ETV Bharat / bharat

9 ವರ್ಷದ ಕಾನೂನು ಹೋರಾಟದಲ್ಲಿ ಜಯ : ಅಪಘಾತದಲ್ಲಿ ಶ್ವಾನ ಕಳೆದುಕೊಂಡ ವ್ಯಕ್ತಿಗೆ 3 ಲಕ್ಷ ರೂ. ಪರಿಹಾರ.. - ನಾಯಿ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರ ವ್ಯಕ್ತಿಗೆ ಜಯ

ಬರೋಬ್ಬರಿ 8 ವರ್ಷ 11 ತಿಂಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ.ಅನ್ಸಾರಿ ಡಿ.9 ರಂದು ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ. 1 ಲಕ್ಷ 62 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ..

A nine year court battle to recover a dead dog; The court then awarded Rs 3 lakh in damages
9 ವರ್ಷಗಳ ಕೋರ್ಟ್‌ ಹೋರಾಟದಲ್ಲಿ ಜಯ; ಅಪಘಾತದಲ್ಲಿ ಶ್ವಾನ ಕಳೆದುಕೊಂಡ ವ್ಯಕ್ತಿಗೆ 3 ಲಕ್ಷ ಪರಿಹಾರ
author img

By

Published : Dec 22, 2021, 4:39 PM IST

ಮಹಾರಾಷ್ಟ್ರ: ತನ್ನ ಸಾಕು ನಾಯಿ ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಕರಣದಲ್ಲಿ ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ವ್ಯಕ್ತಿಯೊಬ್ಬ ಸತತ 9 ವರ್ಷದ ಕಾನೂನು ಹೋರಾಟದಲ್ಲಿ ಜಯಿಸಿ, ಕೋರ್ಟ್‌ನಿಂದ ₹3 ಲಕ್ಷ ಪರಿಹಾರ ಪಡೆದಿದ್ದಾರೆ.

ಉಮೇಶ್ ಭಟ್ಕರ್ ಎಂಬುವರು ಜಾನ್ ಎಂಬ ಹೆಸರಿನ ಶ್ವಾನ ಸಾಕಿದ್ದರು. 2013ರ ಜನವರಿ 10 ರಂದು ತಮ್ಮ ನಾಯಿಯೊಂದಿಗೆ ವಾಕಿಂಗ್‌ ಹೋಗಿದ್ದರು. ಈ ವೇಳೆ, ರಹೀಮ್ ಟ್ರಾವೆಲ್ಸ್‌ಗೆ ಸೇರಿದ MH40, N3766 ಸಂಖ್ಯೆಯ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ, ನಾಯಿ ಸ್ಥಳದಲ್ಲೇ ಸಾವನ್ನಪ್ಪಿತ್ತು. ಇದು ಮಾಲೀಕನಿಗೆ ಭಾರಿ ಆಘಾತ ತಂದಿತ್ತು. ಕಾರಣ ಈ ನಾಯಿಯಿಂದಲೇ ಅವರ ಮನೆಯ ಜೀವನ ನಡೆಯುತ್ತಿತ್ತು.

ಆರತಿ ಇನ್ಫ್ರಾ ಎಂಬ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಜಾನ್‌ನನ್ನು ನೇಮಿಸಿಕೊಳ್ಳಲಾಗಿತ್ತು. ಇದರಿಂದ ಉಮೇಶ್ ಭಟ್ಕರ್ ತಿಂಗಳಿಗೆ ಗೌರವ ಧನವಾಗಿ 8 ಸಾವಿರ ರೂಪಾಯಿ ಪಡೆಯುತ್ತಿದ್ದರು. ಆದರೆ, ಅಪಘಾತದಲ್ಲಿ ಜಾನ್‌ ಮೃತಪಟ್ಟ ಪರಿಣಾಮ ಇವರಿಗೆ ಆರ್ಥಿಕ ಮುಗ್ಗಟು ಎದುರಿಸುವಂತಾಯಿತು.

ಶಾಲಾ ಬಸ್ ಮಾಲೀಕರು ಹಾಗೂ ವಿಮಾ ಕಂಪನಿ ಪರಿಹಾರ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಈ ಕುರಿತು ಭಟ್ಕರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಅದರೊಂದಿಗೆ ನಾಯಿಯನ್ನು ಶವಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಜಾನ್‌ ಅಪಘಾತದಿಂದ ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ.

ನಂತರ ಭಟ್ಕರ್ ಅವರು ಚಂದ್ರಾಪುರದ ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಿಸಿದರು. ವಿಮಾ ಕಂಪನಿ ಬಜಾಜ್ ಅಲಯನ್ಸ್, ಟ್ರಾವೆಲ್ಸ್ ಮಾಲೀಕ ಹಾಗೂ ಚಾಲಕ ಸುಧಾಕರ್ ಅವರ ವಿರುದ್ಧ ಮೊಕದ್ದಮೆ ಹೂಡಿದ್ದರು. ನಾಯಿಯ ಸಾವಿನಿಂದ ಆರ್ಥಿಕ ನಷ್ಟ ಉಂಟಾಗಿದೆ. ತನಗೆ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.

ಬರೋಬ್ಬರಿ 8 ವರ್ಷ 11 ತಿಂಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ.ಅನ್ಸಾರಿ ಡಿ.9 ರಂದು ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ. 1 ಲಕ್ಷ 62 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ.

ಜೊತೆಗೆ ಪರಿಹಾರ ಹಣಕ್ಕೆ ವರ್ಷಕ್ಕೆ ಶೇ.8ರಷ್ಟು ಬಡ್ಡಿಯನ್ನು ನೀಡುವಂತೆ ಹೇಳಿದ್ದಾರೆ. ಹೀಗಾಗಿ, ಸುಮಾರು 9 ವರ್ಷಕ್ಕೆ ಉಮೇಶ್‌ ಭಟ್ಕರ್‌ ಒಟ್ಟು 3 ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾರೆ. ಚಂದ್ರಾಪುರ ಜಿಲ್ಲಾ ನ್ಯಾಯಾಲಯದ ಇತಿಹಾಸದಲ್ಲಿ ಇದೊಂದು ವಿಶಿಷ್ಟ ತೀರ್ಪು ಎನಿಸಿದೆ.

ಇದನ್ನೂ ಓದಿ: ಬ್ರಿಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಛೇದನ ; ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.