ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಹುತೇಕ ಹೊಸ ಮುಖಗಳಿಗೆ ಈ ಸಲದ ಕ್ಯಾಬಿನೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅತಿ ಹೆಚ್ಚು ಯುವ ಸಂಸದರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 43 ಸಚಿವರ ಪೈಕಿ 35ನೇ ವಯಸ್ಸಿನಲ್ಲೇ ಸಂಸದನೋರ್ವ ಸಂಪುಟ ಸೇರುವ ಮೂಲಕ ಹೊಸ ದಾಖಲೆ ಬರೆದರು.
![Nisith Pramanik](https://etvbharatimages.akamaized.net/etvbharat/prod-images/768-512-11735403-thumbnail-3x2-nisith_0707newsroom_1625664526_247.jpg)
ಬಿಹಾರದ ಕೂಚ್ ಬಿಹಾರ್ ಕ್ಷೇತ್ರದ ಯುವ ಸಂಸದ ನಿಸಿತ್ ಪ್ರಮಾಣಿಕ ಕೇವಲ 35ನೇ ವಯಸ್ಸಿಗೆ ಮೋದಿ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. BCA ಪದವಿ ಪಡೆದುಕೊಂಡಿರುವ ಇವರು, ರಾಜಕೀಯ ಪ್ರವೇಶ ಪಡೆದುಕೊಳ್ಳುವುದಕ್ಕೂ ಮೊದಲು ಸಹಾಯಕ ಶಿಕ್ಷಕರಾಗಿದ್ದರು.
ಇದನ್ನೂ ಓದಿರಿ: ಚುನಾವಣೆ ಹಿನ್ನೆಲೆಯಲ್ಲಿ ದಲಿತ, ಹಿಂದುಳಿದವರಿಗೆ ಸಚಿವ ಸ್ಥಾನ ನೀಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ
2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದ ನಿಸಿತ್ ಪ್ರಮಾಣಿಕ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಕಳೆದ ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದರು. ಆದರೆ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರಾಗಿ ಮುಂದುವರೆದಿದ್ದರು. ಇದೀಗ ಅವರನ್ನು ಮೋದಿ ಕ್ಯಾಬಿನೆಟ್ನಲ್ಲಿ ಸೇರಿಸಿಕೊಳ್ಳಲಾಗಿದೆ.