ಕೈಲಾಸ: ನಿತ್ಯಾನಂದನ ಕೈಲಾಸಕ್ಕೆ ಬರುವವರಿಗೆ ಸ್ವಾಗತಕೋರಿದ್ದು, ಜೊತೆಗೆ ಮೂರು ದಿನಗಳ ಉಚಿತ ವೀಸಾ, ಆಹಾರ ಮತ್ತು ವಸತಿ ನೀಡುವುದಾಗಿ ಘೋಷಿಸಿದ್ದಾನೆ. ಇ-ಮೇಲ್ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ನಿತ್ಯಾನಂದ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಕೈಲಾಸಕ್ಕೆ ಬರಲು ಬಯಸುವವರು contact@kailaasa.org ಗೆ ಮೇಲ್ ಮಾಡಬಹುದು. ಅಲ್ಲದೇ ಮೂರು ದಿನಗಳ ವೀಸಾವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾನೆ.
ಓದಿ:‘ಮಿ ಟೂ’ ಆಯ್ತು.. ಈಗ ಮಹಿಳಾ ದೌರ್ಜನ್ಯ ತಡೆಯಲು ‘ಮೀಟ್ ಟು ಸ್ಲೀಪ್’ ಚಳವಳಿ ಆರಂಭ!
ಕೈಲಾಸಕ್ಕೆ ಬರುವ ಜನರು ತಾವಾಗಿಯೇ ಆಸ್ಟ್ರೇಲಿಯಾಕ್ಕೆ ಬರಬೇಕು ಮತ್ತು ಅಲ್ಲಿಗೆ ತಲುಪಿದ ನಂತರ ಗರುಡ ಎಂಬ ಖಾಸಗಿ ವಿಮಾನವು ಜನರನ್ನು ಕೈಲಾಸಕ್ಕೆ ಕರೆದೊಯ್ಯುತ್ತದೆ. ಜನರು ಆಸ್ಟ್ರೇಲಿಯಾ ತಲುಪುವವರೆಗೆ ಉಚಿತ ಆಹಾರ, ವಸತಿ ಮತ್ತು ವೀಸಾ ಒದಗಿಸಲಾಗುವುದು ಎಂದು ನಿತ್ಯಾನಂದ ವಿಡಿಯೋದಲ್ಲಿ ಹೇಳಿದ್ದಾನೆ.