ಪಟಿಯಾಲ (ಪಂಜಾಬ್): ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಪಟಿಯಾಲ ಜೈಲಿನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿಯೊಂದಿಗೆ ಒಂದೇ ಸೆಲ್‌ನಲ್ಲಿದ್ದ ಇದ್ದು ಭದ್ರತಾ ಲೋಪವಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ರಾಜ್ಯದ ಜೈಲು ಇಲಾಖೆ, ಅಂತಹ ವರದಿಗಳು ನಿರಾಧಾರ ಮತ್ತು ಮಾನಹಾನಿಕರ ಎಂದು ಹೇಳಿದೆ.
ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಪೊಲೀಸ್ ಕಾನ್ಸ್ಟೇಬಲ್ ಇಂದರ್‌ಜಿತ್ ಸಿಂಗ್ ಅವರೊಂದಿಗೆ ಸಿಧು ಅವರನ್ನು ಒಂದೇ ಸೆಲ್‌ನಲ್ಲಿ ಇರಿಸಲಾಗಿಲ್ಲ. ಈ ಎಲ್ಲಾ ಸುದ್ದಿಗಳು ಮತ್ತು ವರದಿಗಳು ಕೇವಲ ವದಂತಿ ಮತ್ತು ಆಧಾರರಹಿತವಾಗಿವೆ ಎಂದು ಪಂಜಾಬ್ ಜೈಲು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಸಿಧು ಅವರ ಭದ್ರತೆಯ ದೃಷ್ಟಿಯಿಂದ ಸೆಲ್ ಹಂಚಿಕೊಳ್ಳುತ್ತಿರುವ ಕೈದಿಗಳ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಜೈಲು ಅಧಿಕಾರಿಗಳ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಭದ್ರತಾ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾದಕವಸ್ತು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸೇವೆಯಿಂದ ವಜಾಗೊಂಡ ಮಾಜಿ ಪೊಲೀಸ್ ಕಾನ್ಸ್ಟೇಬಲ್ ಇಂದರ್‌ಜಿತ್ ಸಿಂಗ್ ಅವರೊಂದಿಗೆ ಸಿಧು ಅವರನ್ನು ಪಟಿಯಾಲಾ ಜೈಲಿನಲ್ಲಿ ಒಂದೇ ಸೆಲ್‌ನಲ್ಲಿ ಇರಿಸಲಾಗಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ : ಜೈಕಾರ ಹಾಕಿದ ಕಾರ್ಯಕರ್ತನಿಗೆ ಹೊಡೆದ ಮಾಜಿ ಶಾಸಕ ಸುರೇಶ್ ಗೌಡ