ETV Bharat / bharat

ಮಾನವ ಕಳ್ಳಸಾಗಣೆ: ಬೆಂಗಳೂರು ಸೇರಿ ದೇಶಾದ್ಯಂತ ಎನ್​ಐಎ ದಾಳಿ, 44 ಆರೋಪಿಗಳ ಬಂಧನ - ಅಕ್ರಮ ವಲಸಿಗರ ಒಳನುಸುಳುವಿಕೆ

NIA raids: ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಹಲವು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶಾದ್ಯಂತ ದಾಳಿ ನಡೆಸಿ ಬಂಧಿಸಿದ್ದು, ತನಿಖೆ ಮುಂದುವರೆಸಿದೆ.

44 people arrested  nationwide raids in human trafficking cases  five modules busted  National Investigation Agency  NIA raid nationwide  ಬೆಂಗಳೂರಿನಲ್ಲಿ 10 ಜನ ಸೇರಿ 44 ಆರೋಪಿಗಳು ಬಂಧನ  ಮಾನವ ಕಳ್ಳಸಾಗಣೆ ಪ್ರಕರಣ  ದೇಶಾದ್ಯಂತ ಎನ್​ಐಎ ದಾಳಿ  ಮಾನವ ಕಳ್ಳಸಾಗಣೆ  ರಾಷ್ಟ್ರೀಯ ತನಿಖಾ ಸಂಸ್ಥೆ  ಅಕ್ರಮ ವಲಸಿಗರ ಒಳನುಸುಳುವಿಕೆ  ಮಾನವ ಕಳ್ಳಸಾಗಣೆ ಬೆಂಬಲ ಜಾಲ
ಬೆಂಗಳೂರಿನಲ್ಲಿ 10 ಜನ ಸೇರಿ 44 ಆರೋಪಿಗಳು ಬಂಧನ
author img

By ANI

Published : Nov 9, 2023, 7:03 AM IST

ನವದೆಹಲಿ/ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಬುಧವಾರ ರಾಷ್ಟ್ರವ್ಯಾಪಿ ದಾಳಿ ನಡೆಸಿದ್ದು ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಐದು ಮಾಡ್ಯೂಲ್‌ಗಳನ್ನು ಭೇದಿಸಿ 44 ಆರೋಪಿಗಳನ್ನು ಬಂಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಅಕ್ರಮ ವಲಸಿಗರ ಒಳನುಸುಳುವಿಕೆಗೆ ಸಹಕರಿಸುತ್ತಿದ್ದ ಜಾಲಗಳನ್ನು ಕಿತ್ತುಹಾಕಲು ಎಂಟು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 55 ಸ್ಥಳಗಳಲ್ಲಿ ಗಡಿ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.

  • NIA Conducts Multi-Location Searches Across 10 States in India
    Apprehends 44 in 4 Human Trafficking Cases
    Busts five Human Trafficking Modules Across five States pic.twitter.com/raXYjqwyPQ

    — NIA India (@NIA_India) November 8, 2023 " class="align-text-top noRightClick twitterSection" data=" ">

ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೋಧ ನಡೆದಿದೆ. ಬಂಧಿತರ ಪೈಕಿ 21 ಮಂದಿ ತ್ರಿಪುರಾ, ಕರ್ನಾಟಕದಲ್ಲಿ 10, ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ 3, ತಮಿಳುನಾಡಿನಲ್ಲಿ 2 ಮತ್ತು ಪುದುಚೇರಿ, ತೆಲಂಗಾಣ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಸೆರೆ ಸಿಕ್ಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್‌ನ ಜಾಫರ್ ಆಲಂ ಎಂದು ಗುರುತಿಸಲಾದ ರೋಹಿಂಗ್ಯಾ ವ್ಯಕ್ತಿ ಸೇರಿದಂತೆ ಇನ್ನೂ ಒಂದೆರಡು ಜನರನ್ನು ಬಂಧಿಸಲಾಗಿದೆ. ಬುಧವಾರ ಬೆಳಿಗ್ಗೆ ದೇಶಾದ್ಯಂತ ಸಂಘಟಿತ ದಾಳಿಗಳನ್ನು ನಡೆಸಲಾಗಿದ್ದು, ಡಿಜಿಟಲ್ ಸಾಧನಗಳು, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು ಸೇರಿದಂತೆ ಗುರುತಿನ ಸಂಬಂಧಿತ ದಾಖಲೆಗಳು (ನಕಲಿ ಎಂದು ಶಂಕಿಸಲಾಗಿದೆ), 20 ಲಕ್ಷಕ್ಕೂ ಹೆಚ್ಚು ನಗದು, ವಿದೇಶಿ ಕರೆನ್ಸಿ ಸೇರಿದಂತೆ ವಿವಿಧ ಮಹತ್ವದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ.

ಗುವಾಹಟಿ, ಚೆನ್ನೈ, ಬೆಂಗಳೂರು ಮತ್ತು ಜೈಪುರದಲ್ಲಿ ನಾಲ್ಕು ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದ ನಂತರ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮೊದಲ ಪ್ರಕರಣವನ್ನು ಸೆಪ್ಟೆಂಬರ್ 9ರಂದು ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ದಾಖಲಿಸಿತ್ತು. ರೋಹಿಂಗ್ಯಾ ಮೂಲದವರು ಸೇರಿದಂತೆ ಇಂಡೋ-ಬಾಂಗ್ಲಾದೇಶ ಗಡಿಯಾದ್ಯಂತ ಅಕ್ರಮ ವಲಸಿಗರ ಒಳನುಸುಳುವಿಕೆ ಮತ್ತು ಮಾನವ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿತ್ತು ಎಂದು ಅಧಿಕಾರಿ ಹೇಳಿದರು.

ಈ ಜಾಲದ ಕಾರ್ಯಾಚರಣೆಯು ದೇಶದ ವಿವಿಧ ಭಾಗಗಳಿಗೆ ವಿಸ್ತರಿಸಿದೆ. ಪ್ರಕರಣದ ಅಂತರರಾಷ್ಟ್ರೀಯ ಮತ್ತು ಅಂತರ್‌ರಾಜ್ಯ ಸಂಪರ್ಕಗಳನ್ನು ಮತ್ತು ಅದರ ಸಂಕೀರ್ಣತೆಯನ್ನು ಗುರುತಿಸಿ ಎನ್‌ಐಎ ಔಪಚಾರಿಕವಾಗಿ ಅಕ್ಟೋಬರ್ 6ರಂದು ತನಿಖೆಯ ಜವಾಬ್ದಾರಿ ವಹಿಸಿಕೊಂಡಿತ್ತು. ಅಕ್ರಮ ಮಾನವ ಕಳ್ಳಸಾಗಣೆ ಜಾಲದ ವಿವಿಧ ಘಟಕಗಳು ತಮಿಳುನಾಡು, ಕರ್ನಾಟಕ, ರಾಜಸ್ಥಾನ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ತನಿಖೆ ಮೂಲಕ ತಿಳಿದು ಬಂದಿತ್ತು ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದ ತನಿಖೆ ಎನ್ಐಎ ಹೆಗಲಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.