ETV Bharat / bharat

ನಿತೀಶ್​ ತಾತ್ಕಾಲಿಕ ಸಿಎಂ ಅಷ್ಟೇ: ಬಳಿಕ ಆ ಸ್ಥಾನವನ್ನು ಬಿಜೆಪಿ ಹಿಂಪಡೆಯಲಿದೆ - ಮನೋಜ್ ಝಾ ಭವಿಷ್ಯ - ಬಿಹಾರ ಬಿಜೆಪಿ

ಬಿಹಾರದಲ್ಲಿ ಬಿಜೆಪಿ ಈಗಾಗಲೇ ಆಪರೇಷನ್​ ಕಮಲ ಆರಂಭ ಮಾಡಿದೆ. ಇದು ಕರ್ನಾಟಕ ಹಾಗೂ ಮಧ್ಯಪ್ರದೇಶಕ್ಕಿಂತ ವಿಭಿನ್ನವಾಗಿರಲಿದೆ ಎಂದು ಝಾ ಅವರು ಹೇಳಿದ್ದಾರೆ. ಸಂಪುಟ ರಚನೆ ಸಂಬಂಧ ನಿತೀಶ್ ಮೇಲೆ ಒತ್ತಡ ಹೇರಲಾಗಿದೆ ಎಂದಿದ್ದಾರೆ.

-manoj-jha
ಮನೋಜ್ ಝಾ
author img

By

Published : Nov 19, 2020, 2:39 PM IST

ನವದೆಹಲಿ: ಬಿಹಾರದಲ್ಲಿ ನಿತೀಶ್​ ಕುಮಾರ್​​ ಅವರು ಕೇವಲ ತಾತ್ಕಾಲಿಕ ಸಿಎಂ ಆಗಿದ್ದಾರೆ. ಕೆಲ ದಿನಗಳ ಬಳಿಕ ಬಿಜೆಪಿ ಆ ಸ್ಥಾನವನ್ನ ವಾಪಸ್​ ಪಡೆದು ತನ್ನ ಅಭ್ಯರ್ಥಿಯನ್ನ ಹಾಕಲಿದೆ ಎಂದು ಆರ್​ಜೆಡಿ ಹಿರಿಯ ನಾಯಕ ಮನೋಜ್​ ಝಾ ಭವಿಷ್ಯ ನುಡಿದಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಈಗಾಗಲೇ ಆಪರೇಷನ್​ ಕಮಲ ಆರಂಭ ಮಾಡಿದೆ. ಇದು ಕರ್ನಾಟಕ ಹಾಗೂ ಮಧ್ಯಪ್ರದೇಶಕ್ಕಿಂತ ವಿಭಿನ್ನವಾಗಿರಲಿದೆ ಎಂದು ಝಾ ಅವರು ಹೇಳಿದ್ದಾರೆ. ಈಗ ನಿತೀಶ್​ ಕುಮಾರ್​ ಅವರಿಗೆ ಬಿಜೆಪಿ ಬೆಂಬಲ ನೀಡಿದೆ. ಆದರೆ, ಮುಂದೆ ಬಿಜೆಪಿ ನಿತೀಶ್ ಕುಮಾರ್ ಅವರನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ.

ಈ ಸಂಬಂಧ ಈಗಾಗಲೇ ಇಬ್ಬರು ಉಪಮುಖ್ಯಮಂತ್ರಿಗಳನ್ನ ಪಕ್ಷ ನೇಮಕ ಮಾಡಿದೆ. ಅಷ್ಟೇ ಅಲ್ಲ ಪ್ರಮುಖ ಖಾತೆಗಳನ್ನ ಪಡೆದುಕೊಳ್ಳಲು ಬಿಜೆಪಿ ಯಶಸ್ವಿ ಆಗಿದೆ. ಹೀಗಾಗಿ ನಿತೀಶ್​ ಕುಮಾರ್​ ಭಾರಿ ಒತ್ತಡದಲ್ಲಿದ್ದಾರೆ ಎಂದು ಮನೋಜ್​ ಝಾ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.