ETV Bharat / bharat

ಚೀನಾ ಮಿಲಿಟರಿ ಕಮಾಂಡರ್‌ಗಳೊಂದಿಗೆ ಮಾತುಕತೆ ಮುಂದುವರಿದಿದೆ: ಜೈ ಶಂಕರ್

author img

By

Published : Feb 6, 2021, 1:44 PM IST

ಭಾರತ ಮತ್ತು ಚೀನಾದ ಹಿರಿಯ ಮಿಲಿಟರಿ ಕಮಾಂಡರ್‌ಗಳು ಪೂರ್ವ ಲಡಾಕ್‌ನಲ್ಲಿ ಸೈನ್ಯವನ್ನು ನಿಯೋಜಿಸುವ ಪ್ರಕ್ರಿಯೆಯ ಕುರಿತು ಒಂಬತ್ತನೇ ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾತುಕತೆಗಳು ಇದೇ ರೀತಿ ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವ ತಿಳಿಸಿದ್ದಾರೆ.

ಜೈ ಶಂಕರ್
ಜೈ ಶಂಕರ್

ಅಮರಾವತಿ(ಆಂಧ್ರ ಪ್ರದೇಶ): ಪೂರ್ವ ಲಡಾಕ್‌ನಲ್ಲಿ ಸೈನ್ಯವನ್ನು ನಿಯೋಜಿಸುವ ಪ್ರಕ್ರಿಯೆ ಕುರಿತು ಭಾರತ ಹಾಗೂ ಚೀನಾದ ಹಿರಿಯ ಮಿಲಿಟರಿ ಕಮಾಂಡರ್‌ಗಳ ಒಂಬತ್ತನೇ ಸುತ್ತಿನ ಮಾತುಕತೆ ನಡೆದಿದ್ದು, ಇದು ಭವಿಷ್ಯದಲ್ಲೂ ಹೀಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ.

ವಿಜಯವಾಡದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ನಡೆದ ಮಾತುಕತೆಗಳಿಂದ ಯಾವುದೇ ಅಭಿಪ್ರಾಯಗೋಚರಿಸಿಲ್ಲ, ಇದೊಂದು ನಿರಾಶಾದಾಯಕ ಮಾತುಕತೆ. ಸೈನ್ಯವನ್ನು ಅವಲಂಬಿಸಿದ ಇದು ತುಂಬಾ ಸಂಕೀರ್ಣವಾದ ವಿಷಯವಾಗಿದೆ. ನಾವು ಭೂ ವ್ಯಾಪ್ತಿಯನ್ನು ಅರಿತಿದ್ದು, ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು, ಅದನ್ನು ಮಿಲಿಟರಿ ಕಮಾಂಡರ್‌ಗಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಸೇನೆಗಳ ಮುಖಾಮುಖಿ ಪರಿಹರಿಸಲು ಉಭಯ ದೇಶಗಳು ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಆದರೆ ಇಲ್ಲಿಯವರೆಗೆ ಯಾವುದೇ ಮಹತ್ವದ ಮುನ್ನಡೆ ಸಾಧಿಸಲಾಗಿಲ್ಲ.

ಆದ್ದರಿಂದ, ಮಿಲಿಟರಿ ಕಮಾಂಡರ್‌ಗಳು ಇಲ್ಲಿಯವರೆಗೆ ಒಂಬತ್ತು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಕೆಲವು ಪ್ರಗತಿ ಸಾಧಿಸಲಾಗಿದೆ ಎಂದು ನಾವು ನಂಬುತ್ತೇವೆ, ಆದರೂ ಅದು ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ತಾವು ಕಳೆದ ವರ್ಷ ಚೀನಾದ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದೆವು, ಅಲ್ಲಿ ಅವರು ಕೆಲವು ಭಾಗಗಳಲ್ಲಿ ಬೇರ್ಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ ಎಂದು ಜೈಶಂಕರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.