ETV Bharat / bharat

ನಿಠಾರಿ ಸರಣಿ ಹತ್ಯೆ: ಅಪರಾಧಿಗಳಾದ ಸುರೀಂದರ್​ ಕೋಲಿ, ಪಂದೇರ್​ಗೆ 12 ಕೇಸ್​ಗಳಿಂದ ಖುಲಾಸೆ.. ಗಲ್ಲುಶಿಕ್ಷೆಯೂ ರದ್ದು - ಅಲಹಾಬಾದ್​ ಹೈಕೋರ್ಟ್

ನಿಠಾರಿ ಸರಣಿ ಹತ್ಯೆಗೆ ಸಂಬಂಧಿಸಿದಂತೆ 12 ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಸುರೀಂದರ್ ಕೋಲಿ ಮತ್ತು 2 ಪ್ರಕರಣಗಳಲ್ಲಿ ಸಹ ಅಪರಾಧಿಯಾಗಿದ್ದ ಮೊನೀಂದರ್ ಸಿಂಗ್ ಪಂಧೇರ್​ನನ್ನು ಅಲಹಾಬಾದ್​ ಹೈಕೋರ್ಟ್​ ಖುಲಾಸೆಗೊಳಿಸಿದೆ.

ನಿಠಾರಿ ಸರಣಿ ಹತ್ಯೆ
ನಿಠಾರಿ ಸರಣಿ ಹತ್ಯೆ
author img

By ETV Bharat Karnataka Team

Published : Oct 16, 2023, 6:26 PM IST

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಪ್ರಮುಖ ವಿದ್ಯಮಾನವೊಂದರಲ್ಲಿ ನಿಠಾರಿ ಸರಣಿ ಹತ್ಯೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಪ್ರಮುಖ ಅಪರಾಧಿ ಸುರೀಂದರ್ ಕೋಲಿ ಮತ್ತು 2 ಪ್ರಕರಣಗಳಲ್ಲಿ ಸಹ ಅಪರಾಧಿಯಾಗಿದ್ದ ಮೊನೀಂದರ್ ಸಿಂಗ್ ಪಂಧೇರ್​ರನ್ನು ಅಲಹಾಬಾದ್​ ಹೈಕೋರ್ಟ್​ ಖುಲಾಸೆಗೊಳಿಸಿದೆ. 12 ಪ್ರಕರಣಗಳಲ್ಲಿ ಸುರೀಂದರ್ ಕೋಲಿ ಮತ್ತು 2 ಕೇಸಲ್ಲಿ ಪಂಧೇರ್​ಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನೂ ರದ್ದುಗೊಳಿಸಲಾಗಿದೆ.

ಸುರೀಂದರ್ ಕೋಲಿ ಮತ್ತು ಮೊನೀಂದರ್ ಸಿಂಗ್ ಪಂಧೇರ್​ ವಿರುದ್ಧ 19 ಮಕ್ಕಳ ಮೇಲೆ ಅತ್ಯಾಚಾರ ಮತ್ತು ಸರಣಿ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಮೂರು ಕೇಸ್​ಗಳು ಸಾಕ್ಷ್ಯಾಧಾರಗಳಿಲ್ಲದೇ ವಜಾ ಮಾಡಲಾಗಿತ್ತು. ಉಳಿದ 12 ಕೇಸ್​ಗಳಲ್ಲಿ ತಪ್ಪಿತಸ್ಥರೆಂದು ಅವರನ್ನು ಘೋಷಿಸಲಾಗಿತ್ತು. ಬಳಿಕ ಇಬ್ಬರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿತ್ತು.

ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ ಮರಣದಂಡನೆ ಪ್ರಶ್ನಿಸಿ ಕೋಲಿ ಮತ್ತು ಪಂಧೇರ್ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್​ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ಎಸ್‌ಎಚ್‌ಎ ರಿಜ್ವಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಪ್ರಾಸಿಕ್ಯೂಷನ್ ಈ ಪ್ರಕರಣಗಳಲ್ಲಿ ಸಮಂಜಸವಾದ ದಾಖಲೆಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.

2007ರಲ್ಲಿ ಉದ್ಯಮಿ ಮೊನೀಂದರ್ ಸಿಂಗ್ ಪಂಧೇರ್ ಮತ್ತು ಆತನ ಮನೆಯ ಸಹಾಯಕ ಸುರೀಂದರ್ ಕೋಲಿ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿದ್ದವು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಬಿಐ 19 ಪ್ರಕರಣಗಳ ಪೈಕಿ ಮೂರನ್ನು ಮುಕ್ತಾಯಗೊಳಿಸಿತ್ತು.

