ETV Bharat / bharat

ನಿತೀಶ್ ನಮ್ಮ ನಾಯಕ, ಬಿಹಾರದ ಜನ ಎನ್​ಡಿಎ ಗೆಲ್ಲಿಸ್ತಾರೆ: ರವಿಶಂಕರ್ ಪ್ರಸಾದ್​​​

ನಾವು ಬಿಹಾರದ ಜನತೆಗಾಗಿ ಕೆಲಸ ಮಾಡಿದ್ದೇವೆ. ಅದು ಅವರಿಗೂ ಗೊತ್ತು. ಪ್ರಧಾನಮಂತ್ರಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರ ಅವಧಿಯಲ್ಲಿ ಸುಮಾರು 55 ಸಾವಿರ ಮಂದಿ ಉದ್ಯೋಗ ಪಡೆದುಕೊಂಡಿದ್ದರು..

Ravi Shankar prasad
ರವಿಶಂಕರ್ ಪ್ರಸಾದ್​​​
author img

By

Published : Nov 3, 2020, 4:06 PM IST

ಪಾಟ್ನಾ (ಬಿಹಾರ): ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದು, ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಕೇಂದ್ರ ಕಾನೂನು ಮಂತ್ರಿ ರವಿಶಂಕರ್ ಪ್ರಸಾದ್ ಭರವಸೆ ವ್ಯಕ್ತಪಡಿಸಿದ್ದಾರೆ.

ಮಹಾಘಟಬಂಧನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಚಿರಾಗ್ ಪಾಸ್ವನ್ ಎನ್​ಡಿಎ ಮೈತ್ರಿಕೂಟದಿಂದ ಬೇರ್ಪಟ್ಟು ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಆದರೆ, ಬಿಹಾರದ ಜನತೆಗೆ ಯಾರಿಗೆ ಮತ ಹಾಕಬೇಕು ಎಂಬುದು ತಿಳಿದಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ನಾವು ಬಿಹಾರದ ಜನತೆಗಾಗಿ ಕೆಲಸ ಮಾಡಿದ್ದೇವೆ. ಅದು ಅವರಿಗೂ ಗೊತ್ತು. ಪ್ರಧಾನಮಂತ್ರಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರ ಅವಧಿಯಲ್ಲಿ ಸುಮಾರು 55 ಸಾವಿರ ಮಂದಿ ಉದ್ಯೋಗ ಪಡೆದುಕೊಂಡಿದ್ದರು.

ಆದರೆ, ನಿತೀಶ್ ಕುಮಾರ್ ಆಡಳಿತದಲ್ಲಿ ಸುಮಾರು 6 ಲಕ್ಷ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಬಿಹಾರ ಚುನಾವಣಾ ಕಣ ರಂಗೇರಿದ್ದು, ಎರಡನೇ ಹಂತದ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.