ಫರೀದಾಬಾದ್, ಹರಿಯಾಣ: ದೇಶವನ್ನು ಬೆಚ್ಚಿ ಬೀಳಿಸಿದ್ದ, ವಿದ್ಯಾರ್ಥಿನಿ ನಿಕಿತಾ ತೋಮರ್ ಶೂಟೌಟ್ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿ ಫರೀದಾಬಾದ್ ಕೋರ್ಟ್ ಆದೇಶ ಹೊರಡಿಸಿದೆ.
ಹೆಚ್ಚಿನ ಮಾಹಿತಿಗೆ: ನಡುರಸ್ತೆಯಲ್ಲೇ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿ... ಸಿಸಿಟಿವಿ ವಿಡಿಯೋ
ಮುಖ್ಯ ಆರೋಪಿ ತೌಸೀಫ್ ಮತ್ತು ಅವನ ಸ್ನೇಹಿತ ರಿಹಾನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೂರನೇ ಆರೋಪಿಯಾಗಿದ್ದ ಮೊಹಮದ್ ಅಜರುದ್ದೀನ್ ಎಂಬಾತ ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿದ್ದು, ಸಾಕ್ಷ್ಯ ಕೊರತೆಯಿಂದಾಗಿ ಮಾರ್ಚ್ 24ರಂದು ಖುಲಾಸೆಯಾಗಿದ್ದಾನೆ.
ಏನಿದು ಘಟನೆ.?
26 ಅಕ್ಟೋಬರ್ 2020 ರಂದು ಹರಿಯಾಣದ ಫರೀದಾಬಾದ್ ಜಿಲ್ಲೆಯ ಬಲ್ಲಭ್ಗಡದಲ್ಲಿ ವಿದ್ಯಾರ್ಥಿನಿ ನಿಕಿತಾ ತೋಮರ್ ಮೇಲೆ ಆರೋಪಿಗಳು ನಡು ರಸ್ತೆಯಲ್ಲೇ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು.
ಹೆಚ್ಚಿನ ಮಾಹಿತಿಗೆ: ನಿಖಿತಾ ತೋಮರ್ ಶೂಟೌಟ್ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ನೀಡುವ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಜಡ್ಜ್ ವರ್ಗಾವಣೆ!
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಫರೀದಾಬಾದ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಲಾಗಿತ್ತು.
ಇಂದಿಗೆ ನಿಕಿತಾ ಕೊಲೆಯಾಗಿ ಬರೋಬ್ಬರಿ ಐದು ತಿಂಗಳು ಕಳೆದಿವೆ. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.