ETV Bharat / bharat

ಬಾವಲಿಗಳ ಮಾದರಿಗಳಲ್ಲಿ ನಿಫಾ ವೈರಸ್ ಪತ್ತೆ..! - ಕೇರಳದಲ್ಲಿ ನಿಫಾ ವೈರಸ್ ಪತ್ತೆ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಬಾವಲಿಗಳನ್ನು ನಿಫಾ ವೈರಸ್​ ಸೋಂಕಿನ ಮೂಲವೆಂದು ಭಾವಿಸಬಹುದು ಎಂದು ಘೋಷಿಸಿದ್ದಾರೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ನಡೆಸಿದ ಪರೀಕ್ಷೆಗಳು ಬಾಲಕನ ಮನೆಯ ಆವರಣದಲ್ಲಿ ಪತ್ತೆಯಾದ ಎರಡು ಜಾತಿಯ ಬಾವಲಿಗಳೊಂದಿಗೆ ವೈರಸ್ ಸಂಪರ್ಕವನ್ನು ಪತ್ತೆಹಚ್ಚಿವೆ.

ಆರೋಗ್ಯ ಸಚಿವೆ ವೀಣಾ ಜಾರ್ಜ್
ಆರೋಗ್ಯ ಸಚಿವೆ ವೀಣಾ ಜಾರ್ಜ್
author img

By

Published : Sep 29, 2021, 8:48 PM IST

Updated : Sep 29, 2021, 11:53 PM IST

ತಿರುವನಂತಪುರಂ (ಕೇರಳ): ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ನಿಫಾ ವೈರಸ್​ಗೆ ಬಲಿಯಾಗಿ ಸುಮಾರು ಒಂದು ತಿಂಗಳ ನಂತರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಬಾವಲಿಗಳನ್ನು ಸೋಂಕಿನ ಮೂಲವೆಂದು ಭಾವಿಸಬಹುದು ಎಂದು ಘೋಷಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವೆ ವೀಣಾ ಜಾರ್ಜ್, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ನಡೆಸಿದ ಪರೀಕ್ಷೆಗಳು ಬಾಲಕನ ಮನೆಯ ಆವರಣದಲ್ಲಿ ಪತ್ತೆಯಾದ ಎರಡು ಜಾತಿಯ ಬಾವಲಿಗಳೊಂದಿಗೆ ವೈರಸ್ ಸಂಪರ್ಕವನ್ನು ಪತ್ತೆಹಚ್ಚಿವೆ. ಉಳಿದ ಮಾದರಿಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ 21 ದಿನಗಳಲ್ಲಿ ಯಾವುದೇ ನಿಫಾ ಪ್ರಕರಣಗಳು ವರದಿಯಾಗಿಲ್ಲ. ಸೋಂಕು ಹರಡುವಿಕೆ ತಡೆಯಲು ತೆಗೆದುಕೊಂಡ ಕ್ರಮಗಳು ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ.

ಈ ಹಿಂದೆ, ಚತಮಂಗಲಂ ಪಂಚಾಯತ್‌ನ ವಿವಿಧ ಭಾಗಗಳಿಂದ ಸಂಗ್ರಹಿಸಿದ ರಂಬುಟಾನ್ ಮತ್ತು ಅರೆಕಾ ಸೇರಿದಂತೆ ಹಲವು ಹಣ್ಣುಗಳು ಮತ್ತು ವಾಣಿಜ್ಯ ಬೆಳೆಗಳನ್ನು ನಿಫಾ ವೈರಸ್​ಗಾಗಿ ಪರೀಕ್ಷಿಸಿದಾಗ ಋಣಾತ್ಮಕ ವರದಿ ಬಂದಿತ್ತು.

ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಪ್ರದೇಶವನ್ನು ಪರಿಶೀಲಿಸಲು ಮತ್ತು ಅಲ್ಲಿ ನಿಫಾ ಮೂಲವನ್ನು ಪತ್ತೆಹಚ್ಚಲು ಕೇಂದ್ರ ತಂಡವು ಚತಮಂಗಲಂಗೆ ಭೇಟಿ ನೀಡಿತ್ತು.

2018 ರಲ್ಲಿ ನಿಫಾ ವೈರಸ್​ ಸೋಂಕಿನಿಂದ 21 ಸಾವುಗಳಿಗೆ ಕೇರಳ ಸಾಕ್ಷಿಯಾಗಿತ್ತು.

ಇದನ್ನೂ ಓದಿ: NIPAH ಆತಂಕ : ಬಾವಲಿಗಳಿಗೆ ಬಲೆ ಹಾಕಿದ ಪುಣೆ ವೈರಾಲಜಿ ಸಂಸ್ಥೆ ಮತ್ತು ಅರಣ್ಯ ಇಲಾಖೆಯ ತಜ್ಞರು

Last Updated : Sep 29, 2021, 11:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.