ETV Bharat / bharat

ಲಾಮ್ಡ್‌ ರೂಪಾಂತರಿ ಭಾರತದಲ್ಲಿ ಪತ್ತೆಯಾಗಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ - ಕೇಂದ್ರ ಆರೋಗ್ಯ ಸಚಿವಾಲಯ

ಕೊರೊನಾ 2ನೇ ಅಲೆಯ ಬೆದರಿಕೆ ಇನ್ನೂ ಹೋಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರವಾಸಿ ಪ್ರದೇಶಗಳಲ್ಲಿ ನಿಯಮಗಳನ್ನು ಪಾಲಿಸದಿರುವುದು ವೈರಸ್‌ನ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ
ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ
author img

By

Published : Jul 9, 2021, 11:30 PM IST

ನವದೆಹಲಿ: ಕೋವಿಡ್‌ನ 2ನೇ ಅಲೆಯ ಬೆದರಿಕೆ ಇನ್ನೂ ಹೋಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾ ನಿಯಮಗಳನ್ನು ಪಾಲಿಸದಿದ್ದರೆ ಮತ್ತೊಮ್ಮೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದೆ.

ನಿರ್ಬಂಧಗಳನ್ನು ಪಾಲಿಸದೆ ಜನರು ಪ್ರವಾಸಿ ಪ್ರದೇಶಗಳಲ್ಲಿ ಅಲೆದಾಡುತ್ತಿರುವುದು ಆತಂಕದ ವಿಷಯವಾಗಿದೆ. ವಿವಿಧ ದೇಶಗಳನ್ನು ಗೊಂದಲಕ್ಕೀಡುಮಾಡುವ ಲ್ಯಾಮ್ಡಾ ರೂಪಾಂತರಿ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ.

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿಕೆ ಪಾಲ್‌ ಮಾತನಾಡಿ, ಲ್ಯಾಮ್ಡಾ ರೂಪಾಂತರಿ ಎಂಬುದು ವೆರಿಯೆಂಟ್‌ ಆಫ್‌ ಇಂಟ್ರಸ್ಟ್‌. ಈ ರೂಪಾಂತರವನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಭಾರತದಲ್ಲಿ ಈ ಸೋಂಕು ಪತ್ತೆಯಾಗಿರುವುದಕ್ಕೆ ಈವರೆಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ಆ ಎರಡು ರಾಜ್ಯಗಳಲ್ಲಿ..

ಕಳೆದ ವಾರ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೇಸ್‌ಗಳು ಮಹಾರಾಷ್ಟ್ರ (ಶೇ.21) ಮತ್ತು ಕೇರಳ (ಶೇ.32)ದಲ್ಲಿ ಇವೆ ಎಂದು ವಿಕೆ ಪಾಲ್ ತಿಳಿಸಿದ್ದಾರೆ. ನಿನ್ನೆ ಕೇಂದ್ರಾಡಳಿತ ಪ್ರದೇಶ ಮತ್ತು 17 ರಾಜ್ಯಗಳ 66 ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವ್‌ ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಹಾಗೂ 15 ರಾಜ್ಯಗಳ 90 ಜಿಲ್ಲೆಗಳಿಂದ 80 ಪ್ರತಿಶತ ಕೋವಿಡ್‌ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರದೇಶಗಳಲ್ಲಿ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ಮುನ್ನೆಚ್ಚರಿಕೆಗಳನ್ನು ಮರೆಯಬಾರದು. ದೈಹಿಕ ಅಂತರ, ಮಾಸ್ಕ್‌ ಧರಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸದೆ ಪ್ರವಾಸಿ ಪ್ರದೇಶಗಳಲ್ಲಿ ಅಲೆದಾಡುವುದು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಇದರ ನಡುವೆಯೂ ದೇಶಾದ್ಯಂತ ಹೊಸ ಪ್ರಕರಣಗಳ ದಾಖಲು ಕ್ಷೀಣಿಸುತ್ತಿದೆ. ಹೊಸ ಪ್ರಕರಣಗಳಲ್ಲಿ ಸರಾಸರಿ ಶೇಕಡಾ 8 ರಷ್ಟು ಕಡಿತವಾಗಿದೆ. ಮರುಪಡೆಯುವಿಕೆಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ವಿಕೆ ಪಾಲ್‌ ಅವರು ಹೇಳಿದ್ದಾರೆ. ಇಂದು ಚೇತರಿಕೆ ಪ್ರಮಾಣವು ಶೇಕಡಾ 97.2 ರಷ್ಟಿದೆ. ಗರ್ಭಿಣಿಯರು ಲಸಿಕೆ ಪಡೆಯಲು ಮುಂದಾಗಬೇಕು ಎಂದು ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.