ಪ್ರಕರಣದ ಹಿನ್ನೆಲೆ: ಡಿಸೆಂಬರ್ 29, 2006 ರಂದು ನೋಯ್ಡಾದ ನಿಠಾರಿಯಲ್ಲಿರುವ ಪಂಧೇರ್ ಮನೆಯ ಹಿಂದಿನ ಚರಂಡಿಯಿಂದ 8 ಮಕ್ಕಳ ಶವಗಳ ಅವಶೇಷಗಳು ಪತ್ತೆಯಾಗಿದ್ದವು. ಇದರಿಂದ ಸರಣಿ ಹತ್ಯಾಕಾಂಡ ಬೆಳಕಿಗೆ ಬಂದಿತ್ತು. ಇವುಗಳಲ್ಲಿ ಹೆಚ್ಚಿನವು ನಿಠಾರಿ ಪ್ರದೇಶದಿಂದ ಕಾಣೆಯಾದ ಬಡ ಮಕ್ಕಳು ಮತ್ತು ಯುವತಿಯರದ್ದಾಗಿದ್ದವು.

ಶವಗಳ ಅವಶೇಷಗಳು ಕಂಡು ಬಂದ ಬಳಿಕ ಕೋಲಿ ಮತ್ತು ಪಂಧೇರ್‌ನ ವಿರುದ್ಧ ವಿಚಾರಣೆ ನಡೆದು, ಒಟ್ಟು 16 ಪ್ರಕರಣಗಳು ದಾಖಲಾದವು. ಕೊಲೆ ಮತ್ತು ಅತ್ಯಾಚಾರ ಸಾಬೀತಾದ ಹಿನ್ನೆಲೆಯಲ್ಲಿ 12 ಪ್ರಕರಣಗಳಲ್ಲಿ ಇಬ್ಬರಿಗೆ ಮರಣದಂಡನೆ ವಿಧಿಸಲಾಗಿತ್ತು.

ನಿಠಾರಿ ಗ್ರಾಮದ ಮನೆಯಲ್ಲಿ ನಡೆದ ಈ ಭೀಕರ ಹತ್ಯೆಗಳು ದೇಶವನ್ನೇ ತಲ್ಲಣಗೊಳಿಸಿದ್ದವು. ಪಂಧೇರ್​ನ ನಿವಾಸದಲ್ಲಿ ನಡೆದಿವೆ ಎನ್ನಲಾದ ಮಕ್ಕಳ ಕೊಲೆಗಳಿಗೆ ಆತನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುರೀದಂರ್​ ಕೋಲಿಯೇ ಕಾರಣನಾಗಿದ್ದ. ಅಮಾಯಕ ಮಕ್ಕಳಿಗೆ ಆಮಿಷ ಒಡ್ಡಿ ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಲಾಗುತ್ತಿತ್ತು. ದುಷ್ಕರ್ಮಿಗಳು ಬಲಿಪಶುಗಳ ದೇಹಗಳನ್ನು ಛಿದ್ರಗೊಳಿಸಿ, ಸಾಕ್ಷ್ಯವನ್ನು ಮರೆಮಾಚಲು ಹತ್ತಿರದ ಚರಂಡಿಗಳಲ್ಲಿ ಅವಶೇಷಗಳನ್ನು ಬಿಸಾಡುತ್ತಿದ್ದರು ಎಂದು ಪೊಲೀಸರು ತನಿಖೆಯ ವೇಳೆ ಹೇಳಿದ್ದರು.

ಇಷ್ಟಲ್ಲದೇ, ಮಕ್ಕಳನ್ನು ಕೊಲೆ ಮಾಡಿದ ಬಳಿಕ ಕೀಚಕರು ದೇಹದ ಮಾಂಸವನ್ನೂ ತಿನ್ನುತ್ತಿದ್ದರು ಎಂಬ ಕ್ರೂರ ಸತ್ಯ ಹೊರಬಿದ್ದಿತ್ತು. ನರಭಕ್ಷಕರ ವಿರುದ್ಧ ರಾಷ್ಟ್ರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಭಯಾನಕ ಕೊಲೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿತ್ತು. ವಿಚಾರಣೆಯ ವೇಳೆ ಕೋಲಿ ಮತ್ತು ಪಂಧೇರ್​ ಸತ್ತವರ ದೇಹದ ಭಾಗಗಳನ್ನು ಸೇವಿಸುವುದನ್ನು ಸಹ ಒಪ್ಪಿಕೊಂಡಿದ್ದರು. ಮಕ್ಕಳ ಸರಣಿ ಹತ್ಯೆಯ ಜೊತೆಗೆ 20 ವರ್ಷದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲೂ ಇಬ್ಬರಿಗೆ ಶಿಕ್ಷೆಯಾಗಿದೆ.

ಇದನ್ನೂ ಓದಿ: ನಿಠಾರಿ ಕೇಸ್​: ಸರಣಿ ಹಂತಕ ಸುರೇಂದ್ರ ಕೋಲಿಗೆ 13ನೇ ಬಾರಿಗೆ ಮರಣದಂಡನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.