ETV Bharat / bharat

ಕೋವಿಡ್​ನಿಂದ ಮೃತರ ದೇಹಗಳನ್ನು ದರದರನೆ ಎಳೆದೊಯ್ದರು.. ಎಲ್ಲಿದೆ ಮಾನವೀಯತೆ?

ಕೋವಿಡ್​ನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕಾಗಿ ಕಟಿಹಾರ್ - ಪೂರ್ಣಿಯಾ ರಸ್ತೆಯ ಭಾಸನಾ ಸೇತುವೆ ಕೆಳಗೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿತ್ತು. ಆದರೆ ಹೀಗೆ ಶವಗಳನ್ನು ಎಳೆದೊಯ್ಯುವ ದೃಶ್ಯಾವಳಿಗಳು ಜಿಲ್ಲಾಡಳಿತದ ಭರವಸೆ ಹುಸಿಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿವೆ.

No dignity even in death for Bihar's Covid-19 victims
ಕೋವಿಡ್​ನಿಂದ ಮೃತರ ದೇಹಗಳನ್ನು ದರದರನೆ ಎಳೆದೊಯ್ದರು..
author img

By

Published : Apr 27, 2021, 8:09 PM IST

ಕಟಿಹಾರ/ ಬಕ್ಸಾರ (ಬಿಹಾರ): ಕೊರೊನಾ ವೈರಸ್​ ಮಹಾಮಾರಿಯ ಅಬ್ಬರದ ನಡುವೆ ಮನಕಲಕುವ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಪಿಪಿಇ ಡ್ರೆಸ್ ಧರಿಸಿದ ಕೆಲವರು ಮೃತ ದೇಹಗಳನ್ನು ಆ್ಯಂಬುಲೆನ್ಸ್​ನಿಂದ ಸ್ಮಶಾನ ಭೂಮಿಗೆ ದರದರನೆ ಎಳೆದೊಯ್ಯುವ ದೃಶ್ಯಗಳು ಎಲ್ಲೆಡೆ ಸಂತಾಪ ಹಾಗೂ ಆಕ್ರೋಶದ ಅಲೆ ಉಕ್ಕಿಸಿವೆ.

ಕೋವಿಡ್​ನಿಂದ ಸತ್ತವರ ಶವಗಳಿಗೆ ಯಾವುದೇ ಮರ್ಯಾದೆ ನೀಡದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಬಿಹಾರ ಸರ್ಕಾರದ ವಿರುದ್ಧ ಕೇಳಿ ಬಂದ ಮಧ್ಯೆಯೇ ಇಂಥದೊಂದು ಘಟನೆಯ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಆರೋಪಗಳಿಗೆ ಪುಷ್ಟಿ ನೀಡುವಂತಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಬಿಹಾರ ಉಪಮುಖ್ಯಮಂತ್ರಿಯ ಸ್ವಕ್ಷೇತ್ರವಾದ ಕಟಿಹಾರ್​ನಲ್ಲಿ ಎಂಬುದು ಮತ್ತೂ ಆತಂಕಕಾರಿಯಾಗಿದೆ.

ಕೋವಿಡ್​ನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕಾಗಿ ಕಟಿಹಾರ್ - ಪೂರ್ಣಿಯಾ ರಸ್ತೆಯ ಭಾಸನಾ ಸೇತುವೆ ಕೆಳಗೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿತ್ತು. ಆದರೆ ಹೀಗೆ ಶವಗಳನ್ನು ಎಳೆದೊಯ್ಯುವ ದೃಶ್ಯಾವಳಿಗಳು ಜಿಲ್ಲಾಡಳಿತದ ಭರವಸೆ ಹುಸಿಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿವೆ.

No dignity even in death for Bihar's Covid-19 victims
ಕೋವಿಡ್​ನಿಂದ ಮೃತರ ದೇಹಗಳನ್ನು ದರದರನೆ ಎಳೆದೊಯ್ದರು.. ಎಲ್ಲಿದೆ ಮಾನವೀಯತೆ?

ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿ, ಶವಗಳನ್ನು ಸ್ಟ್ರೆಚರ್​ ಮೇಲೆ ಹಾಕಿ ಸಾಗಿಸುವ ಬದಲು ದರದರನೆ ಎಳೆದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ಈ ಮೂವರಲ್ಲಿ ಇಬ್ಬರು ಪಿಪಿಇ ಕಿಟ್​ ಧರಿಸಿದ್ದರೆ, ಇನ್ನೊಬ್ಬ ಯಾವುದೇ ಸುರಕ್ಷತಾ ಕವಚ ಧರಿಸಿರಲಿಲ್ಲ.

ವಿಡಿಯೋದಲ್ಲಿನ ದೃಶ್ಯಾವಳಿ ಸತ್ಯ ಎಂದ ಜಿಲ್ಲಾ ಮ್ಯಾಜಿಸ್ಟ್ರೇಟ್

ಕೋವಿಡ್​ನಿಂದ ಮೃತರ ದೇಹಗಳನ್ನು ಎಳೆದೊಯ್ಯುತ್ತಿರುವ ದೃಶ್ಯಾವಳಿಗಳ ಘಟನೆ ನಡೆದಿರುವ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ ಒಪ್ಪಿಕೊಂಡಿದ್ದು, ಈ ಘಟನೆ ಕಟಿಹಾರ್​ನಲ್ಲಿಯೇ ನಡೆದಿರುವುದಾಗಿ ದೃಢಪಡಿಸಿದ್ದಾರೆ. ಅಂತ್ಯ ಸಂಸ್ಕಾರದ ಸ್ಥಳ ತಲುಪುವ ಮುನ್ನವೇ ಆ್ಯಂಬುಲೆನ್ಸ್​ ದುರಸ್ತಿಗೆ ಬಂದು ನಿಂತುಹೋಗಿತ್ತು ಹಾಗೂ ಅದರಲ್ಲಿರುವ ಸ್ಟ್ರೆಚರ್​ ಕೆಲಸಕ್ಕೆ ಬಾರದಂತಾಗಿತ್ತು ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.