ETV Bharat / bharat

ಸಿಖ್ ಫಾರ್​ ಜಸ್ಟೀಸ್ ಪ್ರಕರಣ: 10 ಖಲಿಸ್ತಾನಿ ಉಗ್ರರ ವಿರುದ್ಧ ಚಾರ್ಜ್ ಶೀಟ್​ ಸಲ್ಲಿಸಿದ ಎನ್​ಐಎ - ಸಿಖ್ ಫಾರ್​ ಜಸ್ಟೀಸ್ ಪ್ರಕರಣ

ಪಂಜಾಬ್ ಅ​ನ್ನು ಖಲಿಸ್ತಾನ್​ ದೇಶವಾಗಿ ಪ್ರತ್ಯೇಕಿಸಬೇಕೆಂದು ಆಗ್ರಹಿಸಿ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಪ್ರೇರಿತ ಸಿಖ್​ ಫಾರ್​ ಜಸ್ಟೀಸ್ (ಎಸ್​ಎಫ್​ಜೆ) ಸಂಘಟನೆ ರೆಫೆರೆಂಡಮ್ -2020 ಅಭಿಯಾನವನ್ನು ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ನಡೆಸಿದ್ದವು. ಈ ವೇಳೆ ಪಂಜಾಬ್​ನಲ್ಲಿ ಗಲಭೆ ನಡೆದಿತ್ತು.

NIA Files Chargesheet against Khalistani Terrorists
ಖಲಿಸ್ತಾನಿ ಉಗ್ರರ ವಿರುದ್ಧ ಚಾರ್ಜ್ ಶೀಟ್​ ಸಲ್ಲಿಸಿದ ಎನ್​ಐಎ
author img

By

Published : Dec 18, 2020, 8:34 PM IST

ನವದೆಹಲಿ : ಪಂಜಾಬ್​ನಲ್ಲಿ 2017-18 ರಲ್ಲಿ ನಡೆದ ಖಲಿಸ್ತಾನ್ ಹೋರಾಟದ ಸಮಯದಲ್ಲಿ ನಡೆದ ಗಲಭೆಗೆ, ಸಂಬಂಧಿಸಿದಂತೆ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಸೇರಿದಂತೆ 10 ಆರೋಪಿಗಳ ವಿರುದ್ಧ ಪಂಜಾಬ್​ನ ಮೊಹಾಲಿಯ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.

ಪಂಜಾಬ್​ನ್ನು ಖಲಿಸ್ತಾನ್​ ದೇಶವಾಗಿ ಪ್ರತ್ಯೇಕಿಸಬೇಕು ಎಂದು ಆಗ್ರಹಿಸಿ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಪ್ರೇರಿತ ಸಿಖ್​ ಫಾರ್​ ಜಸ್ಟೀಸ್ (ಎಸ್​ಎಫ್​ಜೆ) ಸಂಘಟನೆ ರೆಫೆರೆಂಡಮ್ -2020 ಅಭಿಯಾನವನ್ನು ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ನಡೆಸಿದ್ದವು. ಈ ವೇಳೆ, ಪಂಜಾಬ್​ನಲ್ಲಿ ಗಲಭೆ ನಡೆದಿತ್ತು.

ಇದನ್ನೂ ಓದಿ : ಖಲಿಸ್ತಾನ್​ ಪ್ರತ್ಯೇಕತಾವಾದಿ ಚಳವಳಿ ಉತ್ತೇಜಿಸಲು ಪ್ಲಾನ್​.. ಮುಂದುವರಿದ ಪಾಕ್​ ನರಿ ಬುದ್ಧಿ

ಗಲಭೆಯ ಹಿಂದೆ ಖಲಿಸ್ತಾನ್ ಉಗ್ರ ಸಂಘಟನೆ ಕೈವಾಡವಿದ್ದರಿಂದ ಮತ್ತು ವಿದೇಶದಿಂದ ಹಣಕಾಸಿನ ನೆರವು ನೀಡಿ ಸಿಖ್ ಯುವಕರಿಂದ ಗಲಭೆ ಸೃಷ್ಟಿಸಿದ್ದರಿಂದ ಎನ್​ಐಎ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಇದೀಗ ನ್ಯಾಯಾಲಯಕ್ಕೆ ಚಾರ್ಜ್​ ಶೀಟ್ ಸಲ್ಲಿಸಿದೆ. ಜಾರ್ಜ್ ಶೀಟ್​ನಲ್ಲಿ ಗುರ್ಪತ್ವಂತ್ ಸಿಂಗ್ ಪನ್ನುನ್, ಪರ್ಗತ್ ಸಿಂಗ್, ಸುಖರಾಜ್ ಸಿಂಗ್, ಬಿಕ್ರಂಜಿತ್ ಸಿಂಗ್, ಮಂಜೀತ್ ಸಿಂಗ್, ಜತಿಂದರ್ ಸಿಂಗ್, ಗುರ್ವಿಂದರ್ ಸಿಂಗ್, ಹರ್ಪ್ರೀತ್ ಸಿಂಗ್, ಕುಲದೀಪ್ ಸಿಂಗ್ , ಹರ್ಮೀತ್ ಸಿಂಗ್​ನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

ಪ್ರತ್ಯೇಕತಾವಾದಿ ಸಂಘಟನೆಯಾದ ಎಸ್‌ಎಫ್‌ಜೆ ಫೇಸ್‌ಬುಕ್, ಟ್ವಿಟರ್, ವಾಟ್ಸ್​ಆ್ಯಪ್​, ಯೂಟ್ಯೂಬ್ ಚಾನೆಲ್‌ಗಳು ಮತ್ತು ಹಲವಾರು ವೆಬ್‌ಸೈಟ್‌ಗಳ ಮೂಲಕ ದೇಶ ವಿರೋಧಿ ಸಂದೇಶಗಳನ್ನು ಪ್ರಚಾರ ಮಾಡಿ ಭಾರತದ ಶಾಂತಿ, ಸಾಮರಸ್ಯ ಭಂಗಗೊಳಿಸಲು ಪ್ರಯತ್ನಿಸಿದೆ ಎಂದು ದೂರಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.