ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಮಹಾರಾಷ್ಟ್ರದ ಪುಣೆಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಸತಾರಾ ಜಿಲ್ಲೆಯ ಖಂಬಟ್ಕಿ ಘಾಟ್‌ನ ನಡೆಸಲಾಗುತ್ತಿರುವ ಹೊಸ ಆರು ಸುರಂಗ ಮಾರ್ಗಗಳ (ತಲಾ ಮೂರು ಲೇನ್ಗಳ ಅವಳಿ ಸುರಂಗಗಳು) ಬಲಭಾಗದ ಪೋರ್ಟಲ್ (RHS Portal- Right Hand Side Portal) ಕಾಮಗಾರಿಗೆ ಚಾಲನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಸುರಂಗ ಮಾರ್ಗಕ್ಕೆ ನಿತಿನ್ ಗಡ್ಕರಿ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಯೋಜನೆಗಳಿಂದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ ಸತಾರಾ - ಪುಣೆ ಭಾಗದಲ್ಲಿರುವ ಖಂಬಟ್ಕಿ ಘಾಟ್ನಲ್ಲಿ ನಡೆಯುತ್ತಿರುವ ಈ ಯೋಜನೆಯಿಂದ ಬೆಂಗಳೂರು- ಮುಂಬೈ ಹೆದ್ದಾರಿ ಯೋಜನೆಗಳು ವೇಗ ಪಡೆದುಕೊಳ್ಳಲಿವೆ ಎಂದಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಯೋಜನೆಯಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಅಷ್ಟೇ ಅಲ್ಲದೇ ಪುಣೆ-ಸತಾರಾದ ನಡುವಿನ ಮಾರ್ಗವನ್ನು ಕಡಿತ ಮಾಡುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಯಾರು ಯಾರು ಇದ್ದರೆಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಯೋಜನೆಯಿಂದ ಪುಣೆ, ಸತಾರಾ ಮತ್ತು ಸೋಲಾಪುರಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಜೊತೆಗೆ ವಾಯುಮಾಲಿನ್ಯವೂ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Punjab Polls: ಪಂಜಾಜ್ ಚುನಾವಣೆಯಲ್ಲಿ ಇದೊಂದು ಭಾಗದಲ್ಲಿ ಗೆದ್ದರೆ ಅಧಿಕಾರ ಶತಸಿದ್ಧ..