ETV Bharat / bharat

ಎರಡೂವರೆ ಗಂಟೆ ಕಾದರೂ ಬಾರದ ಆಂಬ್ಯುಲೆನ್ಸ್​, ಸಿಡಿಲೇಟು ಬಿದ್ದ ವ್ಯಕ್ತಿ ಬೈಕ್​ನಲ್ಲೇ ಆಸ್ಪತ್ರೆಗೆ ರವಾನೆ: ಸಾವು

ಒಡಿಶಾದಲ್ಲಿ ಸಿಡಿಲೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬ್ಯುಲೆನ್ಸ್​ ​ ಬಾರದ್ದಕ್ಕೆ ಬೈಕ್​ನಲ್ಲಿ ಸಾಗಿಸಲಾಗಿದೆ. ಆದರೆ, ದುರಾದೃಷ್ಟವಶಾತ್​ ಆತ ಸಾವನ್ನಪ್ಪಿದ್ದಾನೆ.

ಎರಡೂವರೆ ಗಂಟೆ ಕಾದರೂ ಬಾರದ ಆಂಬ್ಯುಲೆನ್ಸ್​
ಎರಡೂವರೆ ಗಂಟೆ ಕಾದರೂ ಬಾರದ ಆಂಬ್ಯುಲೆನ್ಸ್​
author img

By ETV Bharat Karnataka Team

Published : Sep 13, 2023, 3:45 PM IST

ಅಂಗುಲ್ (ಒಡಿಶಾ): ಸರ್ಕಾರಗಳು ಆರೋಗ್ಯ ವ್ಯವಸ್ಥೆಯಲ್ಲಿ ಎಷ್ಟೇ ಸುಧಾರಣೆ ತಂದರೂ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅದರ ಲಭ್ಯತೆ ಕಡಿಮೆಯೇ. ಒಡಿಶಾದಲ್ಲಿ ಸಿಡಿಲು ಬಡಿದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬ್ಯುಲೆನ್ಸ್​ ಬಾರದ ಕಾರಣ 10 ಕಿಮೀವರೆಗೂ ಬೈಕ್​ನಲ್ಲಿ ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ ಆಘಾತಕಾರಿ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ದುರಾದೃಷ್ಟವಶಾತ್​ ವ್ಯಕ್ತಿ ಮೃತಪಟ್ಟಿದ್ದಾನೆ. ಆಂಬ್ಯುಲೆನ್ಸ್​ ಬಾರದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ: ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಕಾರಣ ಮಂಗಳವಾರ ದನ ಮೇಯಿಸುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಸಿಡಿಲು ಬಡಿದಿದೆ. ದಿಢೀರ್​ ಕುಸಿದುಬಿದ್ದ ವ್ಯಕ್ತಿಗೆ ಸಿಡಿಲಿನಿಂದ ತೀವ್ರ ಘಾಸಿಯಾಗಿತ್ತು. ಇದನ್ನ ಕಂಡವರು ತಕ್ಷಣವೇ ಆಂಬ್ಯುಲೆನ್ಸ್​ ಸೇವೆಯಾದ 108 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಜನರು ಶತಪ್ರಯತ್ನ ಮಾಡಿದ್ದಾರೆ.

2 ಗಂಟೆಯಾದರೂ ಬರದ ಆಂಬ್ಯುಲೆನ್ಸ್​: ಘಟನೆ ನಡೆದ ಬಳಿಕ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಆದರೆ, ಎರಡೂವರೆ ಗಂಟೆ ಕಳೆದರೂ ಆಂಬ್ಯುಲೆನ್ಸ್​ ಬಂದಿರಲಿಲ್ಲ. ಇದರಿಂದ ಗಾಯಾಳು ವ್ಯಕ್ತಿ ಪ್ರಜ್ಞೆ ತಪ್ಪಿದ್ದ. ಇನ್ನು ತಡ ಮಾಡುವುದು ಬೇಡ ಎಂದುಕೊಂಡ ಕುಟುಂಬಸ್ಥರು ಯಾವುದೇ ವಾಹನ ವ್ಯವಸ್ಥೆ ಇಲ್ಲದ ಕಾರಣ, ಬೈಕ್​ನಲ್ಲೇ ಕುಳ್ಳಿರಿಸಿಕೊಂಡಿದ್ದಾರೆ. ಒಬ್ಬರು ಬೈಕ್​ ಚಲಾಯಿಸಿದರೆ, ಇನ್ನೊಬ್ಬರು ವ್ಯಕ್ತಿಯನ್ನು ಹಿಡಿದು ಕುಳಿತಿದ್ದರು.

10 ಕಿಮೀ ದೂರದಲ್ಲಿ ಆಸ್ಪತ್ರೆ : ಸಿಡಿಲೇಟಿಗೆ ಹೆಚ್ಚು ಕಡಿಮೆ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಕುಟುಂಬಸ್ಥರು 10 ಕಿಮೀ ದೂರದ ಆಸ್ಪತ್ರೆಗೆ ಬೈಕ್​ನಲ್ಲೇ ಕರೆ ತಂದಿದ್ದಾರೆ. ಈ ದೃಶ್ಯವನ್ನು ಯಾರೋ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲಾಸ್ಪತ್ರೆಗೆ ಕರೆ ತಂದ ಬಳಿಕ ತಪಾಸಣೆ ನಡೆಸಿದ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಇದು ಕುಟುಂಬಸ್ಥರಲ್ಲಿ ದುಖಃದ ಜೊತೆಗೆ ಆಕ್ರೋಶ ತಂದಿದೆ. ಸಮಯಕ್ಕೆ ಬಾರದ ಆಂಬ್ಯುಲೆನ್ಸ್​ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

ವ್ಯಕ್ತಿಗೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಸಿಡಿಲು ಬಡಿದಿತ್ತು. ವಾಹನ ವ್ಯವಸ್ಥೆ ಇಲ್ಲದ ಕಾರಣ ತಕ್ಷಣವೇ ಆಂಬ್ಯುಲೆನ್ಸ್​ ಕರೆ ಮಾಡಲಾಗಿತ್ತು. ಸಂಜೆ 6.30 ಗಂಟೆ ಅಂದರೆ ಎರಡೂವರೆ ತಾಸು ಕಾದರೂ ಆಂಬ್ಯುಲೆನ್ಸ್​ ಬರಲಿಲ್ಲ. ಹೀಗಾಗಿ ನಾವೇ ಬೈಕ್​ನಲ್ಲಿ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆ ತರಬೇಕಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ವ್ಯಕ್ತಿಯನ್ನು ಬೈಕ್​ನಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಸಾಲ ತೀರಿದ 30 ದಿನಗಳಲ್ಲಿ ಮೂಲ ದಾಖಲೆ ಮರಳಿಸದಿದ್ದರೆ ದಿನಕ್ಕೆ 5 ಸಾವಿರ ರೂ. ದಂಡ: ಆರ್​ಬಿಐ ಹೊಸ ನಿಯಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.