ETV Bharat / bharat

ಕುಂಭಮೇಳದ ಧಾರ್ಮಿಕ ಕಾರ್ಯ ನಿಲ್ಲಿಸುವುದಾಗಿ ಘೋಷಿಸಿದ ನಿರಂಜನಿ ಅಖಾಡ - ನಿರಂಜನಿ ಅಖಾದ ಕಾರ್ಯದರ್ಶಿ ರವೀಂದ್ರ ಪುರಿ ಮಹಾರಾಜ್

ಮಹಾಕುಂಭ ಮೇಳದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ 13 ಪ್ರಮುಖ ಅಖಾಡಗಳಲ್ಲಿ ಒಂದಾಗಿರುವ ಪಂಚಾಯತಿ ನಿರಂಜನಿ ಅಖಾಡ ನಾಳೆ ಮಹಾಕುಂಭವನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ.

Kumbh
Kumbh
author img

By

Published : Apr 16, 2021, 12:43 PM IST

ಹರಿದ್ವಾರ (ಉತ್ತರಾಖಂಡ): ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣ ವ್ಯಾಪಕವಾಗಿ ಹಬ್ಬಿರುವ ಸಂದರ್ಭದಲ್ಲಿ ಕುಂಭಮೇಳದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ 13 ಪ್ರಮುಖ ಅಖಾಡಗಳಲ್ಲಿ ಒಂದಾಗಿರುವ ಪಂಚಾಯತಿ ನಿರಂಜನಿ ಅಖಾಡ ನಾಳೆ ಮಹಾಕುಂಭವನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ.

ನಿರಂಜನಿ ಅಖಾದ ಕಾರ್ಯದರ್ಶಿ ರವೀಂದ್ರಪುರಿ ಮಹಾರಾಜ್ ಈ ಕುರಿತು ಮಾಹಿತಿ ನೀಡಿ, ಮಹಾಕುಂಭ ಮೇಳ ನಡೆಸುವ ಬಗ್ಗೆ ಅಂತಿಮ ನಿರ್ಧಾರವನ್ನು ಅಖಿಲ ಪರಿಷತ್ ತೀರ್ಮಾನಿಸಲಿದ್ದು ನಾವು ಮೇಳ ನಿಲ್ಲಿಸುವಂತೆ ಮನವಿ ಮಾಡಿದ್ದೇವೆ. ಏಪ್ರಿಲ್ 27ರಂದು ಶಾಹಿಸ್ನಾನ ಸಂಪ್ರದಾಯವನ್ನು ಕೆಲವು ಶ್ರೀಗಳ ಸಮ್ಮುಖದಲ್ಲಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.

ಹರಿದ್ವಾರದಲ್ಲಿ ಕೋವಿಡ್​-19 ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ನಾಲ್ಕನೇ ಶಾಹಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಜೊತೆಗೆ 4ನೇ ಶಾಹಿ ಸ್ನಾನದಲ್ಲಿ ಸಾಧುಗಳ ಒಂದು ಗುಂಪು ಭಾಗವಹಿಸುತ್ತದೆ ಎಂದು ಮಹಾರಾಜ್ ಹೇಳಿದರು.

ಕಳೆದ ಐದು ದಿನಗಳಲ್ಲಿ ಹರಿದ್ವಾರದಲ್ಲಿ ಒಟ್ಟು 2,167 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಜನದಟ್ಟಣೆ ಸೂಕ್ತವಲ್ಲ. ನಮ್ಮ ಅನೇಕ ಸಿಬ್ಬಂದಿ ಮತ್ತು ಸಾಧುಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಮಹಮಂಡಲೇಶ್ವರದ ಆಚಾರ್ಯ ಕೈಲಾಶ್ ಗಿರಿ ಹೇಳಿದರು.

ಮಹಾದೇವ ಶಿವ ಗಂಗೆಯನ್ನ ಧರೆಗೆ ಇಳಿಸಿದ್ದ. ಹೀಗಾಗಿ ಗಂಗಾ ಸ್ನಾನ ಮಾಡುವುದು ತುಂಬಾ ಪವಿತ್ರ. ಗಂಗೆಯಲ್ಲಿ ಮಿಂದೆದ್ದರೆ ಎಲ್ಲಾ ಪಾಪಗಳಿಂದಲೂ ಮುಕ್ತಿ ಸಿಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಹೀಗಾಗಿ ಕುಂಭಮೇಳವನ್ನು ಆಯೋಜಿಸಲಾಗಿದ್ದು, ಮಾರ್ಚ್ 11 ರಂದು ಮೊದಲ ಶಾಹಿ ಸ್ನಾನ, ಏಪ್ರಿಲ್​ 13 ರಂದು ಎರಡನೇ ಶಾಹಿ ಸ್ನಾನ, ಏಪ್ರಿಲ್ 14 ರಂದು ಮೂರನೇ ಶಾಹಿ ಸ್ನಾನ ನಡೆದಿತ್ತು. ಇದೀಗ ಏಪ್ರಿಲ್ 27ರಂದು ನಾಲ್ಕನೇ ಶಾಹಿ ಸ್ನಾನ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.