ಸ್ಟಾರ್ ದಂಪತಿಯ ವಿವಾಹ ವಿಚ್ಛೇದನಗಳು ಈ ಮಧ್ಯೆ ಹೆಚ್ಚಾಗಿವೆ. ನಟ ನಾಗಾರ್ಜುನ ಪುತ್ರ ಚೈತನ್ಯ ಅಕ್ಕಿನೇನಿ ಅವರು ನಟಿ ಸಮಂತಾಗೆ, ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ನಟ ಧನುಷ್ ವಿಚ್ಛೇದನ ನೀಡಿದ ಬಳಿಕ ಇದೀಗ ಮಹಾಭಾರತ ಧಾರಾವಾಹಿಯ ಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿ 12 ವರ್ಷಗಳ ದಾಂಪತ್ಯ ಜೀವನದಿಂದ ದೂರವಾಗಿದ್ದಾರೆ.
ಮಹಾಭಾರತದ ಕೃಷ್ಣ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ ಅವರು ಐಎಎಸ್ ಅಧಿಕಾರಿ ಸ್ಮಿತಾ ಗೇಟ್ ಅವರೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. 2019ರಲ್ಲಿಯೇ ಇಬ್ಬರು ಬೇರ್ಪಡಲು ಇಚ್ಚಿಸಿದ್ದರು. ವಿಚ್ಛೇದನಕ್ಕಾಗಿ ಮುಂಬೈ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2019ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ಬೇರ್ಪಡುವ ಬಗ್ಗೆ ತಿಳಿದುಕೊಳ್ಳಲು ನಾನು ಬಯಸುವುದಿಲ್ಲ. ಆದರೆ, ವಿಚ್ಛೇದನವು ಮರಣಕ್ಕಿಂತ ಹೆಚ್ಚು ನೋವು ನೀಡುತ್ತದೆ ಎಂದಷ್ಟೇ ಹೇಳಬಲ್ಲೆ ಎಂದು ನೋವಿನಿಂದ ಹೇಳಿದ್ದಾರೆ.
ವಿಚ್ಛೇದನಕ್ಕೆ ಕಾರಣಗಳು ಬಲವಾಗಿರಬೇಕು. ಇಬ್ಬರಲ್ಲೂ ರಾಜೀಯಾಗದ ಸ್ವಭಾವ, ಸಹಾನುಭೂತಿಯ ಕೊರತೆ, ಅಹಂಕಾರ, ವಿಭಿನ್ನ ಚಿಂತನೆ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆದರೆ, ಈ ವಿಚಾರದಲ್ಲಿ ನಾನು ದುರಾದೃಷ್ಟವಂತ. ವಿಚ್ಛೇದನದಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂದು ಹೇಳಬಲ್ಲೆ ಎಂದಿದ್ದಾರೆ.
ಇದನ್ನೂ ಓದಿ: ದಡ್ಡರು ಮದುವೆಯಾಗ್ತಾರೆ, ವಿವೇಕಿಗಳು ಪ್ರೀತಿಯಲ್ಲೇ ಇರ್ತಾರೆ.. ಇದು ಆರ್ಜಿವಿ ವೇದಾಂತ