ETV Bharat / bharat

ಮಾವೋವಾದಿಗಳೊಂದಿಗೆ ನಂಟು ಆರೋಪ.. ಏಳು ಮಂದಿ ವಿರುದ್ಧ ಎನ್​​ಐಎ ಚಾರ್ಜ್ ಶೀಟ್​ - ಎನ್​​ಐಎ ಚಾರ್ಜ್ ಶೀಟ್​

ಸಿಪಿಐ (ಮಾವೋವಾದಿ) ಸಂಘಟನೆಯ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ವಿವಿಧ ಸಂಘಟನೆಗಳ ಏಳು ಜನರ ವಿರುದ್ಧ ಎನ್​ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

NIA charge sheets 7 CPI (Maoist) operatives
ಎನ್​​ಐಎ ಚಾರ್ಜ್ ಶೀಟ್​
author img

By

Published : May 22, 2021, 11:10 AM IST

Updated : May 22, 2021, 11:47 AM IST

ವಿಶಾಖಪಟ್ಟಣ : ಸಿಪಿಐ (ಮಾವೋವಾದಿ) ಸಂಘಟನೆಯನ್ನು ಬೆಂಬಲಿಸುತ್ತಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ 7 ಜನರ ವಿರುದ್ಧ ಎನ್​ಐಎ ಚಾರ್ಜ್​ ಶೀಟ್ ದಾಖಲಿಸಿದೆ.

ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯರಾದ ಪಂಗಿ ನಾಗಣ್ಣ, ಅಕ್ಕಿರಾಜು ಹರಿಗೋಪಾಲ್, ಅಮರುಲ ಬಂಧು ಮಿತ್ರುಲ ಸಂಘಂ (ಎಬಿಎಂಎಸ್​) ನ ಬೊಪ್ಪುಡಿ ಅಂಜಮ್ಮ, ಚೈತ್ಯನ್ಯ ಮಹಿಳಾ ಸಂಘಂ ( ಸಿಎಂಎಸ್ ನ ರಿಯಲ್ ರಾಜೇಶ್ವರಿ, ವಿರಾಸಂನ ಮನುಕೊಂಡ ಶ್ರೀನಿವಾಸ್ ರಾವ್ , ಪ್ರಗತಿಶೀಲ ಕಾರ್ಮಿಕ ಸಮಖ್ಯ (ಪಿಕೆಎಸ್​) ನ ಅಂದುಲುರಿ ಅನ್ನಪೂರ್ಣ ಮತ್ತು ಜಂಗಲ ಕೋಟೇಶ್ವರ್​ ರಾವ್ ವಿರುದ್ಧ ಚಾರ್ಜ್​ಶೀರ್ಟ್ ಸಲ್ಲಿಕೆಯಾಗಿದೆ.

ಆಂಧ್ರ ಪ್ರದೇಶ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐ (ಮಾವೋವಾದಿ )ನ ಕಾನೂನು ಬಾಹಿರ ಚಟುವಟಿಕೆಗಳಿಗೆ ಇವರು ಬೆಂಬಲ ನೀಡುತ್ತಿದ್ದರು ಎಂದು ಎನ್ಐಎ ತನ್ನ ಚಾರ್ಜ್ ಶೀಟ್​​ನಲ್ಲಿ ಆರೋಪಿಸಿದೆ. ಆರೋಪಿಗಳ ವಿರುದ್ಧ ಯುಎ (ಪಿ) ನ ಸ್ಫೋಟಕ ಪದಾರ್ಥಗಳ ಕಾಯ್ದೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಓದಿ : ಕಾಳಸಂತೆಯಲ್ಲಿ ಆಕ್ಸಿಜನ್​ ಸಿಲಿಂಡರ್ ಮಾರಾಟ: ಯುವಕನ ಬಂಧನ

ಕಳೆದ ವರ್ಷ ನವೆಂಬರ್‌ನಲ್ಲಿ ವಿಶಾಖಪಟ್ಟಣಂನಲ್ಲಿ ಮಾವೋವಾದಿ ಸಂಘಟನೆಗೆ ಸೇರಿದ ಕರಪತ್ರಗಳನ್ನು ಸಾಗಿಸುವಾಗ ನಾಗಣ್ಣನನ್ನು ಮಂಚಿಂಗ್‌ಪುಟ್ ಪೊಲೀಸರು ತಡೆದಿದ್ದರು. ಆತನಿಂದ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಾವೋವಾದಿಗಳಿಗೆ ನೀಡಲು ಈ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ಎಬಿಎಂಎಸ್, ಸಿಎಮ್ಎಸ್, ಪಿಕೆಎಸ್, ವಿರಾಸಮ್ ಮತ್ತು ಪಿಕೆಎಂ ಫ್ರಂಟ್ ಸಂಘಟನೆಗಳು ಸಿಪಿಐ (ಮಾವೋವಾದಿ) ಸಂಘಟನೆಯ ಜೊತೆ ಸಂಬಂಧ ಹೊಂದಿವೆ ಮತ್ತು ಅದಕ್ಕೆ ಬೆಂಬಲ ನೀಡುತ್ತಿದೆ ಎಂದು ಎನ್​ಐಎ ಅಧಿಕಾರಿಗಳು ಹೇಳಿದ್ದಾರೆ.

Last Updated : May 22, 2021, 11:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.