ಪಾಟ್ನಾ(ಬಿಹಾರ): ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಮುರಿದು ಬಿದ್ದಿದೆ. ಇಂದು ಸಂಜೆ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿರುವ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರ ಬೆನ್ನಲ್ಲೇ ಹೊಸ ಸರ್ಕಾರ ರಚನೆ ಮಾಡುವ ಕಸರತ್ತು ಜೋರಾಗಿದೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ರಾಜಭವನಕ್ಕೆ ತೆರಳಿದ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, "ಎನ್‌ಡಿಎ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಎಲ್ಲ ಸಂಸದರು, ಶಾಸಕರು ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು" ಎಂದರು.
-
#WATCH | All MPs and MLAs reached a consensus that we should leave the NDA. Soon after, I resigned as Bihar CM, says Nitish Kumar.#Bihar pic.twitter.com/ov8ds5ughO
— ANI (@ANI) August 9, 2022 " class="align-text-top noRightClick twitterSection" data="
">#WATCH | All MPs and MLAs reached a consensus that we should leave the NDA. Soon after, I resigned as Bihar CM, says Nitish Kumar.#Bihar pic.twitter.com/ov8ds5ughO
— ANI (@ANI) August 9, 2022#WATCH | All MPs and MLAs reached a consensus that we should leave the NDA. Soon after, I resigned as Bihar CM, says Nitish Kumar.#Bihar pic.twitter.com/ov8ds5ughO
— ANI (@ANI) August 9, 2022
ತೇಜಸ್ವಿ ಯಾದವ್ ಜೊತೆ ಕೆಲ ಹೊತ್ತು ಚರ್ಚಿಸಿದ ನಿತೀಶ್ ಕುಮಾರ್ ಇದೀಗ ರಾಬ್ರಿ ದೇವಿ ಅವರನ್ನು ಭೇಟಿಗೆ ತೆರಳಿದ್ದಾರೆ. ಆರ್ಜೆಡಿ ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ, ರಾಜ್ಯದಲ್ಲಿ ಜೆಡಿಯು+ಆರ್ಜೆಡಿ+ಎಡಪಕ್ಷಗಳ ನೇತೃತ್ವದ ಸರ್ಕಾರ ರಚನೆಗೊಳ್ಳಲಿದೆ. ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಗೃಹ ಖಾತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ: ಒಟ್ಟು 243 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 77, ಜೆಡಿಯು 45, ಆರ್ಜೆಡಿ 79, ಕಾಂಗ್ರೆಸ್ 19 ಮತ್ತು ಇತರೆ ಪಕ್ಷಗಳ 19 ಸದಸ್ಯರಿದ್ದಾರೆ.
ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಜಿತನ್ ರಾಮ್ ಮಾಂಜಿ ಕೂಡ ಮಹಾಘಟಬಂಧನಕ್ಕೆ ಬೆಂಬಲ ಘೋಷಿಸುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ, ಎನ್‌ಡಿಎ ಮೈತ್ರಿ ಪಕ್ಷವಾದ ಲೋಕ ಜನಶಕ್ತಿ ಸಂಸದ ಚಿರಾಗ್ ಪಾಸ್ವಾನ್ ಪ್ರತಿಕ್ರಿಯಿಸಿ, ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಮುರಿದು ಬಿತ್ತು ಬಿಜೆಪಿ-ಜೆಡಿಯು ಮೈತ್ರಿ; ಇಂದೇ ನಿತೀಶ್ ಕುಮಾರ್ ರಾಜೀನಾಮೆ?