುವ ಖರೀದಿಯ ಶೇಕಡಾವಾರು ಹೆಚ್ಚಳದಿಂದ ಅಂದಾಜು ಮಾಡಬಹುದು. ಪಂಜಾಬ್‌ನಲ್ಲಿ ಸದ್ಯ ಯಾವುದೇ ಎಲೆಕ್ಟ್ರಿಕ್ ಬಸ್ ಸಂಚಾರ ಕಂಡು ಬಂದಿಲ್ಲ. ಆದರೆ, ದ್ವಿಚಕ್ರ ವಾಹನಗಳ ಖರೀದಿಗೆ ಜನರು ಮುಂದಾಗಿದ್ದಾರೆ. ಸರ್ಕಾರ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸದ ಕಾರಣ, ಜನರು ಹೆಚ್ಚೆಚ್ಚು ಎಲೆಕ್ಟ್ರಿಕ್​ ವಾಹನಗಳ ಖರೀದಿ ಸಾಧ್ಯವಾಗುತ್ತಿಲ್ಲ. ಕೆಲವು ಸ್ಥಳಗಳಲ್ಲಿ, ಯಾವುದೇ ಚಾರ್ಜಿಂಗ್ ಸ್ಟೇಷನ್‌ಗಳಿಲ್ಲ, ಇದ್ದರೂ ಅವು ಖಾಸಗಿ ವಲಯದ ಚಾರ್ಚಿಂಗ್​ ಸ್ಟೇಷನ್​ಗಳಾಗಿವೆ.

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. 2022ರಲ್ಲಿ 3,39,969 ಇವಿಗಳನ್ನು ಖರೀದಿಸಿದ್ದರೆ, ಇಲ್ಲಿಯವರೆಗೆ 5,28,480 ಇವಿಗಳನ್ನು ಜನರು ಖರೀದಿಸಿ ಬಳಕೆ ಮಾಡುತ್ತಿದ್ದಾರೆ. ವರ್ಷಾಂತ್ಯದ ವೇಳೆಗೆ ಸಂಖ್ಯೆಯು ಇನ್ನಷ್ಟು ಹೆಚ್ಚಾಗಬಹುದು. ಈ ವರ್ಷ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. 2022 ರಲ್ಲಿ 3,39,969 ಮಾರಾಟವಾಗಿದೆ 2023 ರಲ್ಲಿ ಇದುವರೆಗೆ 5,28,480 ಮಾರಾಟವಾಗಿದೆ ಎಂದು ಸರ್ಕಾರದ ಅಂಕಿ- ಅಂಶಗಳಿಂದ ತಿಳಿದು ಬಂದಿದೆ.

ಪಂಜಾಬ್‌ನ ಇವಿ ನೀತಿ: ಪಂಜಾಬ್ ಸರ್ಕಾರವು ಇವಿ ಉತ್ತೇಜನಕ್ಕಾಗಿ ಒಂದು ಲಕ್ಷ ಖರೀದಿದಾರರಿಗೆ 10,000 ರೂ ವರೆಗೆ ಆರ್ಥಿಕ ಸಹಾಯ ನೀಡುತ್ತದೆ. ಮೊದಲ 10,000 ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಮತ್ತು ಇ-ರಿಕ್ಷಾಗಳನ್ನು ಖರೀದಿಸುವವರಿಗೆ 30,000 ರೂ, ಮೊದಲ ಇ-ಕಾರ್ಟ್ ಖರೀದಿದಾರರಿಗೆ 30,000 ರೂ.ವರೆಗೆ ನೀಡುತ್ತಿದೆ. ಪಂಜಾಬ್ ಹೊರತುಪಡಿಸಿ, ಇತರ ರಾಜ್ಯಗಳ ಸರ್ಕಾರಗಳು ಇವಿಗಳ ಖರೀದಿಗೆ ಸಾಕಷ್ಟು ಸಬ್ಸಿಡಿಯನ್ನು ನೀಡುತ್ತಿವೆ. ಇದರಿಂದಾಗಿ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಇಬ್ಬರು ಸಹೋದರಿಯರ ಜೊತೆ ಮದುವೆ ನಿಶ್ಚಯವಾಗಿದ್ದ ಸಹೋದರ ಸಜೀವ ದಹನ: ಕಾರಣ ನಿಗೂಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.