ಶ್ರೀನಗರ (ಜಮ್ಮು ಮತ್ತು ಕಾಶ್ಮೀರ್): ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಇಲ್ಲಿನ 6.5 ಕಿ.ಮೀ. ಉದ್ದದ ಝಡ್-ಮೋರ್ಹ್ ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿದರು. ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸಂಸತ್ ಸದಸ್ಯರೊಂದಿಗೆ ಸೋನಾಮಾರ್ಗ್ ಪ್ರದೇಶಕ್ಕೆ ಭೇಟಿ ನೀಡಿದರು. ನಂತರ ಕೇಂದ್ರ ಸಚಿವರು, ಜೊಜಿಲಾ ಸುರಂಗದ ಸ್ಥಳಕ್ಕೆ ಭೇಟಿ ನೀಡಿದರು.
13 ಕಿಮೀ ಉದ್ದದ ಜೊಜಿಲಾ ಸುರಂಗ: ಬಳಿಕ ಶ್ರೀನಗರ - ಲೇಹ್ ಹೆದ್ದಾರಿಯಲ್ಲಿನ ಝಡ್ - ಮೋರ್ಹ್ ಸುರಂಗವನ್ನು ಪರಿಶೀಲಿಸಿದರು. ಇದರೊಂದಿಗೆ ಸೋನಾಮಾರ್ಗ್ ಪ್ರವಾಸಿ ತಾಣವಾಗಲಿದ್ದು, ಸರ್ವಋತು ಪ್ರವಾಸಿಕೇಂದ್ರವಾಗಿ ಮಾರ್ಪಾಡಾಗಲಿದೆ. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್‌ಗೆ ಸಂಪರ್ಕ ಕಲ್ಪಿಸುವ 13 ಕಿಮೀ ಉದ್ದದ ಜೊಜಿಲಾ ಸುರಂಗದ ಕಾಮಗಾರಿಯು ಪ್ರಸ್ತುತ ಭರದಿಂದ ಸಾಗುತ್ತಿದೆ. 2026ರ ಕೊನೆಯ ತ್ರೈಮಾಸಿಕದಲ್ಲಿ ಈ ಕಾಮಗಾರಿಯು ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಹರ್ಪಾಲ್ ಸಿಂಗ್ ಹೇಳಿದ್ದೇನು?: ಜೋಜಿಲಾ ಸುರಂಗವನ್ನು ನಿರ್ಮಿಸುತ್ತಿರುವ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ನ ಯೋಜನಾ ಮುಖ್ಯಸ್ಥ ಹರ್ಪಾಲ್ ಸಿಂಗ್ ಅವರು, ಈಟಿವಿ ಭಾರತ್‌ಗೆ ಜೊತೆಗೆ ಮಾತನಾಡಿ,"2026ರ ಕೊನೆಯ ತ್ರೈಮಾಸಿಕದಲ್ಲಿ ಸುರಂಗವನ್ನು ಸಾರ್ವಜನಿಕರ ಸಂಚಾರಕ್ಕೆ ತೆರೆಯಲಾಗುವುದು. ಆದರೆ, ವಿಭಾಗ ಸ್ಥಳೀಯ ಜನಸಂಖ್ಯೆ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು" ಎಂದು ಅವರು ಹೇಳಿದರು.
ಇದನ್ನೂ ಓದಿ: ಶ್ರದ್ಧಾ ಕೊಲೆ ಕೇಸ್: ಚಾರ್ಜ್ಶೀಟ್, ಸಾಕ್ಷ್ಯಾಧಾರಗಳ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ
ಸಂಸದೀಯ ಸಲಹಾ ಸಮಿತಿ: ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ರಸ್ತೆಗಳು ಮತ್ತು ಹೆದ್ದಾರಿಗಳ ಸಚಿವಾಲಯದ (MORTH) ಸಂಸದೀಯ ಸಲಹಾ ಸಮಿತಿಯ ಭಾಗವಾಗಿರುವ ಸಂಸದರನ್ನು ಉದ್ದೇಶಿಸಿ ಗಡ್ಕರಿ ಮಾತನಾಡಿದರು. ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಸ್ತೆಗಳ ಕಾಮಗಾರಿಯ ಪ್ರಗತಿಯನ್ನು ಕೇಂದ್ರ ಸಚಿವರು ಪರಿಶೀಲಿಸಿದರು. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಪ್ರಮುಖ ರಸ್ತೆಗಳು ಸೇರಿದಂತೆ MORTH ನ ಕಾಮಗಾರಿಗಳ ಸಂಖ್ಯೆಯ ಬಗ್ಗೆ ಅವರು ಸಂಸದೀಯ ಸಲಹಾ ಸಮಿತಿಯ ಸದಸ್ಯರಿಗೆ ವಿವರಿಸಿದರು.
ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನಿಹಾಲ್ - ರಾಂಬನ್ ಮಾರ್ಗ: ಏಪ್ರಿಲ್ 11 ರಂದು, ಗಡ್ಕರಿ ಅವರು ಪ್ರಧಾನ ಮಂತ್ರಿ ಕಚೇರಿಯಲ್ಲಿರುವ (ಪಿಎಂಒ) ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನಿಹಾಲ್-ರಾಂಬನ್ ಮಾರ್ಗಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಲಿದ್ದಾರೆ. ಅವರು ಮಧ್ಯಾಹ್ನ ರಿಯಾಸಿ ಜಿಲ್ಲೆಯ ಪವಿತ್ರ ಪಟ್ಟಣವಾದ ಕತ್ರಾದಲ್ಲಿ ಇಂಟರ್‌ಮೋಡಲ್ ನಿಲ್ದಾಣ (ಐಎಂಎಸ್) ಮತ್ತು ಕತ್ರಾ - ದೆಹಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಸ್ಥಳವನ್ನು ಪರಿಶೀಲನೆ ಮಾಡಲಿದ್ದಾರೆ. ಗಡ್ಕರಿ ಅವರು ಏಪ್ರಿಲ್ 11ರ ಮಧ್ಯಾಹ್ನ ನವದೆಹಲಿಗೆ ಮರಳಲಿದ್ದಾರೆ.
ಇದನ್ನೂ ಓದಿ: ಅಂಚೆ ಎಫ್ಡಿಗೆ ಶೇ 6.9 ಬಡ್ಡಿ: ಸಣ್ಣ ಉಳಿತಾಯಕ್ಕೆ ಇದೇ ಬೆಸ್ಟ್!