ETV Bharat / bharat

ಬೆಳ್ಳಂಬೆಳಗ್ಗೆ ಆರು ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

ಇಂದು ಬೆಳಗ್ಗೆ ದೇಶದ ಆರು ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ
nia
author img

By

Published : May 17, 2023, 9:16 AM IST

ನವದೆಹಲಿ: ಭಯೋತ್ಪಾದಕರು, ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ದರೋಡೆಕೋರರ ಜೊತೆಗಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಹರಿಯಾಣ, ಪಂಜಾಬ್, ರಾಜಸ್ಥಾನ, ಯುಪಿ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶೋಧ ಕಾರ್ಯ ತೀವ್ರಗೊಳಿಸಿದೆ.

ಬೆಳಗ್ಗೆ ಭಯೋತ್ಪಾದನೆ ನಿಧಿ ಪ್ರಕರಣ (ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳು) ತನಿಖೆಯ ಭಾಗವಾಗಿ ಪಂಜಾಬ್‌ನ ಮೋಗಾ ಮತ್ತು ಬಟಿಂಡಾದಲ್ಲಿ ಅಧಿಕಾರಿಗಳು ದಾಳಿ ನಡೆಸಿದೆ. ಹರಿಯಾಣದ ಹಲವೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಪಂಜಾಬ್​ ಗಡಿ ಜಿಲ್ಲೆಯ ಮೂರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳನ್ನು ಶೋಧಿಸುತ್ತಿದೆ. ಮುಡ್ಕಿ, ತಲವಂಡಿ ಮತ್ತು ಫಿರೋಜ್‌ಪುರದಲ್ಲಿ ಮೂವರ ಮನೆಗಳ ಮೇಲೆ ಎನ್‌ಐಎ ತಂಡ ತೆರಳಿದೆ ಎಂದು ತಿಳಿದುಬಂದಿದೆ. ಇದಲ್ಲದೇ, ಬಟಿಂಡಾದಲ್ಲಿಯೂ ಪರಿಶೀಲನೆ ನಡೆಸಿದ್ದು, ಮನೆಗಳ ಒಳಗೆ ಮತ್ತು ಹೊರ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಕ್ರಿಮಿನಲ್ ಕೇಸ್​ ಹೊಂದಿರುವವರ ಮನೆಗಳ ಎನ್‌ಐಎ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

  • #WATCH | NIA is conducting searches at more than 100 locations in six states-Haryana, Punjab, Rajasthan, UP, Uttarakhand and MP in terror-narcotics smugglers-gangsters nexus cases.

    (Visuals from Punjab's Bathinda) pic.twitter.com/mFgisHNcGo

    — ANI (@ANI) May 17, 2023 " class="align-text-top noRightClick twitterSection" data=" ">

ಕಳೆದ ಎರಡು ದಿನಗಳ ಹಿಂದಷ್ಟೇ (ಮೇ. 15) ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಪಾಕಿಸ್ತಾನಿ ಕಮಾಂಡರ್‌ಗಳು ಅಥವಾ ಹ್ಯಾಂಡ್ಲರ್‌ಗಳ ಆದೇಶದ ಮೇರೆಗೆ ವಿವಿಧ ನಕಲಿ ಹೆಸರುಗಳ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಇದಾಗಿತ್ತು.

ಇದನ್ನೂ ಓದಿ : ನಿಷೇಧಿತ ಪಿಎಫ್‌ಐ ಪ್ರಕರಣ: ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಎನ್‌ಐಎ ಶೋಧ

ಇದೇ ತಿಂಗಳ 9 ನೇ ತಾರೀಖಿನಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಪಿತೂರಿ ಕೇಸ್​ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಏಳು ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸಿತ್ತು. ಜಮ್ಮುವಿನ ಅನಂತ್ ನಾಗ್ ಜಿಲ್ಲೆಯ ನಾಲ್ಕು ಕಡೆಗಳಲ್ಲಿ, ಶೋಪಿಯಾನ್ ಜಿಲ್ಲೆಯ ಮೂರು ಕಡೆಗಳಲ್ಲಿ, ಬುದ್ಗಾಮ್, ಶ್ರೀನಗರ ಮತ್ತು ಪೂಂಚ್ ಜಿಲ್ಲೆಗಳ ತಲಾ ಎರಡು ಕಡೆ ಹಾಗೂ ಬಾರಾಮುಲ್ಲಾ, ರಜೌರಿ ಜಿಲ್ಲೆಗಳ ತಲಾ ಒಂದು ಕಡೆಗಳಲ್ಲಿ ಎನ್​ಐಎ ಶೋಧ ನಡೆಸಿತ್ತು.

ಇದನ್ನೂ ಓದಿ : ಭಯೋತ್ಪಾದಕರಿಗೆ ಧನ ಸಹಾಯ: ಕಾಶ್ಮೀರದ ಹಲವೆಡೆ ಎನ್​ಐಎ ದಾಳಿ

ಇದೇ ದಿನದಂದು ತಮಿಳುನಾಡು ರಾಜ್ಯದ ತಿರುವೊಟಿಯೂರ್ ತಂಗಳ್ ನ್ಯೂ ಕಾಲೋನಿ ಪ್ರದೇಶದ ಪಿಎಫ್‌ಐ ಕಾರ್ಯಕರ್ತ ಅಬ್ದುಲ್ ರಜಾಕ್ ಎಂಬವರ ಮನೆ ಮೇಲೆ ಸಹ ದಾಳಿ ನಡೆಸಿತ್ತು. ಥೆನಿ, ಮಧುರೈ ಮತ್ತು ದಿಂಡಿಗಲ್ ಸೇರಿದಂತೆ ಎಂಟು ಸ್ಥಳಗಳಲ್ಲಿ ಶೋಧ ಮಾಡಲಾಗಿತ್ತು. ಪಿಎಫ್‌ಐ ಅನ್ನು ಗೃಹ ವ್ಯವಹಾರಗಳ ಸಚಿವಾಲಯ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಸೆಪ್ಟೆಂಬರ್ 28, 2022 ರಂದು ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನ ನಿಷೇಧಿತ ಸಂಘಟನೆ ನಡೆಸುತ್ತಿದೆ ಎಂದು ಎನ್‌ಐಎ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.